fbpx
ಸಮಾಚಾರ

ಮಗನಿಗೆ ಹಾಲು ಕರೆಯುವುದನ್ನು ಹೇಳಿಕೊಟ್ಟರು ದರ್ಶನ್- ವಿಡಿಯೋ ವೈರಲ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಮಗ ವಿನೀಶ್‍ಗೆ ಹಸುಹಾಲು ಕರೆಯುವುದನ್ನು ಹೇಳಿಕೊಟ್ಟಿದ್ದು ಮೈಸೂರಿನ ಫಾರ್ಮ್‍ಹೌಸ್‍ನಲ್ಲಿ ದರ್ಶನ್ ಮತ್ತು ವಿನೀಷ್ ಹಸುಹಾಲು ಕರೆಯುತ್ತಿರುವ ವಿಡಿಯೋವನ್ನು ಅವರ ಫ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

 

 

ಲೋಕಸಭಾ ಚುನಾವಣೆ ಮುಗಿಸಿ ಎಲ್ಲರೂ ವಿಶ್ರಾಂತಿಯಲ್ಲಿದ್ದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್​​​ ಮಾತ್ರ ರೈತನಾಗಿ ಕೆಲಸ ಮಾಡುತ್ತಿದ್ದಾರೆ. ಸೋಮವಾರ ದರ್ಶನ್​​ ಮತ್ತು ವಿನೀಶ್​​​​​​ ತಮ್ಮ ತೂಗುದೀಪ ಫಾರ್ಮ್ ಹೌಸ್​​ನಲ್ಲಿ ತಾವು ಸಾಕುತ್ತಿರುವ ಹಸುವಿನಿಂದ ಒಟ್ಟಿಗೆ ಹಾಲು ಕರೆದಿದ್ದಾರೆ. ಈಗಾಗಲೇ ರೈತನಾಗಿರುವ ದರ್ಶನ್​​ ಮಗನಿಗೂ ರೈತನ ಕೆಲಸಗಳನ್ನು ಹೇಳಿಕೊಡುತ್ತಿದ್ದಾರೆ.

ಈ ಹಿಂದೆ ಸಿಎಂ ಕುಮಾರಸ್ವಾಮಿ, ದರ್ಶನ್​ ಅವರಿಗೆ ರೈತರ ಕಷ್ಟಗಳು ಏನು ಅನ್ನೋದು ಗೊತ್ತಿಲ್ಲ ಅಂತಾ ಟಾಂಗ್ ಕೊಟ್ಟಿದ್ರು. ಅಲ್ಲದೇ ಕೆಲ ಜೆಡಿಎಸ್ ನಾಯಕರು ಕೂಡ ದರ್ಶನ್ ಹಸುವಿನ ಹಾಲು ಕರೆದು ತೋರಿಸಲಿ ಅಂತಾ ಸವಾಲ್ ಹಾಕಿದ್ರು. ಅದರಂತೆ ಇದೀಗ ದರ್ಶನ್ ಹಾಗೂ ಪುತ್ರ ವಿನೀಶ್ ಇಬ್ಬರು ಜೊತೆಯಲ್ಲೇ ಕುಳಿತು ಹಾಲು ಕರೆದಿದ್ದಾರೆ. ದರ್ಶನ್ ಅವರು ಮಗನ ಜತೆ ಹಾಲು ಕರೆದಿರುವುದಕ್ಕೆ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರ ವಿರುದ್ಧ ಮಾತನಾಡಿದವರಿಗೆ ಟಾಂಗ್​ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top