fbpx
ಸಮಾಚಾರ

ದರ್ಶನ್ ಮನೆಗೆ ಬಂತು ಮತ್ತೊಂದು ಅತ್ಯಂತ ದುಬಾರಿ ಕಾರು.

ಫಾರ್ಮ್ ಹೌಸ್ ತುಂಬಾ ಕುದುರೆಗಳನ್ನ ಸಾಕಿಕೊಂಡು, ಹಸುಗಳ ಆರೈಕೆ ಮಾಡುತ್ತಾ ಪ್ರಾಣಿಪ್ರಿಯ ಅಂತಲೇ ಹೆಸರಾಗಿರುವವರು ಛಾಲೆಂಜಿಂಗ್ ಸ್ಟಾರ್ ದರ್ಶನ್. ಅವರಿಗೆ ಪ್ರಾಣಿಗಳ ಮೇಲೆ ಎಷ್ಟು ಪ್ರೀತಿ ಇದೆಯೋ ಅಷ್ಟೇ ಕ್ರೇಜ್ ಹೊಸಾ ಮಾಡೆಲ್‌ನ ಹೈಟೆಕ್ ಕಾರುಗಳ ಮೇಲೂ ಇದೆ. ದರ್ಶನ್ ಅವರ ಕಾರ್ ಕ್ರೇಜ್‌ನ ಬಗೆಗೂ ಹಲವಾರು ದಂತಕಥೆಗಳೇ ಇವೆ. ದರ್ಶನ್ ವರ್ಷದ ಹಿಂದಷ್ಟೇ ಆಡಿ ಆರ್-8 ಎಂಬ ಹೊಚ್ಚ ಹೊಸಾ ಕಾರನ್ನು ಖರೀದಿಸೋ ಮೂಲಕ ಕ್ರೇಜ್ ಹುಟ್ಟು ಹಾಕಿದ್ದರು. ಇತ್ತೀಚಿಗೆ ಇಡೀ ಭಾರತದಲ್ಲಿ ಕೆಲವೇ ಜನರ ಬಳಿಯಿರುವ ಲ್ಯಾಂಬೊರ್ಗಿನಿ ಕಾರನ್ನು ಖರೀಧಿಸಿ ಎಲ್ಲರು ಬೆರಗಾಗುವಂತೆ ಮಾಡಿದ್ದರು.

ಲಂಬೋರ್ಗಿನಿ ಉರುಸ್
ಲಂಬೊರ್ಗಿನ್ ಕಾರಿನ ಬಗ್ಗೆ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿರುವಾಗಲೇ ಇದೀಗ ಅವರ ಹೊಸಾ ಕಾರುಗಳ ಲೋಕಕ್ಕೆ ಹೊಸಾ ಮಾಡೆಲ್ ಕಾರೊಂದರ ಆಗಮನವಾಗಿದೆ! ದರ್ಶನ್ ಬಳಿ ಈಗಾಗಲೇ ಲಂಬೋರ್ಗಿನಿ ಕಾರು ಒಂದಿದೆ. ಈಗ ಇನ್ನೊಂದು ಲಂಬೋರ್ಗಿನಿ ಕಾರನ್ನ ಖರೀದಿಸಿದ್ದಾರೆ. ಹೌದು, ಬಿಳಿ ಬಣ್ಣದ ಲಂಬೋರ್ಗಿನಿ ಅವೆಂಟೆಡರ್ ಇಟ್ಟುಕೊಂಡಿದ್ದ ದರ್ಶನ್ ಈಗ ಲಂಬೋರ್ಗಿನಿ ಉರುಸ್ ಕಾರು ಖರೀದಿ ಮಾಡಿದ್ದಾರೆ.

 

 

ಲಂಬೋರ್ಗಿನಿ ಅವೆಂಟೆಡರ್ 5 ಕೋಟಿ ಬೆಲೆ ಹೊಂದಿದೆ. ಈಗ ದರ್ಶನ್ ಖರೀದಿ ಮಾಡಿರುವ ಕಾರಿನ ಬೆಲೆ ಸುಮಾರು 3 ಕೋಟಿ. ಹಳದಿ ಬಣ್ಣ ಕಾರು ಈಗ ದರ್ಶನ್ ಕಾರುಗಳ ಸಾಮ್ರಾಜ್ಯಕ್ಕೆ ಹೊಸ ಸೇರ್ಪಡೆಯಾಗಿದೆ. ಯಾವುದೇ ಕಾರು ಖರೀದಿಸಿರೂ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪೂಜೆ ಮಾಡಿಸುವ ದರ್ಶನ್, ಹೊಸ ಕಾರಿಗೂ ಪೂಜೆ ಮಾಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top