fbpx
ಸಮಾಚಾರ

ಕ್ರಿಕೆಟ್ ಲೋಕದ ಫೀಲ್ಡಿಂಗ್ ದಂತಕತೆ ಜಾಂಟಿ ರೋಡ್ಸ್ ತಮ್ಮ ಮಗಳಿಗೆ ‘ಇಂಡಿಯಾ’ ಎಂದು ಹೆಸರಿಟ್ಟಿದ್ದು ಈ ಕಾರಣಕ್ಕಂತೆ.

ಐಪಿಎಲ್ ವಿಶ್ವಾದ್ಯಂತ ಖ್ಯಾತ ಕ್ರಿಕೆಟಿಗರನ್ನ ಭಾರತದ ಜೊತೆ ಸಂಬಂದ ಬೆಸೆಯುವಂತೆ ಮಾಡಿದೆ. ಐಪಿಎಲ್​​​ ಆಡಲು ಬಂದ ಹಲವು ವಿದೇಶಿ ಆಟಗಾರರು ಭಾರತದ ಸಂಸ್ಕೃತಿ, ವಿವಿಧತೆಯಲ್ಲಿ ಏಕತೆ, ಧಾರ್ಮಿಕತೆಯನ್ನ ಮೆಚ್ಚಿಕೊಂಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಎಂಬಂತೆ ದಕ್ಷಿಣ ಆಫ್ರಿಕಾ ಮಾಜಿ ಸ್ಟಾರ್ ಪ್ಲೇಯರ್ ಜಾಂಟಿ ರೋಡ್ಸ್, ತನ್ನ ಮಗಳಿಗೆ ಇಂಡಿಯಾ ಎಂದು ಹೆಸರಿಟ್ಟಿದರು.

2015ರಲ್ಲಿ ಭಾರತ ಪ್ರವಾಸದಲ್ಲಿರುವಾಗ ಜಾಂಟಿ ಪತ್ನಿ ಮೆಲಾನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದ್ದರಿಂದ ತಮ್ಮ ಮಗಳಿಗೆ ‘ಇಂಡಿಯಾ’ ಎಂಬುದಾಗಿ ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲ ಭಾರತದ ಮೇಲೆ ಅತಿಯಾದ ಪ್ರೇಮವಿರಲು ಮೂಲ ಕಾರಣ, ಇಲ್ಲಿಯ ವೈವಿಧ್ಯತೆ, ಸಂಸ್ಕೃತಿ ಹಾಗೂ ಪರಂಪರೆ ಎಂದು ಹೇಳಿದ್ದಾರೆ.

ಜಾಂಟಿ ರೋಡ್ಸ್ ಅವರು ತಮ್ಮ ಮಗಳಿಗೆ ‘ಇಂಡಿಯಾ’ ಹೆಸರನ್ನೇ ಯಾಕೆ ಆಯ್ಕೆ ಮಾಡಿಕೊಂಡರು ಎಂದು ಅವರು ವಿವರಿಸಿದ್ದಾರೆ. “ನಾನು ಭಾರತದಲ್ಲಿ ಸಾಕಷ್ಟು ಸಮಯವನ್ನು ಕಳೆದಿದ್ದೇನೆ, ಭಾರತದ ಬಗ್ಗೆ ನಾನು ಪ್ರೀತಿಸುವ ವಿಷಯವೆಂದರೆ ಅದು ಸಂಸ್ಕೃತಿ, ಪರಂಪರೆ ಮತ್ತು ಇದು ಬಹಳ ಆಧ್ಯಾತ್ಮಿಕ ರಾಷ್ಟ್ರ, ಬಹಳ ಮುಂದಕ್ಕೆ ಚಿಂತನೆ ಮಾಡುವ ದೇಶ. ಜೀವನದ ಉತ್ತಮ ಸಮತೋಲನವನ್ನು ಹೊಂದಿವೆ. ಇಂಡಿಯಾ ಎಂದು ಹೆಸರಿಡುವುದರ ಮೂಲಕ ಆಕೆ ಒಳ್ಳೆಯ ಸಂಸ್ಕೃತಿ ಮತ್ತು ಜೀವನದಲ್ಲಿ ಸಮತೋಲನವನ್ನು ಹೊಂದಲಿದ್ದಾಳೆ.” ಎಂದು ರೋಡ್ಸ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top