fbpx
ಸಮಾಚಾರ

ಸಾಲಮನ್ನಾ ಹೇಳಿಕೆ: ದರ್ಶನ್ ವಿರುದ್ಧ ರೈತ ಸಂಘ ಕಿಡಿ, ಪ್ರತಿಭಟನೆಗೆ ನಿರ್ಧಾರ.

ರೈತರ ಸಾಲ ಮನ್ನಾ ಮಾಡುವ ಬದಲು ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು ಎನ್ನುವ ದರ್ಶನ್ ಹೇಳಿಕೆ ಹಿನ್ನೆಲೆ ಮಂಡ್ಯ ಸೇರಿದಂತೆ ರಾಜ್ಯ ರೈತ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ. ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದೆ.

ನಟ ದರ್ಶನ್​ ಯಾವ ಸಂದರ್ಭದಲ್ಲಿ ಯಾಕೆ ಈ ರೀತಿ ಮಾತನಾಡಿದ್ದಾರೆ ಗೊತ್ತಿಲ್ಲ. ಬ್ಯಾಂಕ್​ಗಳಲ್ಲಿ ರೈತರು ಮಾಡಿದ ಸಾಲ ಬೃಹತ್​ ಆಕಾರವಾಗಿ ಬೆಳೆದಿದೆ. ಆ ಸಾಲವನ್ನು ತೀರಿಸುವುದು ಯಾರು ಎಂಬ ಚಿಂತೆಯಲ್ಲಿ ರೈತರಿದ್ದಾರೆ. ಇದಕ್ಕಾಗಿ ಸಾಲಮನ್ನಾದಂತಹ ಯೋಜನೆಗಳಿಗೆ ಸರ್ಕಾರ ಮುಂದಾಬೇಕಿದೆ. ಬೆಂಬಲ ಬೆಲೆ ಎಂಬುದು ಅವೈಜ್ಞಾನಿಕ ಪದ. ಈ ಆಲೋಚನೆಯೇ ತಪ್ಪು. ಯೋಗ್ಯವಾದ ಬೆಲೆ ಕೊಡಬೇಕು. ಈ ಬೆಲೆ ಕೊಟ್ಟರೆ ಸಾಲಮನ್ನಾ ಮಾಡಿ ಎಂದು ಕೇಳುವುದಿಲ್ಲ. ಬರಗಾಲ ಬಂದು, ಬೆಳೆ ನಷ್ಟದಂತಹ ಪ್ರಮಾದಗಳಿಂದಾಗಿ ರೈತರು ಮಾಡಿದ ಸಾಲ ಬೃಹತ್​ ಆಕಾರವಾಗಿ ಬೆಳೆದಿದೆ. ಈ ಸಾಲದಿಂದ ಸಾವಿನ ದವಡೆಯಲ್ಲಿರುವ ರೈತ ಸಾಲದಲ್ಲೇ ಬದುಕಬೇಕು ಎಂದರೇ ಹೇಗೆ. ರೈತರನ್ನು ಉಳಿಸಲು ಸರ್ಕಾರ ಮುಂದಾಗಬೇಕು. ಹಾಗೇ ಆಗಬೇಕು ಎಂದರೇ ಸಾಲವನ್ನು ತೀರಿಸಲು ಸರ್ಕಾರಗಳು ಮುಂದಾಗಬೇಕು.”

,”ಇಂದು ರೈತರು ನೇಣು ಬಿಗಿದುಕೊಂಡು ಜೀವ ಬಿಡುತ್ತಿದ್ದಾರೆ. ದರ್ಶನ್ ಅವರಿಗೆ ಆತ್ಮಹತ್ಯೆಗೆ ಶರಣಾಗುತ್ತಿರುವ ಕಷ್ಟ ಗೊತ್ತಿಲ್ಲ. ತಿಳುವಳಿಕೆ ಇಲ್ಲದೆ ದರ್ಶನ್ ಈ ರೀತಿ ಮಾತನಾಡಿದ್ದಾರೆ. ರೈತರ ಬಗ್ಗೆ ವಿಷಯಗಳು ಗೊತ್ತಿಲ್ಲದಿದ್ದರೆ, ನಮ್ಮೊಂದಿಗೆ ಚರ್ಚಿಸಿ ತಮ್ಮ ಪ್ರತಿಕ್ರಿಯೆ ನೀಡಬೇಕು. ರಾಜಕೀಯ ಭರಾಟೆಯಲ್ಲಿ ತಮಗೆ ತೋಚಿದ್ದನ್ನು ಮಾತನಾಡಿರಬಹುದು ಮುಂದಿನ ದಿನಗಳಲ್ಲಿ ತಮ್ಮ ಹೇಳಿಕೆಯನ್ನು ಸರಿ ಮಾಡಿಕೊಳ್ಳಬೇಕು ಎಂದು ದರ್ಶನ್ ವಿರುದ್ಧ ಕಿಡಿಕಾರಿದ್ದಾರೆ.

ದರ್ಶನ್ ಹೇಳಿದ್ದೇನು?
ಇತ್ತೀಚೆಗೆ ಕಾಲೇಜು​ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಟ ದರ್ಶನ್​, ಸರ್ಕಾರ ಸಾಲಮನ್ನಾ ಮಾಡುವ ಬದಲು, ಬೆಳೆಗಳಿಗೆ ಬೆಂಬಲ ಬೆಲೆ ನೀಡಿದರೆ ರೈತರೇ ಸಾಲ ತೀರಿಸಲು ಮುಂದಾಗುತ್ತಾರೆ ಎಂದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top