fbpx
ಸಮಾಚಾರ

ಔಟಾದ ಕೋಪದಲ್ಲಿ ಬ್ಯಾಟ್ ನಿಂದ ಬೇಲ್ಸ್ ಹಾರಿಸಿ ಭಾರಿ ದಂಡ ತೆತ್ತ ರೋಹಿತ್ ಶರ್ಮ.

ಕೋಲ್ಕೊತಾ ನೈಟ್‌ ರೈಡರ್ಸ್‌ ವಿರುದ್ಧ ಭಾನುವಾರ ನಡೆದ ಪಂದ್ಯದ ವೇಳೆ ನಿಯಮ ಉಲ್ಲಂಘನೆ ಮಾಡಿದ ಮುಂಬಯಿ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾಗೆ ಅವರ ಪಂದ್ಯದ ಸಂಭಾವನೆಯಲ್ಲಿ ಶೇ.15ರಷ್ಟನ್ನು ದಂಡವಾಗಿ ವಿಧಿಲಸಲಾಗಿದೆ.. ರೋಹಿತ್ ಲೆವೆಲ್ 1, ಐಪಿಎಲ್ ಕೋಡ್ ಆಫ್ ಕಂಡಕ್ಟ್ 2.2 ನಿಯಮ ಉಲ್ಲಂಘಿಸಿದ್ದಾರೆ. ಸೋಲಿನ ಬೆನ್ನಲ್ಲೇ ನಿಯಮ ಉಲ್ಲಂಘನೆ ನಾಯಕ ರೋಹಿತ್ ತಲೆನೋವು ಹೆಚ್ಚಿಸಿದೆ.

 

 

ಪಂದ್ಯದ 4ನೇ ಓವರಿನಲ್ಲಿ ಘಟನೆ ನಡೆದಿದ್ದು, 12 ರನ್ ಗಳಿಸಿದ್ದ ರೋಹಿತ್ ಶರ್ಮಾರನ್ನು ಕೆಕೆಆರ್ ಬೌಲರ್ ಹ್ಯಾರಿ ಗರ್ನಿ ಎಲ್‍ಬಿ ಬಲೆಗೆ ಕೆಡವಿದ್ದರು. ಆದರೆ ಈ ವೇಳೆ ಅಂಪೈರ್ ತೀರ್ಮಾನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ರೋಹಿತ್ ಡಿಆರ್ ಎಸ್ ಮನವಿ ಸಲ್ಲಿಸಿದ್ದರು. ಅಂಪೈರ್ ಪರವೇ ಡಿಆರ್ ಎಸ್ ತೀರ್ಪು ಬಂದ ಹಿನ್ನೆಲೆಯಲ್ಲಿ ರೋಹಿತ್ ಪೆವಿಲಿಯನ್ ನತ್ತ ನಡೆದರು. ಇದಕ್ಕೂ ಮುನ್ನ ಬೌಲರ್ ಬದಿ ಇದ್ದ ವಿಕೆಟ್‍ಗಳಿಗೆ ತಮ್ಮ ಬ್ಯಾಟ್ ತಾಗಿಸಿ ಬೇಲ್ಸ್ ಹಾರಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು.

ರೋಹಿತ್ ಶರ್ಮಾರ ಈ ನಡೆಯನ್ನು ಗಂಭೀರವಾಗಿ ಪರಿಗಣಿಸಿದ ಮ್ಯಾಚ್ ರೆಫ್ರಿ ಪಂದ್ಯದ ಸಂಭಾವನೆಯ ಶೇ.15 ರಷ್ಟರ ಮೊತ್ತವನ್ನು ದಂಡವಾಗಿ ವಿಧಿಸಿದ್ದಾರೆ. ಈ ಪಂದ್ಯದಲ್ಲಿ ಕೆಕೆಆರ್​​ ಅಮೋಘ ಪ್ರದರ್ಶನ ತೋರುವ ಮೂಲಕ ಮುಂಬೈ ಇಂಡಿಯನ್ಸ್​​ಗೆ 233 ಬೃಹತ್​​ ಮೊತ್ತದ ಗುರಿ ನೀಡಿತ್ತು. ಆದರೆ ನಂತರ ಬ್ಯಾಟಿಂಗ್​ ಮಾಡಿದ ಮುಂಬೈ ಏಳು ವಿಕೆಟ್​​ ಕಳೆದುಕೊಂಡು 34 ರನ್​​ಗಳಿಂದ ಸೋಲಿಗೆ ಶರಣಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top