fbpx
ಭವಿಷ್ಯ

ಏಪ್ರಿಲ್ 30- ಇಂದಿನ ಪಂಚಾಂಗ ಮತ್ತು ದಿನಭವಿಷ್ಯ

ಸ್ಥಳ- ಬೆಂಗಳೂರು.
ಮಂಗಳವಾರ, ಏಪ್ರಿಲ್ 30 2019
ಸೂರ್ಯೋದಯ : 6:00 am
ಸೂರ್ಯಾಸ್ತ: 6:33 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಚೈತ್ರ
ಪಕ್ಷ : ಕೃಷ್ಣಪಕ್ಷ
ತಿಥಿ :ದಶಮೀ 22:04
ನಕ್ಷತ್ರ :ಶತಭಿಷ ಪೂರ್ಣ ರಾತ್ರಿ
ಯೋಗ :ಶುಕ್ಲ 27:33
ಕರಣಂ: ವಾಣಿಜ 08:50 ವಿಷ್ಟಿ 22:04

ಅಭಿಜಿತ್ ಮುಹುರ್ತ:11:52 am – 12:41 pm
ಅಮೃತಕಾಲ : 12:10 am – 1:58 am

ರಾಹು ಕಾಲ:7:36 am – 9:10 am
ಗುಳಿಕ ಕಾಲ:1:50 pm – 3:23 pm
ಯಮಗಂಡ: 10:43 am – 12:17 pm

 

 

 

ಬಹು ನಿರೀಕ್ಷೆ ಇಟ್ಟುಕೊಂಡಿರುವ ನಿಮಗೆ ಆಶಾದಾಯಕ ವಾರ್ತೆ ಕೇಳಿಬರುವುದು. ನಿಮ್ಮ ಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆಯುವುದು. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ.

 

ಮನಸ್ಸಿನ ದುಗುಡಗಳು ಗದ್ದಲದ ಸಂತೆಯಲ್ಲಿ ಇದ್ದದ್ದೆ. ಆದರೆ ಇಂದು ಅಂತಹುದೇ ರಗಳೆಯಿಂದ ಹೊರಬರುವಿರಿ. ಅತ್ಯಂತ ಆತ್ಮೀಯ ಸ್ನೇಹಿತರ ಸಹಕಾರ ದೊರೆಯುವುದು. ಇದರಿಂದ ಜೀವನದಲ್ಲಿ ಹೊಸ ಉತ್ಸಾಹ ಮೂಡುವುದು.

 

ಪ್ರತಿಯೊಂದು ಕಾರ್ಯದಲ್ಲೂ ಅಡೆತಡೆ ಉಂಟಾಗುತ್ತಿದೆ ಎಂಬ ಭಾವನೆಯಿದ್ದಲ್ಲಿ ಮಾತಾ ದುರ್ಗಾದೇವಿಯನ್ನು ಪ್ರಾರ್ಥಿಸಿ. ಬಡವರಿಗೆ ಆಹಾರ ನೀಡಿ. ಪ್ರಯಾಣ ಕಾಲದಲ್ಲಿ ಸ್ವಲ್ಪ ಉದ್ದಿನಕಾಳುಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.

 

ಹಲಸಿನ ಹಣ್ಣನ್ನು ಸೂಜಿಯಿಂದ ಕತ್ತರಿಸಲು ಆಗುವುದಿಲ್ಲ. ಅದಕ್ಕೆ ಹರಿತವಾದ ಚಾಕು ಬೇಕಾಗುತ್ತದೆ. ಹಾಗಾಗಿ ನಿಮ್ಮ ವಿರೋಧಿಗಳನ್ನು ಎದುರಿಸಲು ಸೌಮ್ಯತೆ ಸಾಕಾಗುವುದಿಲ್ಲ. ನೀವು ಕೂಡಾ ಕೆಲವೊಮ್ಮೆ ರೋಷಾವೇಶ ವ್ಯಕ್ತಪಡಿಸಬೇಕಾಗುವುದು.

 

 

ಮೃಷ್ಟಾನ್ನ ಭೋಜನ ಸವಿಯುವ ಸಾಧ್ಯತೆ ಇದೆ ಅಥವಾ ಸುಂದರ ಪ್ರದೇಶಗಳ ವೀಕ್ಷ ಣೆಗಾಗಿ ಸಮಯವನ್ನು ಮೀಸಲಿಡುವಿರಿ. ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ಮನಸ್ಸಿಗೆ ಮುದ ನೀಡುವುದು. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ.

 

 

ನಿಮ್ಮ ಜತೆಗಾರರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಅತ್ಯುತ್ತಮ ಕ್ಷ ಣಗಳು ವ್ಯರ್ಥವಾಗದಿರುವಂತೆ ನೋಡಿಕೊಳ್ಳಿ. ಇನ್ನೊಬ್ಬರ ಮರ್ಜಿಗೆ ಒಳಗಾಗಿ ನಿಮ್ಮತನವನ್ನು ನೀವು ಬಿಟ್ಟುಕೊಡದಿರಿ. ಇದರಿಂದ ಮುಂದೆ ಒಳಿತಾಗುವುದು.

 

 

ಎಲ್ಲಾ ವಿಚಾರಗಳಲ್ಲಿಯೂ ವಿವೇಕದೊಂದಿಗೆ ಕಾರ್ಯ ಪೂರೈಸಿ. ಸಂಗಾತಿಯ ಸಲಹೆಯಿಂದ ಒಳಿತಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.

 

 

ಸದಾ ಕ್ರಿಯಾಶೀಲ ವ್ಯಕ್ತಿ ಆಗಿರುವ ನೀವು ವಿವಿಧ ರಂಗದಲ್ಲಿ ಮುಂಚೂಣಿಯಲ್ಲಿರುತ್ತೀರಿ. ಇದರಿಂದ ನಿಮ್ಮ ಮೇಲಧಿಕಾರಿಗಳು ನಿಮ್ಮ ಬಗ್ಗೆ ಗೌರವ ಪ್ರೀತಿ ತೋರುವರು.

 

ಜೀವನ ನಿಂತ ನೀರಾಗಿದೆ ಏನೇ ಮಾಡಿದರೂ ನೆಮ್ಮದಿ ಇಲ್ಲ ಎಂಬ ಭಾವನೆ ತೊರೆದು ಮುನ್ನುಗ್ಗಿ. ಧೈರ್ಯಶಾಲಿಗೆ ಭಗವಂತನೂ ಸಹಾಯ ಮಾಡುವನು. ವಿವಿಧ ಮೂಲಗಳಿಂದ ಹಣ ಹರಿದು ಬರುವುದು.

 

 

ಎದುರಾಳಿಗಳು ವೃಥಾ ವಾದ ಮಾಡಿ ನಿಮ್ಮ ದಿಕ್ಕನ್ನು ತಪ್ಪಿಸುವ ಸಾಧ್ಯತೆ ಇದೆ. ಆದರೆ ಆತ್ಮವಿಶ್ವಾಸದಿಂದ ನೀವು ಅಂದುಕೊಂಡ ಕಾರ್ಯವನ್ನು ಯಶಸ್ವಿಯಾಗಿ ಪೂರೈಸುವಿರಿ. ಕೀಳರಿಮೆ ಬಿಟ್ಟು ಎಲ್ಲರೊಂದಿಗೂ ಬೆರೆಯಿರಿ. ಅದು ಹೆಚ್ಚು ಕ್ರಿಯಾಶೀಲತೆ ತಂದುಕೊಡುವುದು.

 

ಪದೇ ಪದೆ ದೇಹಾಲಸ್ಯ, ಅನಾರೋಗ್ಯಗಳಿದ್ದರೆ ತುಸು ವಿಶ್ರಾಂತಿ ಪಡೆಯಿರಿ. ವೈದ್ಯರ ಸಲಹೆಯಂತೆ ಸಕಾಲದಲ್ಲಿ ಔಷಧೋಪಚಾರ ತೆಗೆದುಕೊಳ್ಳಿ. ಇದರಿಂದ ಒಳಿತಾಗುವುದು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳಲು ಕುಲದೇವರನ್ನು ಪ್ರಾರ್ಥನೆ ಮಾಡಿ.

 

ನಿಮ್ಮ ಮನಸ್ಸಂಕಲ್ಪಗಳ ಪ್ರಕಾರದಂತೆಯೇ ಜೀವನ ಮುಂದುವರಿಸಬೇಕೆಂಬ ಹಠ ಬೇಡ. ಎಲ್ಲಾ ಭಾನುವಾರವೂ ರಜಾ ದಿನವಾಗಿರಬಹುದು. ಆದರೆ ಎಲ್ಲಾ ರಜಾ ದಿನಗಳು ಭಾನುವಾರ ಆಗಲಿಕ್ಕೆ ಸಾಧ್ಯವಿಲ್ಲ. ಹಾಗಾಗಿ ವ್ಯವಹರಿಸುವಾಗ ತಾಳ್ಮೆಯಿರಲಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top