fbpx
ಸಮಾಚಾರ

ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟ- ರಿಸಲ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಇಂದು ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿದ್ದು,ಒಟ್ಟು ಶೇ.73.70 ಫಲಿತಾಂಶ ದಾಖಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಶೇ.1.7ರಷ್ಟು ಏರಿಕೆಯಾಗಿದೆ. ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಶೇ.89.33 ಫಲಿತಾಂಶ ದಾಖಲಿಸುವ ಮೂಲಕ ಹಾಸನ ಮೊದಲ ಸ್ಥಾನ ಪಡೆದುಕೊಂಡರೆ, ಶೇ.88.49 ಫಲಿತಾಂಶ ದಾಖಲಿಸಿ ರಾಮನಗರ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಶೇ.88.49 ಫಲಿತಾಂಶ ದಾಖಲಿಸುವ ಮೂಲಕ ಬೆಂಗಳೂರು ಗ್ರಾಮಾಂತರ ಮೂರನೇ ಸ್ಥಾನ ಪಡೆದುಕೊಂಡರೆ ಶೇ.53.95 ಫಲಿತಾಂಶದೊಂದಿಗೆ ಯಾದಗಿರಿ ಕೊನೆಯ ಸ್ಥಾನ ಪಡೆದುಕೊಂಡಿದೆ.

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್​ಸೈಟ್​ಗಳಾದ www.kaceb.kar.nic.in ಮತ್ತು www.karresults.nic.inನಲ್ಲಿಇಂದು 12 ಗಂಟೆಯ ನಂತರ ಫಲಿತಾಂಶ ಪ್ರಕಟವಾಗಲಿದೆ. ಅಲ್ಲದೆ, ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಎಸ್ಎಂಎಸ್​ ಮೂಲಕ ಫಲಿತಾಂಶ ಕಳುಹಿಸುವ ವ್ಯವಸ್ಥೆಯನ್ನೂ ಮಂಡಳಿ ಮಾಡಿಕೊಂಡಿದೆ. ನಾಳೆ ಆಯಾ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ಆನ್ ಲೈನ್ ನಲ್ಲಿ SSLC ಪರೀಕ್ಷೆ ಫಲಿತಾಂಶ ನೋಡುವುದು ಹೇಗೆ?

* ಅಧಿಕೃತ ವೆಬ್ ತಾಣ www.kaceb.kar.nic.in ಎಂದು ಗೂಗಲ್‌ನಲ್ಲಿ ಟೈಪ್ ಮಾಡಿ. ನಂತರ ವೆಬ್‌ಸೈಟ್‌ ತೆರೆದುಕೊಳ್ಳುತ್ತದೆ.

* ನಂತರ ‘SSLC Result’ ಎನ್ನುವ ಲಿಂಕ್ ಕ್ಲಿಕ್ ಮಾಡಿ.ಅಲ್ಲಿ ಬಾಕ್ಸ್ ಓಪನ್ ಆಗುತ್ತೆ.

* ಅಲ್ಲಿ ಕೇಳುವ ನಿಮ್ಮ ರೋಲ್ ನಂಬರ್ (ಹಾಲ್ ಟಿಕೇಟ್ ನಂಬರ್) ಹಾಗೂ ಇನ್ನಿತರ ಮಾಹಿತಿ ನಮೂದಿಸಿ.

* SUBMIT ಬಟನ್ ಒತ್ತಿ.

* ಫಲಿತಾಂಶದ ಪ್ರತಿ ಪಡೆಯಲು ಅಲ್ಲೇ ಇರುವ ಡೌನ್‌ಲೋಡ್ ಮೇಲೆ ಕ್ಲಿಕ್ಕಿಸಿ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top