fbpx
ಸಮಾಚಾರ

ಮೋದಿ ವಿರುದ್ಧ ಮಾಜಿ ಸೈನಿಕ ಸ್ಪರ್ಧೆ: “ಮೋದಿಯಲ್ಲ, ನಾನೇ ನಿಜವಾದ ಚೌಕಿದಾರ, 21 ವರ್ಷ ದೇಶದ ಗಡಿಯನ್ನು ಕಾದಿದ್ದೇನೆ .”

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಸ್ಪಿ-ಬಿಎಸ್ಪಿ ಮೈತ್ರಿಕೂಟವು ಕೊನೆ ಕ್ಷಣದಲ್ಲಿ ಈ ಮುಂಚೆ ಘೋಷಿಸಿದ್ದ ಅಭ್ಯರ್ಥಿ ಶಾಲಿನಿ ಯಾದವ್‌ ಅವರನ್ನು ಬದಲಿಸಿ ಮಾಜಿ ಯೋಧ ತೇಜ್‌ ಬಹದ್ದೂರ್‌ ಅವರನ್ನು ಅಖಾಡಕ್ಕೆ ಇಳಿಸಿದೆ. ನಾಮಪತ್ರ ಸಲ್ಲಿಕೆ ಸಮಯ ಕೊನೆಗೊಳ್ಳುವ ಕೆಲವೇ ಕ್ಷಣಗಳ ಮೊದಲು ತೇಜ್ ಬಹದ್ದೂರ್ ಉಮೇದುವಾರಿಕೆ ಸಲ್ಲಿಸಿದರು.

ಈ ವೇಳೆ ಮಾತನಾಡಿರುವ ತೇಜ್ ಬಹದ್ದೂರ್ ‘ನಾನು ನಿಜವಾದ ಚೌಕಿದಾರ. 21 ವರ್ಷ ದೇಶದ ಗಡಿಯಲ್ಲಿದ್ದು ರಕ್ಷಣೆ ಮಾಡಿದ್ದೇನೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದೇನೆ. ಚೌಕಿದಾರ ಎಂಬ ಪದ ಮೋದಿ ಅವರಿಗೆ ಹೊಂದಿಕೆಯಾಗುವುದಿಲ್ಲ’ ಎಂದು ತೇಜ್ ಬಹದ್ದೂರ್ ಹೇಳಿದ್ದಾರೆ.

”ಯಾವ ಪಕ್ಷದ ಗುಲಾಮನಾಗಲೂ ಸಿದ್ಧನಿಲ್ಲ. ಹಾಗಾಗಿ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದೇನೆ,” ಎಂದು ಈ ಮೊದಲು ಹೇಳಿಕೆ ನೀಡಿದ್ದ ತೇಜ್‌ ಬಹದ್ದೂರ್‌ ಈಗ ಎಸ್ಪಿ-ಬಿಎಸ್ಪಿ ಮೈತ್ರಿಕೂಟದಿಂದ ಕಣಕ್ಕೆ ಇಳಿದು ಅಚ್ಚರಿ ಮೂಡಿಸಿದ್ದಾರೆ.

ಅಂದಹಾಗೆ ಬಿಎಸ್‌ಎಫ್ ಯೋಧನಾಗಿದ್ದ ತೇಜ್ ಬಹದ್ದೂರ್, ಸೇನೆಯಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದರು. ಸೇನೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಅವರನ್ನು ಸೇನೆಯಿಂದ ವಜಾಗೊಳಿಸಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top