fbpx
ಸಮಾಚಾರ

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಓನರ್‌ಗೆ ಎರಡು ವರ್ಷ ಜೈಲು ಶಿಕ್ಷೆ.

ಕಿಂಗ್ಸ್​ ಇಲೆವೆನ್​ ತಂಡದ ಸಹ ಮಾಲೀಕ ಮತ್ತು 283 ವರ್ಷಗಳ ಇತಿಹಾಸವಿರುವ ವಾಡಿಯಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ನೆಸ್​ ವಾಡಿಯಾಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಜಪಾನಿನ ಕೋರ್ಟ್​ ನೆಸ್​ ವಾಡಿಯಾರಿಗೆ ಈ ಶಿಕ್ಷೆ ನೀಡಿದೆ.

 

 

ಡ್ರಗ್ಸ್​ ಇಟ್ಟುಕೊಂಡಿರುವ ಆರೋಪ ಸಂಬಂಧ ಜಪಾನ್​ನ ಸಪ್ಪೊರೊ ಜಿಲ್ಲೆಯಲ್ಲಿ ಅವ್ರನ್ನ ವಶಕ್ಕೆ ಪಡೆಯಲಾಗಿತ್ತು. ತನಿಖೆ ವೇಳೆ 25 ಗ್ರಾಂ ಮಾದಕ ವಸ್ತು ಇರೋದು ಪತ್ತೆಯಾಗಿತ್ತು. ನಂತರ ಕೋರ್ಟ್​ಗೆ ಸಪ್ಪೊರೊ ಜಿಲ್ಲಾ ಕೋರ್ಟ್​ಗೆ ಒಪ್ಪಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್, ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಶಿಕ್ಷೆಯ ಪ್ರಮಾಣವನ್ನ ಎರಡು ವರ್ಷಕ್ಕೆ ನಿಗದಿಗೊಳಿಸಿ ಆದೇಶ ಹೊರಡಿಸಿದೆ.

ತಮ್ಮ ಬಳಿ ಇದ್ದ ಗಾಂಜಾ ವೈಯಕ್ತಿಯ ಬಳಕೆಗಾಗಿಯೇ ಹೊರತು ಮಾರಾಟ ಮಾಡುವ ಉದ್ದೇಶಕ್ಕಲ್ಲ ಎಂದು ನೆಸ್​ ವಾಡಿಯಾ ಹೇಳಿಕೆ ನೀಡಿದ್ದರು. ನಂತರ ಇಷ್ಟು ದಿನಗಳ ನ್ಯಾಯಾಂಗ ಬಂಧನದ ನಂತರ ಸಪ್ಪೊರೊ ಜಿಲ್ಲಾ ನ್ಯಾಯಾಲಯ ಅವರಿಗೆ ಎರಡು ವರ್ಷಗಳ ಶಿಕ್ಷೆ ವಿಧಿಸಿ ಆದೇಶಿಸಿದೆ ಎಂದು ಫಿನಾನ್ಷಿಯಲ್​ ಟೈಮ್ಸ್​ ವರದಿ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top