fbpx
ಸಮಾಚಾರ

ಎಡಿಟೆಡ್ ಫೋಟೋ ಹಂಚಿಕೊಂಡು ವಿವಾದಕ್ಕೀಡಾದ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ.

ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ, ನಟಿ ರಮ್ಯಾ, ಫೋಟೋ ಶಾಪ್ ಮಾಡಿದ್ದ ಫೋಟೋವನ್ನು ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಕಾಲೆಳೆಯಲು ಪ್ರಯತ್ನಿಸಿದ್ದರು. ಮೋದಿ ಅವರನ್ನು ಹಿಟ್ಲರ್ ಗೆ ಹೋಲಿಕೆ ಮಾಡಿ ತಿರುಚಿದ ಫೋಟೋ ಅಪ್ಲೋಡ್ ಮಾಡಿದ್ದ ನಟಿ ರಮ್ಯಾ ನಿಮಗೆ ಏನೆನ್ನಿಸುತ್ತದೆ ಹೇಳಿ ಎಂದು ಶೀರ್ಷಿಕೆ ನೀಡಿದ್ದರು.

 

 

ರಮ್ಯಾ ಅವರು ಹಿಟ್ಲರ್‌ ಫೋಟೋಗೆ ಸಂಬಂಧಪಟ್ಟಂತೆ ವಿವಾದಕ್ಕೆ ಕಾರಣವಾಗಿದ್ದು, ಹಿಟ್ಲರ್‌ ಫೋಟೋವನ್ನು ರಮ್ಯಾ ಅವರು ಎಡಿಟ್‌ ಮಾಡಿ ರಮ್ಯಾ ಅವರು ಶೇರ‍್ ಮಾಡಿದ್ದಾರೆ. ಇದಲ್ಲದೇ ಅಸಲಿಯ ಫೋಟೋದಲ್ಲಿ ಹಿಟ್ಲರ್‌ ಮಗುವಿನ ಹೆಗಲ ಮೇಲೆ ಹಾಕಿಕೊಂಡಿದ್ದಾರೆ ಹೊರತು ಮಗುವಿನ ಕಿವಿಯನ್ನು ಹಿಂಡಿಲ್ಲ ಎನ್ನಲಾಗುತ್ತಿದೆ.

 

 

ಎಡಿಟೆಡ್ ಫೋಟೋ ಇದು:
ಹಿಟ್ಲರ್ ಬಾಲಕಿಯ ಕಿವಿ ಹಿಡಿದಿರುವ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟ ಮಾಡಿದಾಗ ಅದೇ ಫೋಟೊ ಲಭ್ಯವಾಗಿಲ್ಲ. ಆದರೆ ಬಾಲಕಿಯ ತೋಳನ್ನು ಹಿಟ್ಲರ್ ಹಿಡಿದರುವ ಫೋಟೊ ಸಿಕ್ಕಿದೆ. ಈ ಚಿತ್ರವನ್ನು ದಿ ಸನ್ ಪತ್ರಿಕೆ ಪ್ರಕಟಿಸಿತ್ತು. ಈ ಚಿತ್ರವನ್ನು ಬಹಳ ಸೂಕ್ಷ್ಮವಾಗಿ ನೋಡಿದರೆ ಫೋಟೊಶಾಪ್ ಮಾಡಿದ್ದು ಗೊತ್ತಾಗುತ್ತದೆ.ಮೋದಿಯವರು ಬಾಲಕನ ಕಿವಿ ಹಿಡಿದಿರುವ ಚಿತ್ರದಲ್ಲಿ ಮೋದಿಯವರ ಕೈಯನ್ನು ಫೋಟೊಶಾಪ್‍ ಮಾಡಿ ಹಿಟ್ಲರ್ ಚಿತ್ರಕ್ಕೆ ಇಟ್ಟು ಎಡಿಟ್ ಮಾಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top