fbpx
ಸಮಾಚಾರ

ನಟ ಜಗ್ಗೇಶ್‍ಗೆ ರವಿ ಚನ್ನಣ್ಣನವರ್ ನೀಡಿದ ಸಿಹಿ ಸುದ್ದಿ ಇದು.

ರವಿ ಚನ್ನಣ್ಣನವರ್ ಅವರು ಸಿಹಿ ಸುದ್ದಿಯನ್ನು ನೀಡಿದ್ದಾರೆ ಎಂದು ನವರಸ ನಾಯಕ ಜಗ್ಗೇಶ್ ಅವರು ಟ್ವೀಟ್ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಅಂಧ ದಂಪತಿಯ ಮಗುವನ್ನು ಅಪಹರಣ ಮಾಡಲಾಗಿತ್ತು. ಈಗ ಆ ಮಗು ಪತ್ತೆಯಾಗಿದ್ದು, ಈ ಬಗ್ಗೆ ನಟ ಜಗ್ಗೇಶ್ ತಮ್ಮ ಟ್ವೀಟ್ ಮಾಡಿದ್ದಾರೆ.

 

 

“ರಾಯರಿಗೆ ಅಂಗಲಾಚಿ ಅಮಾಯಕ ದಂಪತಿ ಕಳೆದುಕೊಂಡ ಮಗುವಿನ ಪತ್ತೆಗಾಗಿ ಹುಚ್ಚನಂತೆ ಪ್ರಾರ್ಥಿಸಿದ್ದೆ. ನಲ್ಮೆಯ ಅಧಿಕಾರಿ ಡಿಸಿಪಿ ರವಿಚನ್ನಣ್ಣನವರ್ ಮಗು ಸಿಕ್ಕಿದ ಸಿಹಿ ಸುದ್ದಿ ನೀಡಿದರು ಧನ್ಯವಾದಗಳು. ಅಲ್ಲದೆ ಬೆಂಗಳೂರು ಪೊಲೀಸ್ ಅಧಿಕಾರಿಗಳಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ಈ ಮೊದಲು ಜಗ್ಗೇಶ್ ಅವರು, ಮಾನ್ಯ ಅಧಿಕಾರಿ ಬಂಧುಗಳೆ ಈ ವಿದ್ರಾವಕ ಘಟನೆ ನನಗೆ ಕಣ್ಣೀರು ತರಿಸಿತು. ತಮ್ಮಲ್ಲಿ ನನ್ನ ಕಳಕಳಿ ಮನವಿ ಆ ಮಗು ಪತ್ತೆ ಮಾಡಿ ಅಂದ ದಂಪತಿಗೆ ಕಂದಮ್ಮ ಸಿಗುವಂತೆ ಮಾಡಿ. ಮಕ್ಕಳ ಕಳ್ಳರಿಗೆ ತಕ್ಕ ಪಾಠ ಕಲಿಸಿ. ಕಣ್ಣಿಲ್ಲದ ಅಮಾಯಕರ ಮಕ್ಕಳು ಕದಿಯುವಂತ ರಾಕ್ಷಸರ ಕಾನೂನಿನ ಕ್ರಮಕ್ಕೆ ನನ್ನ ಪ್ರಾರ್ಥನೆ ಎಂದು ಟ್ವೀಟ್ ಮಾಡಿದ್ದರು.

ಏನಿದು ಘಟನೆ?
ರಾಯಚೂರು ಮೂಲದ ಅಂಧ ದಂಪತಿಯಾದ ಚಿನ್ನು ಮತ್ತು ಬಸವರಾಜು ಅವರ ಮಗುವನ್ನು ಶನಿವಾರ ಬೆಳಗ್ಗೆ ಅಪಹರಣವಾಗಿತ್ತು. ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಅಂಧ ದಂಪತಿ ತಮ್ಮ 8 ತಿಂಗಳ ಮಗುವಿಗೆ ನೀರು ಕುಡಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಅನಾಮಿಕ ಮಹಿಳೆ ಸಹಾಯ ನೆಪದಲ್ಲಿ ಧಾವಿಸಿದ್ದು, ಮಗುವಿನೊಂದಿಗೆ ಎಸ್ಕೇಪ್ ಆಗಿದ್ದಳು. ಈಗ ಮಗು ಪತ್ತೆಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top