fbpx
ಸಮಾಚಾರ

ಮೋದಿ ವಿರುದ್ಧ ಅಸಭ್ಯ ಪದ ಬಳಸಿದ ಮಕ್ಕಳಿಗೆ ಬುದ್ದಿ ಹೇಳಿದ ಪ್ರಿಯಾಂಕಾ- ವಿಡಿಯೋ ವೈರಲ್.

ಮೋದಿ ವಿರುದ್ಧ ಅಸಭ್ಯ ಘೋಷಣೆ ಕೂಗಿದ ಮಕ್ಕಳಿಗೆ ಪ್ರಿಯಾಂಕಾ ಗಾಂಧಿ  ತಡೆಯೊಡ್ಡಿ ಬುದ್ದಿ ಹೇಳಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.  ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಅವರ ಸುತ್ತಲೂ ನೆರೆದಿದ್ದ ಮಕ್ಕಳು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿರುವ ವಿಡಿಯೋ ಇದಾಗಿದೆ.

 

 

ಈ ವಿಡಿಯೋದಲ್ಲಿ ಪ್ರಿಯಾಂಕಾ ಜತೆಗಿದ್ದ ಕಾಂಗ್ರೆಸ್ ಮುಖಂಡರು ‘ಚೌಕಿದಾರ್’ ಎಂದು ಕೂಗಿದಾಗ ಮಕ್ಕಳು ‘ಚೋರ್ ಹೈ’ ಎಂದು ಕೂಗುತ್ತಾರೆ. ಅದಕ್ಕೆ ಪ್ರಿಯಾಂಕಾ ಕೂಡ ನಗುತ್ತಾ ಉತ್ತೇಜನ ನೀಡುತ್ತಿರುವುದು ಕಾಣಿಸಿದೆ. ಆದರೆ, ಮಕ್ಕಳು ಮೋದಿ ಅವರ ವಿರುದ್ಧ ಅಸಭ್ಯ ಪದ ಬಳಕೆ ಮಾಡುವುದು ಸಹ ವಿಡಿಯೋದರಲ್ಲಿ ಗೋಚರಿಸಿದೆ. ಹಾಗೆ ಪದ ಬಳಕೆ ಮಾಡಿದ ಕೂಡಲೇ ಪ್ರಿಯಾಂಕಾ ಮತ್ತು ಅವರ ಜತೆಗಿದ್ದವರು ಅವರನ್ನು ತಡೆದಿದ್ದಾರೆ.

 

 

ಪ್ರಧಾನಿಯಿ ವಿರುದ್ಧ ಕೆಟ್ಟ ಪದ ಬಳಕೆಯಾದ ಸಂದರ್ಭದಲ್ಲಿ ತಕ್ಷಣ ಮಧ್ಯ ಪ್ರವೇಶಿಸಿದ ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ‘ಯೇ ವಾಲಾ ನಹಿ’ ಯೇ ವಾಲಾ ನಹಿ, ಅಚ್ಚಾ ನಹಿ ಲಗ್ ರಹಾ ಹೈ'( ಈ ಪದಬಳಕೆ ಬೇಡ ,ಇದು ಸರಿ ಕಾಣುತ್ತಿಲ್ಲ ) ಎಂದು ಬೆರಳು ಮಾಡಿ ಮಕ್ಕಳಿಗೆ ಬುದ್ದಿವಾದ ಹೇಳಿದರು. ಅಂತಹ ಘೋಷಣೆ ಕೂಗುವುದು ಸರಿಯಲ್ಲ. ಒಳ್ಳೆಯ ಮಕ್ಕಳಾಗಬೇಕು ಎಂದು ಬುದ್ದಿಮಾತು ಹೇಳಿದರು ಇದಾದ ನಂತರ ಮಕ್ಕಳು ತಕ್ಷಣ ಆ ಘೋಷಣೆಯನ್ನು ನಿಲ್ಲಿಸಿ ರಾಹುಲ್ ಗಾಂಧಿ ಜಿಂದಾಬಾದ್ ಎನ್ನುವ ಘೋಷಣೆಯನ್ನು ಕೂಗಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top