fbpx
ಸಮಾಚಾರ

ಮೋದಿ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಯೋಧ ತೇಜ್ ಬಹದ್ದೂರ್ ​​ನಾಮಪತ್ರ ತಿರಸ್ಕೃತ.

ಪ್ರಧಾನಿ ಮೋದಿ ವಿರುದ್ಧ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಬಿಎಸ್​ಎಫ್​ ಯೋಧ ತೇಜ್ ಬಹಾದೂರ್​​ ಯಾದವ್​ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದೆ. ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ತೇಜ್ ಬಹದ್ದೂರ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

“ನನ್ನ ನಾಮಪತ್ರವನ್ನು ತಪ್ಪಾಗಿ ತಿರಸ್ಕರಿಸಿದ್ದಾರೆ. ನಿನ್ನೆ ಸಂಜೆ 6:15ಕ್ಕೆ ಸಾಕ್ಷ್ಯಕೊಡುವಂತೆ ಕೇಳಿದ್ದರು. ನಾವು ಅದನ್ನು ಒದಗಿಸಿದೆವು. ಆದರೂ ನಾಮಪತ್ರ ತಿರಸ್ಕಾರವಾಗಿದೆ. ನಾವು ಸುಪ್ರೀಂ ಕೋರ್ಟ್​ನಲ್ಲಿ ಇದನ್ನು ಪ್ರಶ್ನಿಸುತ್ತೇವೆ” ಎಂದು ತೇಜ್ ಬಹದ್ದೂರ್ ಹೇಳಿದ್ಧಾರೆ. ಸಮಾಜವಾದಿ ಪಕ್ಷದ ವಕೀಲರೂ ಕೂಡ ಈ ನಿರ್ಧಾರವನ್ನು ಖಚಿತಪಡಿಸಿದ್ದಾರೆ.

ಹರಿಯಾಣದ ರೇವಾರಿ ಮೂಲದ ತೇಜ್‌ ಬಹದ್ದೂರ್ ಯಾದವ್‌ ಕಳೆದ ಕೆಲವು ವರ್ಷಗಳ ಹಿಂದೆ ಮಾಡಿದ್ದ ವೀಡಿಯೋ ಭಾರಿ ವೈರಲ್‌ ಆಗಿತ್ತು. ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ತೇಜ್‌ ಬಹದ್ದೂರ್‌ ವೀಡಿಯೋ ಮಾಡಿದ್ದು ಭಾರಿ ವೈರಲ್‌ ಆಗಿತ್ತು. ನಂತರ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು.

ತಮ್ಮ ನಾಮಪತ್ರದಲ್ಲಿ ತೇಜ್ ಬಹದ್ದೂರ್ ಕಳಪೆ ಆಹಾರದ ಕುರಿತು ನಮೂದಿಸಿದ್ದು ಈ ಹಿನ್ನೆಲೆಯಲ್ಲಿ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top