fbpx
ಸಮಾಚಾರ

ಅತ್ಯಾಚಾರ ಮತ್ತು ಮಕ್ಕಳ ದೌರ್ಜನ್ಯ ವಿರುದ್ಧ ಅಭಿಯಾನ ಆರಂಭಿಸಿದ ಹಲೋ ಆ್ಯಪ್- ನೀವು ಕೈಜೋಡಿಸಿ

ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ನಡೆಯುತ್ತಿರುವ ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇಂಥಾ ಅಮನುಷ್ಯ ಪ್ರಕರಣಗಳು ಹೆಚ್ಚುತ್ತಿದ್ದರೆ ಅತ್ತ ಅಮಾಯಕ ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ಸರ್ಕಾರಗಳು ಕೂಡ ವಿಫಲವಾಗುತ್ತಿದೆ.

ಇಂಥಾ ಕ್ರೂರ ಕೃತ್ಯಗಳನ್ನು ತಡೆಯಲು ‘ಹಲೋ’ ಸಾಮಾಜಿಕ ಜಾಲತಾಣದ ಆ್ಯಪ್ ವಿಶೇಷ ಅಭಿಯಾನವನ್ನು ಶುರುಮಾಡಿದ್ದು, ಈ ಮೂಲಕ ದೇಶದ ಮಕ್ಕಳಿಗೆ ಧೈರ್ಯ ತುಂಬುವಂತಹ ಕೆಲಸಕ್ಕೆ ಕೈ ಹಾಕಿದೆ. #NewIndiaAgainistRape ಎಂಬ ಹ್ಯಾಶ್​ ಟ್ಯಾಗ್ ಮೂಲಕ ಅಭಿಯಾನಕ್ಕೆ ಕರೆ ನೀಡಿರುವ ಹಾಲೋ ಭಾರತವನ್ನು ಇಂಥಾ ಪೈಶಾಚಿಕ ಕೃತ್ಯಗಳ ಮುಕ್ತ ದೇಶವನ್ನಾಗಿ ಮಾಡುವತ್ತ ಒಂದು ಸಣ್ಣ ಹೆಜ್ಜೆಯಿಟ್ಟಿದೆ. ಈ ಅಭಿಯಾನಕ್ಕೆ ದೇಶದ ಪ್ರಜೆಗಳ ಬೆಂಬಲವನ್ನು ಹೆಲೋ ನಿರೀಕ್ಷಿಸುತ್ತಿದೆ.

 

 

“#NewIndiaAgainistRape ಹ್ಯಾಶ್ ಟ್ಯಾಗ್ ಬಳಸಿ ಭಾರತವನ್ನು ಮಕ್ಕಳ ಸುರಕ್ಷಿತ ದೇಶವನ್ನಾಗಿ ಮಾಡಲು ಹೇಗೆಲ್ಲಾ ಪ್ರಯತ್ನಿಸಬಹುದು ಎಂಬುದರ ನಿಮ್ಮ ಆಲೋಚನೆ ಮತ್ತು ಕಲ್ಪನೆಗಳನ್ನು ಹಂಚಿಕೊಳ್ಳಬಹುದು. India4Childern ಹಾಗೂ ‘ಹಲೋ’ ಆ್ಯಪ್ ಈ ಅಭಿಯಾನಕ್ಕೆ ಚಾಲನೆ ನೀಡಿದ್ದು, ನೀವು ಕೂಡ ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ದೇಶದ ಧನಾತ್ಮಕ ಬದಲಾವಣೆಗೆ ಕಾರಣರಾಗಬಹುದು. #NewIndiaAgainistRape ಎಂಬ ಹಲೋ ಆ್ಯಪ್ ಅಭಿಯಾನವನ್ನು ಬೆಂಬಲಿಸಿ ಧನಾತ್ಮಕ ಬದಲಾವಣೆಗೆ ಕೈ ಜೋಡಿಸಿ” ಎಂದು ಹಲೋ ಕೇಳಿಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top