fbpx
ಸಮಾಚಾರ

ಮಲೆನಾಡಿನ ಬೆಡಗಿ ಜೊತೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಸೀರಿಯಲ್ ನಟ ಮಧು ಹೆಗಡೆ

ಹಲವಾರು ಧಾರಾವಾಹಿಗಳ ಮೂಲಕ ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕ ಕಿರುತೆರೆಯಲ್ಲಿ ಹೆಸರು ಮಾಡಿದ್ದ ನಟ ಮಧು ಹೆಗಡೆ ಸಾಂಸಾರಿಕ ಜೀವನಕ್ಕೆ ಕಾಲಿಡುವ ಮೂಲಕ ಜೀವನದ ಮತ್ತೊಂದು ಇನ್ನಿಂಗ್ಸ್ ಆರಂಭ ಮಾಡಿದ್ದಾರೆ. ಮಲೆನಾಡಿನ ಹುಡುಗಿ ನಮ್ರತಾರೊಂದಿಗೆ ಕಿರುತೆರೆಯ ಬಹುಬೇಡಿಕೆಯ ನಟ ಮಧು ಹೆಗಡೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.

ನಮ್ರತಾ ಸಕಲೇಶಪುರದ ಲಕ್ಷ್ಮೀಪರ ಬಡಾವಣೆಯ ವಾಸುದೇವ ಶರ್ಮಾ ಅವರ ಪುತ್ರಿ. ಶಾರದಾಂಬೆಯ ಸನ್ನಿಧಿಯಲ್ಲಿ ನಮ್ರತಾ ಅವರಿಗೆ ಮಾಂಗಲ್ಯಧಾರಣೆ ಮಾಡುವ ಮೂಲಕ ಗೃಹಸ್ಥಾಶ್ರಮಕ್ಕೆ ಮಧು ಹೆಗಡೆ ಕಾಲಿಟ್ಟರು.

ಕಿರುತೆರೆಯ ನಟನಾಗಿರುವ ಮಧು ಹೆಗಡೆ ಪಲ್ಲವಿ ಅನುಪಲ್ಲವಿ, ಮನ್ವಂತರ, ಜೋಗುಳ, ಗೆಜ್ಜೆಪೂಜೆ ಸೇರಿದಂತೆ 50ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಮಧು ಹೆಗಡೆ ಹಾಗೂ ಸಕಲೇಶಪುರ ಮೂಲದ ನಮ್ರತಾ ಕುಟುಂಬ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದು, ಶಾರದಾಂಬೆ ಸನ್ನಿಧಿಯಲ್ಲಿ ಹಿಂದೂ ಸಂಪ್ರದಾಯದಂತೆ ಮಾಂಗಲ್ಯಧಾರಣೆ ಮಾಡುವ ಮೂಲಕ ದಂಪತಿ ನವಬಾಳಿಗೆ ಕಾಲಿಟ್ಟಿದ್ದಾರೆ.

ವಿವಾಹಕ್ಕೆ ಕಿರುತೆರೆಯ ನಟ ನಟಿಯರ ದಂಡೇ ಆಗಮಿಸಿತ್ತು. ಚಲನಚಿತ್ರ ನಟ ಅರುಣ್‌ ಸಾಗರ್‌, ವಿಕ್ರಮ್‌ ಸೂರಿ, ನಮಿತಾ ರಾವ್‌ ದಯಾನಂದ್‌, ಸಾಗರ್‌ ಕೃಷ್ಣ ಅಡಿಗ, ನಂದಿನಿ ಗೌಡ, ಛಾಯಾಗ್ರಾಹಕ ಪ್ರಭಾಕರ್‌, ಚಿತ್ರ ನಿರ್ದೇಶಕ ಶ್ಯಾಮ್ ಶಿವಮೊಗ್ಗ, ಸಂಗೀತ, ಕಿರುತೆರೆ ನಿರ್ದೇಶಕರು ಸೇರಿದಂತೆ ನೂರಕ್ಕೂ ಅಧಿಕ ನಟ ನಟಿಯರು ಸೇರಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top