fbpx
ಸಮಾಚಾರ

ಮತ್ತೊಮ್ಮೆ ಕನ್ನಡ ಮಾತನಾಡಿ ‘ಮಂಡ್ಯದ ಗಂಡು’ ಹಾಡು ಹಾಡಿದ ಎಬಿ ಡಿವಿಲಿಯರ್ಸ್.

12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳಪೆ ಪ್ರದರ್ಶನ ನೀಡಿದ್ದರೂ RCB ತಂಡದ ಅತ್ಯಂತ ನಂಬಿಕಸ್ಥ ಆಟಗಾರ ಎಬಿ ಡಿವಿಲಿಯರ್ಸ್ ಮೈದಾನದಲ್ಲಿ ಹಾಗೂ ಮೈದಾನದಾಚೆ ಅಭಿಮಾನಿಗಳನ್ನು ಈ ಬಾರಿಯೂ ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.

RCB insiders show ನಲ್ಲಿ ಮಿಸ್ಟರ್ ನ್ಯಾಗ್ಸ್ ಜತೆ ಎಬಿ ಡಿವಿಲಿಯರ್ಸ್ ಕೆಲವು ಕರ್ನಾಟಕದ ಕ್ರಿಕೆಟಿಗರನ್ನು ನಾಚಿಸುವಂತೆ ಕನ್ನಡ ಮಾತನಾಡಿದ್ದಾರೆ.. ನಾಗ್ಸ್ ಮಕ್ಕಳು ಹೇಗಿದ್ದಾರೆ ಎಂದು ಕೇಳಿದಾಗ ಎಬಿಡಿ “ಮಕ್ಕಳು ತುಂಬಾ ಚೆನ್ನಾಗಿದ್ದಾರೆ, ಎಲ್ಲವೂ ಓಕೇ” ಎಂದು ಹೇಳಿದ್ದಾರೆ..

ಅಷ್ಟೇ ಅಲ್ಲದೆ ಇದೆ ಷೋ ನಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅಭಿನಯದ “ಮಂಡ್ಯದ ಗಂಡು” ಹಾಡನ್ನು ಕೂಡ ಅಷ್ಟೇ ಸರಾಗವಾಗಿ ತಪ್ಪಿಲ್ಲದೆ ಹಾಡಿದ್ದಾರೆ. ನಾಗ್ಸ್ ಹೇಳಿಕೊಟ್ಟ ಹಾಗೆ ಹಾಡಿದ ಎಬಿಡಿ ಹಾಡು ತುಂಬಾ ಚನ್ನಾಗಿದೆ ‘ಐ ಲವ್ ಮಂಡ್ಯ’ ಎಂದು ಹೇಳಿದ್ದಾರೆ..

ಎಬಿಡಿ ಮತ್ತು ನ್ಯಾಗ್ಸ್ ನಡುವಿನ ಸಂಭಾಷಣೆಯ ಪೂರ್ತಿ ವಿಡಿಯೋ ಇಲ್ಲಿ ನೋಡಿ.

 

ಈ ಹಿಂದ ಬಾರಿಯ ಸೀಸನ್ ಗಳಲ್ಲಿ ಕೂಡ ಎಬಿಡಿ ಒಂದೆರೆಡು ಪದಗಳನ್ನು ಮಾತನಾಡಿ ಕನ್ನಡಿಗರ ಹೃದಯ ಗೆದ್ದಿದ್ದರು.. ಜೊತೆಗೆ ಡಾ. ರಾಜ್ ಕುಮಾರ್ ಅವರ ‘ಇಫ್ ಯೂ ಕಾಮ್ ಟುಡೇ’ ‘ಬಾನಿಗೊಂದು ಎಲ್ಲೇ ಎಲ್ಲಿದೆ’ ‘ಲವ್ ಮೀ ಆರ್ ಹೆಟ್ ಮೀ’ ಹಾಗೂ ಉಪೇಂದ್ರರ ‘ಡೇಂಜರ್’ ಹಾಡುಗಳನ್ನು ಕೂಡ ಎಬಿಡಿ ತಮ್ಮ ಕಂಠದಿಂದ ಹಾಡಿದ್ದರು,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top