fbpx
ಸಮಾಚಾರ

ಅಭಿಮಾನಿಯ ಆಸೆಯನ್ನು ಈಡೇರಿಸಲು ರಸ್ತೆಗಿಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್.

ಅಭಿಮಾನಿಗಳಿಗೆ ಚಾಲೆಂಜಿಂಗ್ ದರ್ಶನ್ ಅಂದರೆ ಪ್ರಾಣ. ಅದೇ ರೀತಿ ಅಭಿಮಾನಿಗಳ ಮೇಲೂ ದರ್ಶನ್ ಅವರಿಗೆ ಅಪಾರ ಪ್ರೀತಿ ಕಾಳಜಿಗಳಿವೆ. ಅವರದನ್ನು ತೋರಿಸಿಕೊಳ್ಳುವುದು ಕೆಲ ಸಂದರ್ಭಗಳಲ್ಲಿ ಮಾತ್ರ. ಗದರಿಕೆಯ ಮೂಲಕವೇ ಪ್ರೀತಿ ಸೂಸುವ ವಿಶಿಷ್ಟ ವ್ಯಕ್ತಿತ್ವದ ದರ್ಶನ್ ಅವರು ತಮ್ಮ ಅಭಿಮಾನಿಗಳ ಕಷ್ಟಕ್ಕೆ ಕಣ್ಣೀರಾದ, ಅದೆಷ್ಟೇ ಬ್ಯುಸಿಯಾಗಿದ್ದರೂ ಅಭಿಮಾನಿಗಳನ್ನು ತುಂಬಾ ವಿನಯದಿಂದಲೇ ಮಾತನಾಡಿಸುತ್ತಾರೆ. ಇಂಥಾ ದರ್ಶನ್ ಈಗ ಅಭಿಮಾನಿಯೊಬರ ಆಸೆಯೊಂದನ್ನು ಈಡೇರಿಸಿದ್ದಾರೆ.

ಅಭಿಮಾನಿಯೊಬ್ಬರ ಆಸೆ ತೀರಿಸಲು ದಾಸ ದರ್ಶನ್​ ರಸ್ತೆಗಿಳಿದಿದ್ದಾರೆ. ಅದೇನು ಅಭಿಮಾನಿಗಾಗಿ ರಸ್ತೆಗಳಿಯೋದು ಅಂತೀರಾ..? ಹೌದು, ದರ್ಶನ್​ ಅಭಿಮಾನಿಯೊಬ್ಬ ಹೊಸ ಬೈಕ್​ ಖರೀದಿಸಿದ್ದು, ಅದನ್ನು ಮೊದಲು ದರ್ಶನ್​ ಓಡಿಸಬೇಕೆಂದು ಆಸೆಪಟ್ಟಿದ್ದರಂತೆ. ಅದರಂತೆ ಅಭಿಮಾನಿಯ ಆಸೆಗೆ ಖುಷಿಯಿಂದ ಸರಿ ಎಂದ ದರ್ಶನ್ ರಸ್ತೆಗಿಳಿದು ಅವರ ಬೈಕ್​ ಅನ್ನು ಏರಿ ಸವಾರಿ ಮಾಡಿದ್ದಾರೆ. ಅದರ ವಿಡಿಯೋವನ್ನು ದರ್ಶನ್ ಅಭಿಮಾನಿಗಳ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿವೆ.

 

 

ಬೆಂಗಳೂರಿನವರೇ ಆದ ಪ್ರಶಾಂತ್ ಎಂಬ​ ದರ್ಶನ್​ ಅಭಿಮಾನಿ ದುಬಾರಿ ಬೆಲೆಯ ರಾಯಲ್ ಎನ್​ಫೀಲ್ಡ್​ ಬೈಕ್ಅನ್ನು​ ಖರೀದಿಸಿದ್ದು, ಅದನ್ನು ದರ್ಶನ್​ ಓಡಿಸಬೇಕು ಎಂದು ಕೇಳಿಕೊಂಡಿದ್ದರಂತೆ. ಅಭಿಮಾನಿಗೋಸ್ಕರ ಏನೆಲ್ಲಾ ಮಾಡುವ ದಚ್ಚು ಬೈಕ್ ಸವಾರಿ ಮಾಡಿ ಅಭಿಮಾನಿಯ ಆಸೆ ಈಡೇರಿಸಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿರುವ ಅವರ ಮನೆ ಬಳಿಯೇ ಆ ಬೈಕ್​ ಅನ್ನು ರೈಡ್​ ಮಾಡಿದ್ದಾರೆ ದರ್ಶನ್​.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top