fbpx
ಸಮಾಚಾರ

ಮದುವೆ ಸಂಭ್ರಮದಲ್ಲಿ ದೊಡ್ಮನೆ- ಯುವ ರಾಜ್‍ಕುಮಾರ್ ಮದುವೆ ಡೇಟ್ ಫಿಕ್ಸ್.

ಡಾ.ರಾಜ್ ಕುಟುಂಬದಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದ್ದು ರಾಘವೇಂದ್ರ ರಾಜ್‍ಕುಮಾರ್ ಕಿರಿಯ ಪುತ್ರ ಯುವ ರಾಜ್‍ಕುಮಾರ್ ಬ್ಯಾಚುಲರ್ ಲೈಫ್‍ಗೆ ಗುಡ್‍ಬೈ ಹೇಳಲಿದ್ದು, ಗೆಳತಿ ಶ್ರೀದೇವಿ ಜೊತೆಗೆ ಸಪ್ತಪದಿ ತುಳಿಯಲಿದ್ದಾರೆ.

ಮೇ 26ರಂದು ಯುವರಾಜ್‍ಕುಮಾರ್ ತಮ್ಮ ಗೆಳತಿ ಶ್ರೀದೇವಿ ಜೊತೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‍ನಲ್ಲಿ ಅದ್ಧೂರಿಯಾಗಿ ಮದುವೆ ಆಗಲಿದ್ದಾರೆ. ಈ ಮದುವೆಗೆ ಈಗಿನಿಂದಲೇ ಎಲ್ಲ ತಯಾರಿ ನಡೆಯುತ್ತಿದೆ. ಅದೇ ದಿನ ಆರತಕ್ಷತೆ ಕಾರ್ಯಕ್ರಮ ಕೂಡ ಹಮ್ಮಿಕೊಂಡಿದ್ದಾರೆ. ಈಗಾಗಲೇ ಸಿನಿಮಾರಂಗದ ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡುತ್ತಿದ್ದು, ಮದುವೆ ತಯಾರಿಯಲ್ಲಿ ದೊಡ್ಮನೆ ಮಂದಿ ಸಾಕಷ್ಟು ಬ್ಯುಸಿಯಾಗಿದ್ದಾರೆ.

ಕಳೆದ ವರ್ಷವಷ್ಟೇ ನಟ ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ​ಕುಮಾರ್ ಶ್ರೀದೇವಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ರು. ಇದೀಗ ಈ ಜೋಡಿಯ ಮದುವೆಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ.

ಅಂದಹಾಗೆ ಈ ಹಿಂದೆ ಯುವ ಅವರ ಹೆಸರು ಗುರು ರಾಜ್‍ಕುಮಾರ್ ಆಗಿದ್ದು, ಈಗ ಯುವ ರಾಜ್‍ಕುಮಾರ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಯುವ ರಾಜ್‍ಕುಮಾರ್ ಇದುವರೆಗೂ ಯಾವ ಸಿನಿಮಾದಲ್ಲೂ ಹೀರೋ ಆಗಿ ಕಾಣಿಸಿಕೊಂಡಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top