fbpx
ಸಮಾಚಾರ

ಬೆಂಗಳೂರು ಕಸ ವಿಲೇವಾರಿಯ ಬಗ್ಗೆ ಅಮೇರಿಕಾದ ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ಮಾತನಾಡಿದ ಕರ್ನಾಟಕದ ಐಎಎಸ್ ಅಧಿಕಾರಿ.

ಬೆಂಗಳೂರು ನಗರ ಕಸದ ವೈಜ್ಞಾನಿಕ ನಿರ್ವಹಣೆಯ ಬಗ್ಗೆ ಅಮೇರಿಕಾದ ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ಕರ್ನಾಟಕದ ಐಎಎಸ್ ಅಧಿಕಾರಿ ಮಣಿವಣ್ಣನ್ ಮಾತನಾಡಿದ್ದು “block chain” ಎಂಬ ಟೆಕ್ನಲೊಜಿಯ ಮೂಲಕ ಬೆಂಗಳೂರು ಕಸ ವಿಲೇವಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.

ಹಾರ್ವರ್ಡ್ ಚೇಂಜ್ ಫೌಂಡೇಷನ್ ವತಿಯಿಂದ ಬೆಂಗಳೂರು ಕಸ ವಿಲೇವಾರಿಗಾಗಿ 30000 ಡಾಲರ್ ಹಣದ ನೆರವು ಸಿಕ್ಕಿದ್ದು ಸ್ವಚ್ಛ ಮತ್ತು ಸುಂದರ ಬೆಂಗಳೂರು ನಿರ್ಮಾಣ ಮಾಡುವಲ್ಲಿ ಒಂದು ಕೈ ಜೋಡಿಸಿದ್ದಾರೆ. ಹಾರ್ವರ್ಡ್ ಯುನಿವರ್ಸಿಟಿಯ ಸಂವಾದ ಕಾರ್ಯಕ್ರಮವೊಂದರಲ್ಲಿ ಬೆಂಗಳೂರಿನ ಕಸ ವಿಲೇವಾರಿ ಬಗ್ಗೆ ಮಾತನಾಡಿರುವ ಐಎಎಸ್ ಅಧಿಕಾರಿ ಕ್ಯಾಪ್ಟನ್ ಮಣಿವಣ್ಣನ್ “ಬೆಂಗಳೂರಿನ ತ್ಯಾಜ್ಯ ನಿರ್ವಹಣೆಗಾಗಿ ಅಲ್ಲಿನ ಸರ್ಕಾರ ಪ್ರತಿವರ್ಷ ಸಾವಿರಾರು ಕೋಟಿ ಹಣವನ್ನು ವ್ಯವಿಸುತ್ತಿವೆ. ಹೀಗಿದ್ದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಯಶಶ್ವಿಯಾಗಿಲ್ಲ. ಕಸ ವಿಲೇವಾರಿಯಲ್ಲಿ ಬ್ಲಾಕ್ ಚೈನ್ ವ್ಯವಸ್ಥೆಯನ್ನು ಜಾರಿಗೆ ತರುವುದರಿಂದ ಈ ಸಮಸ್ಯೆಗೆ ಮುಕ್ತಿ ಪಡೆಯಬಹುದು”

ಬ್ಲಾಕ್ ಚೈನ್ ವ್ಯವಸ್ಥೆಯಲ್ಲಿ ಎಲ್ಲಾ ಬಗೆಯ ವ್ಯವಹಾರವನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಿಡುವುದರಿಂದ ಕಸ ವಿಲೇವಾರಿಯಲ್ಲಿ ನಡೆಯುತ್ತಿರುವ ಭ್ರಷ್ಟಚಾರ ನಿಲ್ಲುತ್ತದೆ. ಹಾಗಾಗಿ ಇದಕ್ಕೆ ಉತ್ತೇಜನ ನೀಡಲು ಹಾರ್ವರ್ಡ್ ಚೇಂಜ್ ಫೌಂಡೇಷನ್ 30000 ಡಾಲರ್ ದೇಣಿಗೆ ನೀಡಿದೆ” ಎಂದು ಹೇಳಿದ್ದಾರೆ..

ವಿಡಿಯೋ ನೋಡಿ

ಅಂದಹಾಗೆ ಐಎಎಸ್ ಅಧಿಕಾರಿ ಮಣಿವಣ್ಣನ್ ಅವರು ಪ್ರಸ್ತುತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನಿರ್ಧಿಷ್ಟ ವಿಷಯದ ಕುರಿತು ಅಧ್ಯಯನ ಮಾಡುತ್ತಿದ್ದು ಅವರಿಗೆ ಅಲ್ಲಿ ಸಿಗುವಂತಹ ಸ್ಕಾಲರ್ ಶಿಪ್ ಅನ್ನು ಕೂಡ ಬೆಂಗಳೂರು ಕಸ ವಿಲೇವಾರಿಯ ಬ್ಲಾಕ್ ಚೈನ್ ಪದ್ದತಿಗೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top