fbpx
ಸಮಾಚಾರ

“ದ್ರಾವಿಡ್​ರನ್ನು ಕೆಳಭಾಗದ ಅವಾಚ್ಯ ಪದಗಳಿಂದ ಬೈದಿದ್ದ ಶ್ರೀಶಾಂತ್”

ಭಾರತೀಯ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್​ ವಿರುದ್ಧಕ್ರಿಕೆಟಿಗ ಶ್ರೀಶಾಂತ್ ಅಸಭ್ಯತೆವಾಗಿ ವರ್ತಿಸಿದ್ದರು ಎಂಬ ವಿಚಾರವೊಂದು ಇದೀಗ ಬಹಿರಂಗವಾಗಿದೆ. ಟೀಂ ಇಂಡಿಯಾದ ಮಾನಸಿಕ ಕ್ಷಮತೆ ತರಬೇತುದಾರರಾಗಿದ್ದ ಪ್ಯಾಡಿ ಅಪ್ಟನ್ ಬರೆದಿರುವ ‘The Barefoot Coach’ ಎಂಬ ಪುಸ್ತಕದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ.

ರಾಜಸ್ಥಾನ್ ತಂಡದ ನಾಯಕರಾಗಿದ್ದ ರಾಹುಲ್ ದ್ರಾವಿಡ್​ರನ್ನು ಶ್ರೀಶಾಂತ್ ನೀಚ ಪದಬಳಕೆಯೊಂದಿಗೆ ಸಾರ್ವಜನಿಕವಾಗಿ ಮೂಲಕ ಬೈದಿದ್ದರು. 2013 ರಲ್ಲಿ ಮುಂಬೈ ವಿರುದ್ದದ ಐಪಿಎಲ್ ಪಂದ್ಯದ ವೇಳೆ ಶ್ರೀಶಾಂತ್​ರನ್ನು ಕೈ ಬಿಡಲಾಯಿತು. ಇದರಿಂದ ಕೋಪಗೊಂಡ ಶ್ರೀಶಾಂತ್ ದಿಗ್ಗಜ ಆಟಗಾರ ದ್ರಾವಿಡ್ ಅವರನ್ನು ಎಲ್ಲರ ಮುಂದೆ ಅವಾಚ್ಯವಾಗಿ ನಿಂದಿಸಿದ್ದರು. ಈ ವೇಳೆ ಶ್ರೀಶಾಂತ್ ಕೆಳ ಭಾಗದ ಪದಬಳಕೆ ಮಾಡಿದ್ದರು.. ಈ ವೇಳೆ ನಾನು ರಾಯಲ್ಸ್​ ತಂಡದ ತರಬೇತುದಾರನಾಗಿ ಕಾರ್ಯನಿರ್ವಹಿಸುತ್ತಿದ್ದೆ ಎಂದು ತಮ್ಮ ಪುಸ್ತಕದಲ್ಲಿ ಪ್ಯಾಡಿ ಬರೆದುಕೊಂಡಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀಶಾಂತ್ ” ಇದೊಂದು ಶುದ್ಧ ಸುಳ್ಳು ಆರೋಪವಾಗಿದ್ದು, ನಾನು ನನ್ನ ಸಹ ಆಟಗಾರರನ್ನು ಯಾವಾಗಲು ಗೌರವಿಸುತ್ತಾ ಬಂದಿರುವೆ. ಎಂದಿಗೂ ಕೂಡ ದ್ರಾವಿಡ್​ರೊಂದಿಗೆ ಅನುಚಿತವಾಗಿ ವರ್ತಿಸಿಲ್ಲ.. ಬೇರೆಯವರನ್ನು ಮೆಚ್ಚಿಸಲು ಪ್ಯಾಡಿ ಅಪ್ಟನ್ ನನ್ನ ಮೇಲೆ ಈ ರೀತಿ ಸುಳ್ಳು ಆರೋಪ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top