fbpx
ಸಮಾಚಾರ

ಸಿಎಂ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿ ಅಪಪ್ರಚಾರ ಮಾಡಿದ ಮೂವರು ಅರೆಸ್ಟ್

ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಚುನಾವಣೆ ಕೆಲಸದ ದಣಿವನ್ನು ನೀಗಿಸಿಕೊಳ್ಳಲು ಉಡುಪಿಯ ರೆಸಾರ್ಟ್ ನಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕುಮಾರಸ್ವಾಮಿ ಅವರು ರಾಧಿಕಾರ ಕುಮಾರಸ್ವಾಮಿ ಅವರ ಜೊತೆ ರೆಸಾರ್ಟ್ ಗೆ ಹೋಗಿದ್ದಾರೆ ಎಂದು ತಿರುಚಿ ಸುಳ್ಳು ಸುದ್ದಿ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದರು. ಇದಕ್ಕೆ ಸಂಭಂದಿಸಿದಂತೆ ಮೂವರನ್ನು ಪೊಲೀಸರು ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ.

ಆರೋಪಿಗಳಾದ ಅಜಿತ್ ಶೆಟ್ಟಿ ಹಿರಂಜಿ, ಗಂಗಾಧರ ಹಾಗು ಮತ್ತೊಬ್ಬ ವೆಬ್ ಪೋರ್ಟಲ್ ಒಂದರಲ್ಲಿ ಪ್ರಕಟಿಸಿದ್ದ ಸುಳ್ಳು ಸುದ್ದಿ ಜೆಡಿಎಸ್ ಕಾರ್ಯಕರ್ತರ ಕಣ್ಣಿಗೆ ಬಿದ್ದಿದ್ದು ಸುಳ್ಳು ಸುದ್ದಿ ಹರಡಿಸಿದ್ದ ವಿರುದ್ಧ ಜೆಡಿಎಸ್ ಕಾರ್ಯಕರ್ತರು ದೂರು ನೀಡಿದ್ದರು. ಈ ಪ್ರಕರಣವನ್ನು ಪೊಲೀಸ್ ನವರು ಸಹ ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಮೂವರನ್ನು ಬಂಧಿಸಿ ಎಫ್ಐಆರ್ ಜಡಿದಿದ್ದಾರೆ.

 

 

ಏನಿದು ವಿಚಾರ?
ಮುಖ್ಯಮಂತ್ರಿ ಕುಮಾರಸ್ವಾಮಿ ಚಿಕಿತ್ಸೆಗಾಗಿ ಉಡುಪಿಯ ಕಾಪುವಿನಲ್ಲಿರುವ ಪ್ರಕೃತಿ ಚಿಕಿತ್ಸಾಲಯಕ್ಕೆ ತೆರಳಿದ್ದನ್ನು ನೆಪ ಮಾಡಿಕೊಂಡು ಅವರು ದೇವಸ್ಥಾನಕ್ಕೆ ತೆರಳಿದಂತೆ, ಅಲ್ಲಿಗೆ ರಾಧಿಕಾ ಕುಮಾರಸ್ವಾಮಿ ಸಹ ಆಗಮಿಸಿದಂತೆ ಫೋಟೋ ಸೃಷ್ಟಿಸಿ ನಕಲಿ ಸುದ್ದಿಯನ್ನು ಪ್ರಕಟಿಸಿದ್ದರು. ಅಲ್ಲದೆ ಅದನ್ನು ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಮಾಡಲಾಗಿತ್ತು. ಸೋಷಿಯಲ್‌ ಮೀಡಿಯಾದಲ್ಲಿ ಸುತ್ತು ಹಾಕುತ್ತಿರುವ ಈ ಫೋಟೋಗಳು ಕೆಲ ವರ್ಷಗಳ ಹಿಂದೆ ತೆಗೆದಂತವು ಎಂದು ತಿಳಿದುಬಂದಿದೆ.

ಯುಕೆಸುದ್ದಿ.ಇನ್‌ ಎಂಬ ಪೋರ್ಟಲ್‌ನಲ್ಲಿ ಸಿಎಂ ಅವರ ಹಳೆಯ ಫೋಟೊಗಳನ್ನು ತಿದ್ದುಪಡಿ ಮಾಡಿ ಅವು ನೈಜವೆಂದು ಉಪಯೋಗಿಸಿ, ‘ರಾಧಿಕಾ ಜೊತೆ ಉಡುಪಿ ರೆಸಾರ್ಟ್‌ಗೆ ಆಗಮಿಸಿದ ಸಿಎಂ ಕುಮಾರಸ್ವಾಮಿ’ ಎಂದು ಶೀರ್ಷಿಕೆ ಕೊಟ್ಟು ಸುದ್ದ ಪ್ರಕಟಿಸಿ ಮಹಿಳೆಯ ಗೌರವಕ್ಕೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಸುದ್ದಿಯನ್ನು ಪ್ರಕಟಿಸಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top