fbpx
ಸಮಾಚಾರ

ತನ್ನನ್ನು ಟೀಕಿಸಿದ ಶಾಹಿದ್ ಅಫ್ರಿಧಿಗೆ ತಿರುಗೇಟು ಕೊಟ್ಟ ಗಂಭೀರ್.

ತಮ್ಮನ್ನ ಟೀಕಿಸಿರುವ ಪಾಕಿಸ್ತಾನದ ಮಾಜಿ ಕ್ರಿಕೆಟರ್​,ಶಾಹೀದ್ ಆಫ್ರೀಧಿಗೆ ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ತಿರುಗೇಟು ನೀಡಿದ್ದಾರೆ. ಶಾಹಿದ್ ಅಫ್ರಿದಿ ತಮ್ಮ ಆತ್ಮಕಥೆ ‘ಗೇಮ್ ಚೇಂಜರ್’ ಪುಸ್ತಕದಲ್ಲಿ ಗೌತಮ್ ಗಂಭೀರ್ ಅನ್ನು ವ್ಯಕ್ತಿತ್ವ ಹೀನ ಮನುಷ್ಯ ಎಂದು ಜರಿದಿರುವುದಕ್ಕಾಗಿ ಗಂಭೀರ್ ತಿರುಗೇಟು ನೀಡಿದ್ದಾರೆ.

ಗಂಭೀರ್ ತಿರುಗೇಟು:
“ಆಫ್ರೀದಿ ನೀನೊಬ್ಬ ತಮಾಷೆಯ ವ್ಯಕ್ತಿ. ಅದೇನೆ ಇರಲಿ, ಭಾರತ ಈಗಲೂ ಮೆಡಿಕಲ್ ಟೂರಿಸಂಗಾಗಿ ನಿಮಗೆ ವೀಸಾಗಳನ್ನ ನೀಡುತ್ತಿದ್ದೇ, ಬಾ ನಾನೇ ನಿನ್ನ ಮನೋವೈದ್ಯರ ಹತ್ತಿರ ಕರೆದುಕೊಂಡು ಹೋಗುತ್ತೇನೆ” ಎಂದು ಟ್ವಿಟ್​ ಮಾಡಿದ್ದಾರೆ.ಈ ಮೂಲಕ ಆಫ್ರೀದಿಗೆ ತಕ್ಕ ತಿರುಗೇಟು ನೀಡಿದ್ದಾರೆ.

 

 

ಅಫ್ರಿದಿ ಪುಸ್ತಕದಲ್ಲಿ ಇರುವುದೇನು?
ಇತ್ತೀಚೆಗಷ್ಟೇ ಅಫ್ರಿದಿ ಅವರು ‘ಗೇಮ್​ ಚೇಂಜರ್​’ ಹೆಸರಿನ ಆತ್ಮ ಚರಿತ್ರೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಗಂಭೀರ್​ ಹೆಸರನ್ನು ಉಲ್ಲೇಖಿಸಿ, ಆತನಿಗೆ ವ್ಯಕ್ತಿತ್ವವೇ ಇಲ್ಲ. ಅವನ ವರ್ತನೆಯೂ ಸರಿಯಿಲ್ಲ ಎಂದು ಜರಿದಿದ್ದಾರೆ. ಅಲ್ಲದೆ, ಕ್ರಿಕೆಟ್​ನಲ್ಲಿ ಗಂಭೀರ್​ ಅವರದ್ದು ಒಂದು ಪಾತ್ರವಷ್ಟೇ. ಆತನ ವರ್ತನೆಯಿಂದಲೇ ಕ್ರಿಕೆಟ್​ನಲ್ಲಿ ಹೇಳಿಕೊಳ್ಳುವಂತಹ ದಾಖಲೆಯನ್ನೂ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.

ಕ್ರಿಕೆಟಿನಲ್ಲಿ ಗಂಭೀರ್ ಗೌತಮ್ ಯಾವುದೇ ದಾಖಲೆಗಳನ್ನು ಹೊಂದಿಲ್ಲದಿದ್ದರೂ ಅವರಿಗೆ ಆ್ಯಟಿಟ್ಯೂಡ್ ಸಮಸ್ಯೆ ಇದೆ. ಆತ ತನ್ನನ್ನು ತಾನು ಡಾನ್ ಬ್ರಾಡ್ಮನ್, ಜೇಮ್ಸ್ ಬಾಂಡ್ ಮೀರಿಸುವ ಆಟಗಾರ ಎಂದು ತಿಳಿದುಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

2007 ರಲ್ಲಿ ನಡೆದ ಜಗಳದ ಕುರಿತು ಪ್ರಸ್ತಾಪ ಮಾಡಿರುವ ಅಫ್ರಿದಿ, ಗೌತಮ್ ರನ್ ಓಡುತ್ತಿದ್ದ ವೇಳೆ ನಡೆದ ಘಟನೆ ನನಗೆ ನೆನಪಿದೆ. ಆತ ತನ್ನ ಒಂಟಿ ರನ್ ಪೂರ್ಣಗೊಳಿಸಲು ನನ್ನ ಮೇಲೆಯೇ ನುಗ್ಗಿ ಬಂದ. ಆ ವೇಳೆ ಅಂಪೈರ್ ನಡುವೆ ಬಂದು ತಿಳಿಸಿಗೊಳಿಸಿದ್ದರು ಎಂದು ಉಲ್ಲೇಖಿಸಿದ್ದಾರೆ. ಇಬ್ಬರ ನಡುವೆ ಸಾಕಷ್ಟು ವಿಚಾರಗಳಿಗೆ ಜಗಳ ಆಗಿದೆ. ಕರಾಚಿಯಲ್ಲಿ ಇಂತಹ ವ್ಯಕ್ತಿಗಳನ್ನು ‘ಉರ್ಕೊಳ್ಳುವವರು’ ಎಂದು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top