fbpx
ಸಮಾಚಾರ

ಎಂದೂ ಬೇರೆಯವರಿಂದ ಶೇವ್ ಮಾಡಿಸಿಕೊಳ್ಳದ ಸಚಿನ್ ಈ ಯುವತಿಯಿಂದ ಶೇವಿಂಗ್ ಮಾಡಿಸಿಕೊಂಡಿದ್ದು ಈ ಕಾರಣಕ್ಕಂತೆ.

ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಹಿಂದೆಂದೂ ಬೇರೆಯವರ ಕೈನಯಲ್ಲಿ ಶೇವಿಂಗ್ ಮಾಡಿಸಿಲ್ಲವಂತೆ. ಆದರೆ ತಮ್ಮ ಜೀವನದಲ್ಲೇ ಇದೆ ಮೊದಲ ಬಾರಿಗೆ ಬೇರೆಯವರಿಂದ ಸಚಿನ್ ಶೇವ್ ಮಾಡಿಸಿಕೊಂಡಿದ್ದು ಅದೂ ಯುವತಿಯ ಕೈಯಲ್ಲಿ ಶೇವ್ ಮಾಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ವಿಚಾರವನ್ನು ಸ್ವತ: ಸಚಿನ್ ತೆಂಡೂಲ್ಕರ್ ತಮ್ಮ ಅಧಿಕೃತ ಟ್ವಿಟರ್ ಪುಟದಲ್ಲಿ ಬಹಿರಂಗಪಡಿಸಿದ್ದಾರೆ.

ಉತ್ತರ ಪ್ರದೇಶದ ನೇಹಾ, ಜ್ಯೋತಿ ಎಂಬ ಯುವತಿಯರು ನಡೆಸುತ್ತಿರುವ ಹೇರ್​ ಸಲೂನ್​ನಲ್ಲಿ ಗಡ್ಡ ತೆಗೆಸಿಕೊಂಡಿದ್ದಾರೆ.ಈ ಬಗ್ಗೆ ತಮ್ಮ ಇನ್ಸ್​ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿರುವ ಸಚಿನ್,ನಾನು ಈವರೆಗು ಬೇರೊಬ್ಬರಿಂದ ಶೇವ್ ಮಾಡಿಸಿಕೊಂಡಿರಲಿಲ್ಲ.ಆ ದಾಖಲೆ ಇವತ್ತು ಬ್ರೇಕ್ ಆಯ್ತು.ಈ ಬಾರ್ಬರ್​ಶಾಪ್​ ಹಡುಗಿಯರನ್ನ ಭೇಟಿಯಾಗಿ,ಸ್ಕಾಲರ್​ಶಿಪ್ ವಿತರಿಸಿದ್ದು ನನ್ನ ಭಾಗ್ಯ ಎಂದು ಸಚಿನ್ ಬರೆದುಕೊಂಡಿದ್ದಾರೆ.

 

 

ಸಾಮಾನ್ಯವಾಗಿ ಸಲೂನ್ ಶಾಪ್ ಗಳಲ್ಲಿ ಪುರುಷರು ಪ್ರಾಬಲ್ಯವನ್ನು ಹೊಂದಿದ್ದಾರೆ .ಅಂತದದರಲ್ಲಿ ಈಗ ಉತ್ತರಪ್ರದೇಶದ ಮಹಿಳೆಯರಿಬ್ಬರು ಇಂತಹ ಪ್ರಾಬಲ್ಯವನ್ನು ಮುರಿಯುವ ಯತ್ನಕ್ಕೆ ಕೈಜೋಡಿಸಿದ್ದಾರೆ. ಉತ್ತರ ಪ್ರದೇಶದ ಬನ್ವಾರಿ ತೊಲೊ ಎನ್ನೋ ಊರಿನ ಈ ಅಕ್ಕ ತಂಗಿಯರು, ಮೊದಲು ಅಪ್ಪನಿಗೆ ಸಹಾಯವಾಗಲು ಕ್ಷೌರ ಮಾಡುವುದನ್ನ ಕಲಿತುಕೊಂಡರು.ಆದರೆ 2014 ರಲ್ಲಿ ತಮ್ಮ ತಂದೆ ಕಾಯಿಲೆ ತುತ್ತಾದ ನಂತರ ಇದೇ ಇವರಿಗೆ ಜೀವನಧಾರವಾಯ್ತು. ಪುರುಷ ಕೇಂದ್ರಿತ ವೃತ್ತಿಯಲ್ಲಿ ಈ ಅಕ್ಕತಂಗಿಯರ ಕಾರ್ಯದ ಬಗ್ಗೆ ತಿಳಿದ ಜಿಲ್ಲೆಟ್ ಬ್ಲೆಡ್​ ಕಂಪನಿ ಇವರನ್ನ ಇಟ್ಟುಕೊಂಡು ಜಾಹೀರಾತವೊಂದನ್ನ ಕೂಡ ತಯಾರಿಸಿತ್ತು.. ಈ ಜಾಹೀರಾತ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಯುವತಿಯರ ಶಿಕ್ಷಣಕ್ಕೆ ನೆರವಾಗಲೆಂದು ಜಿಲೆಟ್ ಕಂಪನಿಯು ಸ್ಕೋಲೊರ್ ಶಿಪ್ ನೀಡಿದ್ದು ಅದನ್ನು ಸಚಿನ್ ತೆಂಡೂಲ್ಕರ್ ಅವರ ಮೂಲಕ ನೀಡಿಸಿದೆ.. ಸ್ಕಾಲರ್​ಶಿಪ್ ವಿತರಿಸಿದಾಗ ಯುವತಿಯರ ಸ್ವಾವಲಂಬಿ ಜೀವನದ ಬಗ್ಗೆ ತಿಳಿದು ಮೆಚ್ಚಿಕೊಂಡ ಸಚಿನ್ ಎಂದೂ ಬೇರೆಯವರ ಕೈನಲ್ಲಿ ಶೇವ್ ಮಾಡಿಸಿಕೊಳ್ಳದೆ ಇದ್ದರೂ ಆ ಯುವತಿಯರಿಂದ ಶೇವಿಂಗ್ ಮಾಡಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top