fbpx
ಸಮಾಚಾರ

ಪ್ರಾಣೇಶ್ ನೇತೃತ್ವದಲ್ಲಿ ನೂರಾರು ಜನರ ಸ್ವಯಂ ಸ್ವಚ್ಛತಾ ಆಂದೋಲನ.

‘ಸ್ವಚ್ಛ ಭಾರತ’ ಎಂಬ ಹೆಸರಿನಲ್ಲಿ ಕೈನಲ್ಲೊಂದು ಪೊರಕೆ ಹಿಡಿದು ರಾಜಕಾರಣಿಗಳು ಫೋಟೋಗೆ ಪೋಸ್ ಕೊಟ್ಟು ಮಾರುದ್ಧ ಭಾಷಣ ಬಿಗಿಯುವುದನ್ನು ನೋಡಿದ್ದೇವೆ. ಆದ್ರೆ ಇದೀಗ ಕೊಪ್ಪಳದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಸ್ವಯಂ ಸ್ವಚ್ಛತಾ ಆಂದೋಲನದ ಹವಾ ಸೃಷ್ಟಿಯಾಗಿದೆ. ಪರಿಣಾಮವಾಗಿ ಇದೀಗ ಜಿಲ್ಲಾದ್ಯಂತ ಹಳ್ಳಕೊಳ್ಳ ಸೇರಿದಂತೆ ಎಲ್ಲೆಂದರಲ್ಲಿ ಸ್ವಯಂ ಸ್ವಚ್ಛತಾ ಕಾರ್ಯಗಳು ನಡೆಯುತ್ತಿವೆ. ಈ ಆಂದೋಲನದಲ್ಲಿ ಸ್ವಯಂ ಪ್ರೇರಿತವಾಗಿ ಸ್ಥಳೀಯರು ಪಾಲ್ಗೊಳ್ಳುತ್ತಿದ್ದು ಸ್ವಚ್ಛತಾ ಕಾರ್ಯದಲ್ಲಿ ಮುಳುಗಿದ್ದಾರೆ.

ಅದರಂತೆ ನೆನ್ನೆ ಗಂಗಾವತಿಯ ದುರ್ಗಮ್ಮ ಹಳ್ಳದ ಸ್ವಚ್ಛತೆ ಕಾರ್ಯ ಕೂಡ ನಡೆದಿದ್ದು ಇದಕ್ಕೆ ಹಾಸ್ಯ ದಿಗ್ಗಜ ಬಿಚಿ ಪ್ರಾಣೇಶ್ ನೇತೃತ್ವವನ್ನು ವಹಿಸಿಕೊಂಡು ಗಂಗಾವತಿ ನೂರಾರು ಜನ ಜೊತೆ ಸೇರಿಕೊಂಡು ಮೂರು ಕಿಮೀ ದೂರದವರೆಗೆ ಹಳ್ಳ ಸ್ವಚ್ಛಗೊಳಿಸಿದ್ದಾರೆ. ದುರ್ಗಮ್ಮ ಹಳ್ಳ ಸ್ವಚ್ಛತಾ ಸೇವಾ ಸಮಿತಿ ಮೊದಲ ಹಂತದಲ್ಲಿ ಪ್ಲಾಸ್ಟಿಕ್ ಕಚ್ಚಾವಸ್ತುಗಳನ್ನು ತೆಗೆದಿದ್ದು ನಂತರ ಹಳ್ಳದ ಹೂಳು ತಗೆಯುವ ಕಾರ್ಯಕ್ಕೆ ಮುಂದಾಗಿದೆ. ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಈ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.

ಈ ವೇಳೆ ಮಾತನಾಡಿದ ಹಾಸ್ಯ ದಿಗ್ಗಜ ಬಿಚಿ ಪ್ರಾಣೇಶ್ “ನಗರದ ಮಧ್ಯ ಇರುವ ಈ ಹಳ್ಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಇದನ್ನು ಒಂದು ಪ್ರವಾಸಿ ತಾಣವಾಗುವಂತೆ ಮಾಡುವುದೇ ಗುರಿಯಾಗಿದೆ. ಹಳ್ಳದ ಪಕ್ಕದಲ್ಲೇ ಇರುವ ದುರ್ಗಮ್ಮ ಗುಡಿಗೆ ಬರುವವರು ಈ ಹಳ್ಳದಲ್ಲಿ ಸ್ನಾನ ಮಾಡಿ ಬರುವಂತೆ ಆಗಬೇಕು” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top