fbpx
ಸಮಾಚಾರ

ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡಲು ಮತ್ತೊಮ್ಮೆ ಇಂಗ್ಲೆಂಡ್’ಗೆ ಹೋಗಲಿದ್ದಾರೆ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯಷ್ಟೇ ಅಲ್ಲ, ಕ್ರಿಕೆಟ್’ನಲ್ಲೂ ಸೈ ಎನಿಸಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸೆಲಬ್ರಿಟಿ ಕ್ರಿಕೆಟ್ ಲೀಗ್ ಮತ್ತು ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್’ಮ್ಯಾನ್ ಆಗಿ ಕಿಚ್ಚ ಸುದೀಪ್ ಸಾಕಷ್ಟು ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೆ ಕೆಸಿಸಿ ಎಂಬ ಪಂದ್ಯಾವಳಿಯನ್ನು ಆಯೋಜಿಸಿ ಯಶಸ್ಸನ್ನು ಕೂಡ ಕಂಡಿದ್ದಾರೆ.

ಇದೀಗ ಕ್ರಿಕೆಟ್​ ಕಾಶಿ ಲಾರ್ಡ್ಸ್​​ನಲ್ಲಿ ಬ್ಯಾಟ್​​​ ಬೀಸೋಕೆ ಅಭಿನಯ ಚಕ್ರವರ್ತಿ ತಯಾರಿ ನಡೆಸ್ತಿದ್ದಾರೆ. ಎರಡು ವರ್ಷದ ಹಿಂದೆ ಲಾರ್ಡ್ಸ್​​​ನಲ್ಲಿ ಸುದೀಪ್ ನಾಯಕತ್ವದ ವಿಶನೇರ್ ಕರ್ನಾಟಕ ತಂಡ ಟ್ರೋಫಿ ಗೆದ್ದು ಬೀಗಿತ್ತು. ಇದೀಗ ಮತ್ತೆ ಅದೇ ಟೂರ್ನಿಯಲ್ಲಿ ಆಡೋಕೆ ಮುಂದಿನ ತಿಂಗಳು ಸುದೀಪ್ ಇಂಗ್ಲೆಂಡ್ ಫ್ಲೈಟ್ ಏರ್ತಿದ್ದಾರೆ. ಈ ವಿಚಾರವನ್ನ ಟ್ವೀಟ್ ಮಾಡಿರೋ ತಿಳಿಸಿರೋ ಸುದೀಪ್, ಲಾರ್ಡ್ಸ್​​ ಮೈದಾನದಲ್ಲಿ ಆಡೋದಕ್ಕೆ ಉತ್ಸಕರಾಗಿರೋದಾಗಿ ಬರೆದುಕೊಂಡಿದ್ದಾರೆ.

ಎರಡು ವರ್ಷದ ನಂತರ ಮತ್ತೆ ಕಾರ್ಪೊರೇಟ್ ಕ್ರಿಕೆಟ್ ಡೇ ಟೂರ್ನಿ ಆಡಲು ಹೋಗುತ್ತಿದ್ದಾರೆ ಕನ್ನಡದ ನಟ. ಕಳೆದ ಬಾರಿ ರಾಜೀವ್, ಧ್ರುವ ಶರ್ಮಾ ಕೂಡ ಭಾಗವಹಿಸಿದ್ದರು. ಆದ್ರೆ, ಈ ಸಲ ಸುದೀಪ್ ಒಬ್ಬರೇ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜೂನ್ 12 ರಂದು ಕ್ರಿಕೆಟ್ ಕಾಶಿ ಎಂದೇ ಕರೆಯಲಾಗುವ ಇಂಗ್ಲೆಂಡ್’ನ ಲಾರ್ಡ್ಸ್ ಗ್ರೌಂಡ್’ನಲ್ಲಿ ನಡೆಯಲಿರುವ ಕಾರ್ಪೊರೇಟ್ ಕ್ರಿಕೆಟ್ ಡೇ ಟೂರ್ನಿ ನಡೆಯುತ್ತಿದ್ದು, ಇದರಲ್ಲಿ ಭಾರತದಿಂದ ಏಕೈಕ ನಟ ಸುದೀಪ್ ಆಡುತ್ತಿರುವುದು ವಿಶೇಷ.

ಅಂದಹಾಗೆ ಕಿಚ್ಚ ಸುದೀಪ್ ಅವರು ಯಾವ ತಂಡದಲ್ಲಿದ್ದಾರೆ? ಅವರ ತಂಡದಲ್ಲಿ ಯಾವ ವೃತ್ತಿಪರ ಆಟಗಾರರಿರುತ್ತಾರೆ ಎಂಬುದು ಇನ್ನೂ ಗೊತ್ತಾಗಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top