fbpx
ಸಮಾಚಾರ

ಮಂಡ್ಯದಲ್ಲಿ ಹಿಂದಿವಾಲನ ದಬ್ಬಾಳಿಕೆ- ಹಿಂದಿ ಬಾರದ ರೈತನನ್ನು ಬ್ಯಾಂಕ್ ನಿಂದ ಹೊರಗಟ್ಟಿದ ಹಿಂದಿ ನೌಕರ.

ಕೇಂದ್ರ ಸರ್ಕಾರಿ ನೌಕರಿಯಲ್ಲಿ ಹಿಂದಿ ಭಾಷಿಕರಿಗೆ ಆದ್ಯತೆ, ಮತ್ತೊಂದೆಡೆ ಅಂಚೆ ಕಚೇರಿ, ರೈಲ್ವೆ, ಬ್ಯಾಂಕು ಮತ್ತಿತರ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಹಿಂದಿ ಭಾಷೆಗೆ ಹೆಚ್ಚು ಪ್ರಾಮುಖ್ಯತೆ, ಹೀಗೆ ಹತ್ತು ಹಲವು ‘ಹಿಂದಿ ಹೇರಿಕೆ’ಗಳ ವಿರುದ್ಧ ಆಕ್ರೋಶ ಹೆಚ್ಚುತ್ತಿರುವ ನಡುವೆಯೇ ಕನ್ನಡಿಗರ ಸ್ವಾಭಿಮಾನ ಬಡಿದೆಬ್ಬಿಸುವಂತಹ ಘಟನೆಯೊಂದು ಮಂಡ್ಯದಲ್ಲಿ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತನ್ನೊಂದಿಗೆ ವ್ಯವಹರಿಸಬೇಕೆಂದರೆ ನೀವು ಹಿಂದಿ ಕಲಿಯಬೇಕು, ತಾನು ಕನ್ನಡ ಮಾತನಾಡಲಾರೆ ಎಂದು ಸ್ಥಳೀಯ ಗ್ರಾಹಕರೊಂದಿಗೆ ಉದ್ಧಟತನ ತೋರಿಸಿದ ಬ್ಯಾಂಕ್‌ ನೌಕರನನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ಮದ್ದೂರು ತಾಲೂಕು ಕೆ. ಎಂ. ದೊಡ್ಡಿಯಲ್ಲಿ ನಡೆದಿದೆ.

ಮದ್ದೂರಿನ ಕೆ.ಎಂ.ದೊಡ್ಡಿ ಬ್ರಾಂಚ್‌ನ ಎಸ್‌ಬಿಐ ಬ್ಯಾಂಕ್‌ನ ಅಕೌಂಟೆಂಟ್ ಸುನಿಲ್ ಎಂಬುವರು, ಬ್ಯಾಂಕ್‌ಗೆ ಬಂದ ರೈತನೊಟ್ಟಿಗೆ ಹಿಂದಿಯಲ್ಲಿ ಮಾತನಾಡಿದ್ದಾರೆ, ಆದರೆ ರೈತ ತನಗೆ ಹಿಂದಿ ಬರುವುದಿಲ್ಲ ಎಂದು ಹೇಳಿದ್ದಕ್ಕೆ ಸಿಟ್ಟಾದ ಸುನಿಲ್ ಹಿಂದಿ ಬುರುವುದಿಲ್ಲವಾದರೆ ಬ್ಯಾಂಕ್ ನಿಂದ ಹೊರಗೆ ಹೋಗು ಎಂದು ದಬ್ಬಾಳಿಕೆ ಮಾಡಿದ್ದಾನೆ.. “ಇದು ಹಿಂದೂಸ್ತಾನ, ನಾನು ಇಲ್ಲಿ ಕನ್ನಡ ಕಲಿಯಬೇಕಾದ ಅವಶ್ಯಕತೆ ಇಲ್ಲ, ನಿನಗೆ ಹಿಂದಿ ಬರದೇ ಇದ್ದರೆ ಬ್ಯಾಂಕಿನಿಂದ ಹೊರಗೆ ಹೋಗು” ಎಂದು ದಬಾಯಿಸಿದ್ದಾನೆ. ಒಂದು ಹಂತದಲ್ಲಿ ಅಂತೂ ಸುನಿಲ್, ‘ಹಿಂದಿ ಬರದೇ ಇದ್ದರೆ ದೇಶವನ್ನೇ ಬಿಟ್ಟು ಹೋಗು ಎಂದು ಕೂಡ ಅಬ್ಬರಿಸಿದರು’ ಎಂದು ಹೇಳಲಾಗಿದೆ.

ಇದರಿಂದ ಕೆರಳಿದ ಗ್ರಾಹಕರು, ನಾವು ಹಳ್ಳಿ ಜನ. ನಮಗೆ ಕನ್ನಡವೇ ಓದಲು ಬರೆಯಲು ಬರೋದಿಲ್ಲ. ಇನ್ನು ಹಿಂದಿ ಕಲಿಯಲು ಎಲ್ಲಿಗೆ ಹೋಗೋಣ ಎಂದು ತರಾಟೆಗೆ ತೆಗೆದು ಕೊಂಡಿದ್ದಾರೆ. ಇದರಿಂದ ಕೆಲ ಕಾಲ ದಂಗಾದ ಬ್ಯಾಂಕ್‌ ಇತರ ಸಿಬ್ಬಂದಿ, ಸಂಧಾನ ಮಾಡಿಸಿ, ಪ್ರಕರಣವನ್ನು ಸಮಾಪ್ತಿ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಕನ್ನಡಿಗರ ಸ್ವಾಭಿಮಾನವನ್ನು ಕೆರಳಿಸಿದೆ.,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top