fbpx
ಸಮಾಚಾರ

ರಾತ್ರೋರಾತ್ರಿ ಸ್ಟಾರ್ ಆದ​ ಆರ್​ಸಿಬಿಯ ಈ ಲೇಡಿ ​ಫ್ಯಾನ್ ಯಾರು ಗೊತ್ತಾ?.

ಇದು ಆನ್‌ಲೈನ್ ಯುಗದ ಅಸಲೀ ಚಮತ್ಕಾರ. ಕಳೆದೆರಡು ತಿಂಗಳ ಹಿಂದೆಯಷ್ಟೇ ಹುಬ್ಬು ಹರಿಸೋ ಪುಟ್ಟ ವಿಡಿಯೋ ಮೂಲಕ ಒಂದು ಹಗಲು ಮತ್ತು ರಾತ್ರಿ ಸರಿಯುವಷ್ಟರಲ್ಲೇ ಯದ್ವಾ ತದ್ವಾ ಫೇಮಸ್ ಆದ ಪ್ರಿಯ ಪ್ರಕಾಶ್ ಬಗ್ಗೆ , ಹಾಗೆಯೇ ಇತ್ತೀಚಿಗೆ ಡ್ಯಾನ್ಸ್ ಮೂಲಕ ಫೇಮಸ್ ಆಗಿರುವ ಡಾನ್ಸಿಂಗ್ ಅಂಕಲ್ ಬಗ್ಗೆ ನಿಮಗೆಲ್ಲಾ ಗೊತ್ತಿರಬಹುದು. ಅದೇ ರೀತಿಯ ಮತ್ತೊಬ್ಬ ಇಂಟರ್‌ನೆಟ್‍ ಸ್ಟಾರ್ ಇದೀಗ ಉದಯವಾಗಿದೆ.

ನೆನ್ನೆ ಬೆಂಗಳೂರಿನಲ್ಲಿ ನಡೆದ ಐಪಿಎಲ್​ನ ಅಂತಿಮ ಪಂದ್ಯದಲ್ಲಿ ಆರ್​ಸಿಬಿ ತಂಡ ಹೈದರಾಬಾದ್ ತಂಡವನ್ನು ಸೋಲಿಸಿ ಗೆಲುವಿನ ಮೂಲಕ ಟೂರ್ನಿಗೆ ವಿದಾಯ ಹೇಳಿತು. ಆದರೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಗುರುಕೀರತ್ ಮತ್ತು ಶಿಮ್ರನ್ ಹೆಟ್ಮಾಯರ್ ಗಿಂತಲೂ ಇಲ್ಲೊಬ್ಬ ಹುಡುಗಿ ಹೆಚ್ಚು ಸದ್ದು ಮಾಡುತ್ತಿದ್ದಾಳೆ.

RCB​ ತಂಡದ ಈ ಲೇಡಿ ಅಭಿಮಾನಿ ಒಂದೇ ರಾತ್ರಿಯಲ್ಲಿ ಸ್ಟಾರ್ ಆಗಿಬಿಟ್ಟಿದ್ದಾಳೆ. ಫೇಸ್ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ಗಳಲ್ಲಿ ಸದ್ಯ ಈ ಹುಡಿಗಿಯದ್ದೇ ಹವಾ. ಪಂದ್ಯದಲ್ಲಿ ಕ್ಯಾಮರಾಮನ್​ ಕಣ್ಣಿಗೆ ಅದ್ಯಾವಾಗ ಈ ಹುಡುಗಿ ಬಿದ್ದಳೋ ಏನೋ..ಆರ್​ಸಿಬಿ ಯಶಸ್ಸು ಗಳಿಸಿದಾಗಲೆಲ್ಲಾ ಈ ಹುಡುಗಿಯ ಕಡೆ ಕ್ಯಾಮರಾ ತಿರುಗಿಸಿದ್ದೇ ತಿರುಗಿಸಿದ್ದು.. ಹೀಗೆ ತಿರುಗಿಸಿದಾಗಲೆಲ್ಲಾ ಆ ಹುಡುಗಿ ಕುಣಿದು ಕುಪ್ಪಳಿಸಿ RCB ತಂಡಕ್ಕೆ ಚೀರ್ ಮಾಡುತ್ತಿದ್ದಳು.

ಯಾರು ಈ ಹುಡುಗಿ
ನೋಡಲು ಮುದ್ದು ಮುದ್ದಾಗಿ ಕಾಣಿಸುವ ಈ ಬೆಡಗಿಯ ಹೆಸರು ದೀಪಿಕಾ ಘೋಸ್, ಈಕೆ ವಿರಾಟ್​ ಕೊಹ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಡೈಹಾರ್ಡ್​ ಫ್ಯಾನ್.. ನಿನ್ನೆ ಮ್ಯಾಚ್ ವೇಳೆ​ ರೆಡ್​ ಕ್ರಾಪ್​-ಟಾಪ್ ಧರಿಸಿದ್ದ ಈ ಸುಂದರಿ, ಆರ್​ಸಿಬಿಗೆ ಚಿಯರ್​ ಮಾಡುವುದರ ಜೊತೆಗೆ ಪಡ್ಡೆಹುಡುಗರ ಹೃದಯವನ್ನು ಕದ್ದುಬಿಟ್ಟಿದ್ದಾಳೆ.. ಕ್ರಿಕೆಟ್​ ಫ್ಯಾನ್ಸ್​ನ ಈ ನ್ಯೂ ಕ್ರಷ್​ ಎಷ್ಟರಮಟ್ಟಿಗಿದೆ ಇದೆ ಅಂದ್ರೆ, ನಿನ್ನೆವರೆಗೂ ಇನ್ಸ್​​ಟಾಗ್ರಾಂನಲ್ಲಿ ಕೇವಲ 4 ಸಾವಿರ ಫಾಲೋವರ್ಸ್ ಹೊಂದಿದ್ದ ದೀಪಿಕಾ ಈಗ ಒಂದು ಲಕ್ಷಕ್ಕೂ ಹೆಚ್ಚು ಜನ ಫಾಲೋಯಾರ್ಸ್ ಅನ್ನು ಹೊಂದಿದ್ದಾಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top