fbpx
ಸಮಾಚಾರ

ಬಿಸ್ಕತ್ ಮಾರುತ್ತಲೇ SSLCಯಲ್ಲಿ ಸಾಧನೆ ಮಾಡಿದ ಬಡ ಗ್ರಾಮೀಣ ಪ್ರತಿಭೆಗೆ ಕಿಚ್ಚನ ಅಭಿನಂದನೆ.

ಕನ್ನಡ ಚಿತ್ರರಂಗದ ಮಟ್ಟಿಗೆ ಟ್ವಿಟ್ಟರ್ ನಲ್ಲಿ ಹೆಚ್ಚು ಆಕ್ಟಿವ್ ಇರುವ ನಟರುಗಳಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಒಬ್ಬರು. ಅದರಲ್ಲೂ ಟ್ವಿಟ್ಟರ್​ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಶುಭಾಶಯ ತಿಳಿಸುತ್ತಾ ರಿಪ್ಲೈ ಮಾಡುತ್ತಿರುತ್ತಾರೆ.. ಆಗಾಗ್ಗೆ ಯಾರಾದರೂ ಸಾಧನೆ ಮಾಡಿದರೆ ಅದನ್ನು ತಮ್ಮ ಖಾತೆಯಲ್ಲಿ ಶೇರ್ ಮಾಡಿ ಅಭಿನಂದಿಸುವ ಸುದೀಪ್ ಇದೀಗ ಇದೀಗ ಬಡತನದ ಬೇಗೆಯಲ್ಲಿ ಹರಳಿದ ಪ್ರತಿಭೆಯೊಬ್ಬರಿಗೆ ಟ್ವೀಟ್ ಮಾಡುವ ಮೂಲಕ ಕಿಚ್ಚ ಸುದೀಪ್ ಪ್ರೋತ್ಸಾಹ ನೀಡಿದ್ದಾರೆ.

ಇತ್ತೀಚೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಶೇ.95 ರಷ್ಟು ಅಂಕಗಳೊಂದಿಗೆ ಗೌರಿ ಶ್ರೀಶೈಲ ಕಣ್ಣೂರು ಎಂಬ ಬಾಲಕಿ ಉತೀರ್ಣರಾಗಿದ್ದರು. ಹುಬ್ಬಳಿಯ ಈ ಬಾಲಕಿಯ ಸಾಧನೆ ಹಿಂದೆ ಬಡತನದ ಬೇಗೆಯ ಕತೆಯು ಕೂಡ ಇತ್ತು. ಇದನ್ನು ಖಾಸಗಿ ಪತ್ರಿಕೆಯೊಂದು ವರದಿ ಮಾಡಿ ಹುಡುಗಿಯ ಪರಿಶ್ರಮದ ವಿಚಾರವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿತ್ತು.

 

 

ಆ ಹುಡುಗಿ ಬಿಡುವಿನ ವೇಳೆಯಲ್ಲಿ ಸಂತೆಯಲ್ಲಿ ಬಿಸ್ಕೆಟ್ ಹಾಗೂ ಬಟರ್ ಮಾರಿಕೊಂಡು ಸಂಸಾರ ಬಂಡಿಯನ್ನು ಸಾಗಿಸಲು ಪೋಷಕರಿಗೆ ನೆರವಾಗುತ್ತಿದ್ದಳು.. ಕೆಲಸದೊಂದಿಗೆ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದ್ದ ಗೌರಿ, ಎಸ್​ಎಸ್​ಎಲ್​ಸಿಯಲ್ಲಿ ದೊಡ್ಡ ಸಾಧನೆ ಮಾಡಿದ್ದರು. ಈ ಸ್ಟೋರಿಯನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವ ಸುದೀಪ್, ಗೌರಿ ಶೀಶೈಲರಿಗೆ ಅಭಿನಂದನೆ ಮಾಡಿದ್ದಾರೆ.

‘ಈ ಅದ್ಭುತ ತಂದೆಗೂ ಹಾಗೂ ಸಾಧನೆಗೈದ ಅತ್ಯಾದ್ಭುತ ಮಗಳಿಗೂ ನನ್ನ ಹೃದ್ಪೂರ್ವಕ ಅಭಿನಂದನೆಗಳು’ ಎಂದು ಕಿಚ್ಚ ಟ್ವೀಟ್​ ಮಾಡಿ ತಿಳಿಸಿದ್ದರು. ಈ ಮೂಲಕ ಬಡ ಪ್ರತಿಭೆಯನ್ನು ಸಾಧನೆಯನ್ನು ಟ್ವಿಟ್ಟರ್ ನಲ್ಲಿ ಎಲ್ಲರಿಗೆ ತೋರಿಸಿದ್ದಾರೆ. ಕಿಚ್ಚನ ಈ ಪ್ರೋತ್ಸಾಹಕರ ಹೇಳಿಕೆಗೆ ಟ್ವಿಟಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಇಂತಹ ಬಡ ಗ್ರಾಮೀಣ ಪ್ರತಿಭೆಗೆ ಸ್ಪೂರ್ತಿ ನೀಡುವಂತಾ ಕಿಚ್ಚನ ಪ್ರೋತ್ಸಾಹವನ್ನು ನೋಡಿದರೆ ಆ ಹುಡುಗಿಗೂ ಅತೀವ ಸಂತೋಷವಾಗಬಹುದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top