fbpx
ಸಮಾಚಾರ

ವೈರಲ್ ಆಯ್ತು ವಿಂಗ್ ಕಮಾಂಡರ್ ಅಭಿನಂದನ್ ಸಂಭಂದಿಸಿದ ಹೊಸ ವೀಡಿಯೋ

ಪಾಕಿಸ್ತಾನ ನೆಲದಲ್ಲಿ ಶೌರ್ಯ, ದೇಶ ಭಕ್ತಿ ಮೆರೆದು ಖ್ಯಾತರಾಗಿರುವ ಭಾರತದ ಹುಲಿ ‘ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್’ ಅವರಿಗೆ ಸಂಬಂಧಿಸಿದ ಹೊಸ ವೀಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲವರು ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಮಾತನಾಡುತ್ತ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತ ಕಾಣಿಸಿಕೊಂಡಿದ್ದಾರೆ.

 

 

ಪಾಕಿಸ್ತಾನದಿಂದ ಬಿಡುಗಡೆಯಾದ ನಂತರದ ದಿನಗಳಲ್ಲಿ ಅಭಿನಂದನ್‌ ವರ್ಧಮಾನ್‌ ಅವರು ಹಲವು ಬಗೆಯ ವೈದ್ಯಕೀಯ ತಪಾಸಣೆಗಳಿಗೆ ಒಳಗಾಗಿದ್ದಾರೆ. ಅವರನ್ನು ಜಮ್ಮು ವಾಯು ನೆಲೆಯಿಂದ ಬೇರೆ ವಾಯು ನೆಲೆಗೆ ವಾಯುಪಡೆಯು ವರ್ಗಾವಣೆ ಮಾಡಿದೆ. ಈ ನಡುವೆ ಅಭಿನಂದನ್‌ ಅವರು ಜಮ್ಮು ವಾಯು ನೆಲೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಅಲ್ಲಿ ಸಹೋದ್ಯೋಗಿಗಳು ಅಭಿನಂದನ್‌ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಅಭಿಮಾನ ಮೆರೆದಿದ್ದಾರೆ.

ಬಳಿಕ ಸೈನಿಕರನ್ನು ಉದ್ದೇಶಿಸಿ ಮಾತನಾಡಿರುವ ಅಭಿನಂದನ್, ನಾನೀಗ ನಿಮ್ಮೊಂದಿಗೆ ಚಿತ್ರ ತೆಗೆಸಿಕೊಂಡಿದ್ದು, ನಿಮ್ಮ ಕುಟುಂಬಗಳಿಗಾಗಿ, ಅವರ ಹಾರೈಕೆಯಿಂದ ನಾನು ಬೇಗನೆ ಹುಷಾರಾಗಿದ್ದೇನೆ ಎಂದು ಹೇಳಿದ್ದಾರೆ.

 

 

ಬಾಲಾಕೋಟ್ ವಾಯುದಾಳಿ ಬಳಿಕ ಭಾರತದ ಮೇಲೆ ದಾಳಿಗೆ ಬಂದಿದ್ದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಬೆನ್ನಟ್ಟಿ ಹೋಗಿದ್ದ ಅಭಿನಂದನ್ ಅವರ ವಿಮಾನವು ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು. ಬಳಿಕ ತಾಂತ್ರಿಕ ಕಾರಣಗಳಿಂದಾಗಿ ಅಭಿನಂದನ್ ಯುದ್ಧ ವಿಮಾನ ಪಾಕಿಸ್ತಾನದಲ್ಲಿ ಧರೆಗುರುಳಿತ್ತು. ಆಗ ಅಭಿನಂದನ್ ಅವರು ಪಾಕಿಸ್ತಾನದ ಸೇನೆ ಕೈಗೆ ಸಿಲುಕಿದ್ದರು. ಅಲ್ಲಿ ಅವರು ಯಾವುದೇ ಮಾಹಿತಿಗಳನ್ನು ಬಿಟ್ಟುಕೊಡದೆ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದರು. ಎರಡು ದಿನಗಳ ಬಳಿಕ ಇಮ್ರಾನ್ ಖಾನ್ ನೇತೃತ್ವದ ಪಾಕ್ ಸರ್ಕಾರವು ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top