fbpx
ಸಮಾಚಾರ

ಹುಚ್ಚಾಟ ಪ್ರದರ್ಶಿಸಿದ ತನ್ನ ಅಭಿಮಾನಿಯ ಚಳಿಜ್ವರ ಬಿಡಿಸಿದ ಖ್ಯಾತ ನಟಿ.

ನಟ-ನಟಿಯರಿಗೆ ಹೆಚ್ಚು ಸಂಖ್ಯೆಯ ಅಭಿಮಾನಿಗಳು ಇರುವುದು ಬಹಳಷ್ಟು ಜನರಿಗೆ ಗೊತ್ತಿದೆ. ಆದರೆ, ಕೆಲವರು ಹುಚ್ಚು ಅಭಿಮಾನಿಗಳು ಸಹ ಇರುತ್ತಾರೆ. ಆ ರೀತಿಯ ಹುಚ್ಚು ಅಭಿಮಾನಿಯೊಬ್ಬರಿಗೆ ಬಾಲಿವುಡ್ ನಟಿ ವಿರುದ್ಧ ವಾಣಿ ಕಪೂರ್ ಚಳಿಜ್ವರ ಬರಿಸಿದ್ದಾಳೆ.

ಕೆಲವು ದಿನಗಳಿಂದ ಅಭಿಮಾನಿಯೊಬ್ಬ ನಟಿ ವಾಣಿ ಕಪೂರ್ ಅವರನ್ನು ಹಿಂಬಾಲಿಸುತ್ತಿದ್ದನು. ವಾಣಿ ಕಪೂರ್ ಕಾರಿನಲ್ಲಿ ಹೋಗುತ್ತಿದ್ದರೆ, ಅಭಿಮಾನಿ ಬೈಕಿನಲ್ಲಿ ಅವರನ್ನು ಫಾಲೋ ಮಾಡುತ್ತಿದ್ದನು. ಮೊದಲು ವಾಣಿ ಆ ಅಭಿಮಾನಿ ಕಡೆ ಗಮನ ಕೊಡದೇ ತನ್ನ ಕಾರಿನ ಸ್ಪೀಡ್ ಹೆಚ್ಚಿಸಿ ಮುಂದೆ ಹೋಗುತ್ತಿದ್ದರು. ಆದರೆ ಒಂದು ದಿನ ವಾಣಿ ಅವರು ಕಾರಿನಲ್ಲಿ ವರ್ಸಾವಾಗೆ ತೆರಳುತ್ತಿದ್ದಾಗ ಅಭಿಮಾನಿ ಅವರ ಸನಿಹಕ್ಕೆ ಬಂದಿದ್ದಾನೆ. ಇದರಿಂದ ವಾಣಿ ಕಪೂರ್ ಸಾಕಷ್ಟು ಹೆದರಿಕೊಂಡಿದ್ದಾರೆ.

ಇದನ್ನು ಗಮನಿಸಿದ ನಟಿ ವಾಣಿ ಕಪೂರ್, ಸೀದಾ ಪೊಲೀಸ್ ಸ್ಟೇಷನ್‌ಗೆ ಹೋಗಿ ಅವನ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರಂತೆ. ಆಕೆ ಜೋರಾಗಿ ಕಾರನ್ನು ಓಡಿಸಿದರೂ ಹಿಂಬಾಲಿಸುವುದನ್ನು ಆ ಅಭಿಮಾನಿ ಬಿಟ್ಟಿಲ್ಲ. ಇದರಿಂದ ಕೆಂಡಾಮಂಡಲವಾದ ನಟಿ ವಾಣಿ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಆ ಬಗ್ಗೆ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ ಅಭಿಮಾನಿ ಹೆಸರು ಸಮೀರ್ ಖಾನ್ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top