fbpx
ಸಮಾಚಾರ

ರಾಬರ್ಟ್ ಸಿನಿಮಾದಲ್ಲಿ ಐಶ್ವರ್ಯ ರೈ ನಟಿಸುತ್ತಾರಾ ಎಂದು ಕೇಳಿದ್ದಕ್ಕೆ ದರ್ಶನ್ ಹೇಳಿದ್ದೇನು ಗೊತ್ತಾ?

ದರ್ಶನ್ ನಟನೆಯ ಮುಂದಿನ ಸಿನಿಮಾ ರಾಬರ್ಟ್ ಚಿತ್ರಕ್ಕೆ ಹೀರೋಯಿನ್ ಯಾರಾಗುತ್ತಾರೆ ಎನ್ನುವ ವಿಚಾರ ಇದೀಗ ಗಾಂಧಿನಗರದಲ್ಲಿ ರಂಗೇರಿದ್ದು ಸಾಯಿ ಪಲ್ಲವಿ, ರಕುಲ್ ಪ್ರೀತ್ ಸಿಂಗ್, ಆನುಷ್ಕ ಶೆಟ್ಟಿ, ಪ್ರಣಿತಾ, ಕಾಜಲ್ ಅಗರ್ವಾಲ್ ಹೀಗೆ ಸಾಕಷ್ಟು ನಾಯಕಿಯರ ಹೆಸರುಗಳು ‘ರಾಬರ್ಟ್’ ನಾಯಕಿ ಪಟ್ಟಕ್ಕೆ ಕೇಳಿ ಬಂದಿದ್ದವು.

ಅದರ ನಡುವೆ ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ‘ರಾಬರ್ಟ್’ ಸಿನಿಮಾದ ನಾಯಕಿ ಆಗುತ್ತಿದ್ದಾರೆ ಎನ್ನುವ ಸುದ್ದಿ ನಿನ್ನೆ ಬಂದಿತ್ತು. ಇದು ನಿಜವಾಗಿಯೂ ಅಭಿಮಾನಿಗಳಿಗೆ ಮಾತ್ರವಲ್ಲ ಚಿತ್ರತಂಡಕ್ಕೆ ‘ಶಾಕ್’ ನೀಡುವ ಸುದ್ದಿಯಾಗಿತ್ತು. ಇದೀಗ ಈ ಚರ್ಚೆಯ ಬಗ್ಗೆ ನಟ ದರ್ಶನ್ ಮಾತನಾಡಿದ್ದಾರೆ.

ಇಂದು ಬನಶಂಕರಿ ದೇವಸ್ಥಾನದಲ್ಲಿ‘ರಾಬರ್ಟ್’ ಸಿನಿಮಾದ ಸ್ಕ್ರಿಪ್ಟ್ ಪೂಜೆ ನಡೆದಿದೆ, ಈ ವೇಳೆ ಮಾತನಾಡಿದ ದರ್ಶನ್ ತಮ್ಮ ಚಿತ್ರದಲ್ಲಿ ಐಶ್ವರ್ಯ ರೈ ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಚಿತ್ರದ ನಾಯಕಿ ವಿಷಯದ ಬಗ್ಗೆ ಇಂದು ಮಾತನಾಡಿರುವ ದರ್ಶನ್ ”ನಿನ್ನೆಯಿಂದ ಕೇಳುತ್ತಲೇ ಇದ್ದೀವಿ, ನಮ್ಮ ಸಿನಿಮಾದಲ್ಲಿ ಐಶ್ವರ್ಯ ರೈ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಯ್ಯೋ ಅಷ್ಟೊಂದು ಎಲ್ಲ ಇಲ್ಲ ಸಾರ್. ನಮ್ಮ ಸಿನಿಮಾದಲ್ಲಿ ಅವರು ನಟಿಸುತ್ತಿಲ್ಲ, ಇದು ಸುಳ್ಳು ಸುದ್ದಿ” ಎನ್ನುವ ಮೂಲಕ ತಮ್ಮ ರೆಗ್ಯೂಲರ್ ಸ್ಟೈಲ್ ನಲ್ಲಿ ಐಶ್ವರ್ಯ ರೈ ಗಾಸಿಪ್ ಬಗ್ಗೆ ತೆರೆ ಎಳೆದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top