fbpx
ಸಮಾಚಾರ

“ಸಚಿನ್ ಕೊಟ್ಟಿದ್ದ ಬ್ಯಾಟ್ ನಲ್ಲೇ ನನ್ನ ಮೊದಲ ಶತಕ ಭಾರಿಸಿದ್ದೆ, ಅದೂ 36 ಎಸೆತದಲ್ಲೇ ಸೆಂಚುರಿ.” ಶಾಹಿದ್ ಅಫ್ರಿದಿ.

ಇತ್ತೀಚೆಗಷ್ಟೇ ಬಿಡುಗಡೆಯಾದ ತಮ್ಮ ಜೀವನ ಚರಿತ್ರೆ ‘ಗೇಮ್ ಚೇಂಜರ್’ನಲ್ಲಿ ತಮ್ಮ ಅನುಭವದ ಬಗ್ಗೆ ಹೇಳಿಕೊಂಡಿರುವ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 37 ಎಸೆತಗಳಲ್ಲಿ ಶತಕ ಪೂರೈಸಿದ ಮರೆಯಲಾರದ ಕ್ಷಣದ ಬಗ್ಗೆ ಹೇಳಿಕೊಂಡಿದ್ದಾರೆ. ಅಂದು ತಾವು ಬಳಸಿದ್ದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಬ್ಯಾಟ್ ಎಂದು ಬರೆದುಕೊಂಡಿದ್ದಾರೆ.

ಶಾಹೀದ್ ಆಫ್ರೀಧಿ ಏಕದಿನ ಕ್ರಿಕೆಟ್​​ನಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ಮೊದಲ ಬ್ಯಾಟ್ಸ್​​ಮನ್, ಅವರ ಆ ದಾಖಲೆ ವರ್ಷಾನುಗಟ್ಟಲೆ ಅವರ ಹೆಸರಿನಲ್ಲಿಯೇ ಇತ್ತು. 1996ರಲ್ಲಿ ಆಫ್ರೀಧಿ, ಪಾಕ್​ ಪರ ತಾವಾಡಿದ ಎರಡನೇ ಪಂದ್ಯದಲ್ಲೇ ಶ್ರೀಲಂಕಾ ವಿರುದ್ಧ ಕೇವಲ 37 ಎಸೆತಗಳಲ್ಲಿ ಶತಕ ಪೂರೈಸಿದ್ರು.ಈ ಮೂಲಕ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದರು.ಈ ಶತಕದ ಬಗ್ಗೆ ಆಫ್ರೀದಿ ತಮ್ಮ ಪುಸ್ತಕ ದಿ ಗೇಮ್ ಚೇಂಜರ್​ನಲ್ಲಿ ಸೀಕ್ರೆಟ್​ ಬಿಚ್ಚಿಟ್ಟಿದ್ದಾರೆ.

ಅಷ್ಟಕ್ಕೂ ಸಚಿನ್ ಬ್ಯಾಟ್ ತಮ್ಮ ಕೈಗೆ ಹೇಗೆ ಬಂತು ಎಂಬುದನ್ನೂ ಹೇಳಿ ಕೊಂಡಿರುವ ಅವರು ” ಸಚಿನ್ ತಮ್ಮ ಬ್ಯಾಟ್​ವೊಂದನ್ನ ಪಾಕಿಸ್ತಾನ ತಂಡದ ಬೌಲರ್​ ಆಗಿದ್ದ ವಾಕರ್​ ಯೂನಸ್​​ಗೆ ಉಡುಗೊರೆಯಾಗಿ ನೀಡಿದ್ದರು. ಆ ಬ್ಯಾಟನ್ನು ತೆಗೆದುಕೊಂಡು ಹೋಗುವ ಮುನ್ನ ವಾಕರ್ ಏನು ಮಾಡಿದರು ಹೇಳಿ? ನಾನು ನೈರೋಬಿ ಪಂದ್ಯದಲ್ಲಿ ಬ್ಯಾಟಿಂಗ್‌ ತೆರಳುವುದಕ್ಕೂ ಮುನ್ನ ಆ ಬ್ಯಾಟನ್ನೇ ನನ್ನ ಕೈಗೆ ವಾಕರ್ ನೀಡಿದ್ದರು.. ಸಚಿನ್ ಗಿಫ್ಟ್ ಮಾಡಿದ್ದ ಬ್ಯಾಟ್ ಸಹಾಯದಿಂದ ನಾನು ಅವತ್ತು ಸ್ಫೋಟಕ ಶತಕ ಬಾರಿಸಿದ್ದೆ. ಅದೇ ನನ್ನ ಮೊದಲ ಶತಕ’ ಎಂದು ಅಫ್ರಿಧಿ ತಮ್ಮ ಆತ್ಮಕಥೆಯಲ್ಲಿ ಬರಿದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top