fbpx
ಸಮಾಚಾರ

ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಶರಣ್ ಮಗಳು- ತಂದೆ ಜೊತೆಯೇ ನಟನೆ.

ಸ್ಯಾಂಡಲ್​ವುಡ್​ನ ಸ್ಟಾರ್ ನಟರ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಸಿನಿಮಾರಂಗಕ್ಕೆ ಎಂಟ್ರಿಕೊಡುತ್ತಿದ್ದಾರೆ. ದರ್ಶನ್ ಪುತ್ರ ವಿನೀಶ್, ಪ್ರಿಯಾಂಕಾ-ಉಪೇಂದ್ರ ದಂಪತಿ ಪುತ್ರಿ ಐಶ್ವರ್ಯಾ, ಪ್ರೇಮ್ ಪುತ್ರ ಏಕಾಂತ್, ಗಣೇಶ್ ಪುತ್ರ ವಿಹಾನ್ ಹೀಗೆ ಆ ಪಟ್ಟಿ ಬೆಳೆಯುತ್ತಿದೆ. ಈಗಿನದ್ದು ಶರಣ್ ಮಗಳ ಸರದಿ. ಹೌದು, ‘ಸಿಂಪಲ್’ ಸುನಿ ನಿರ್ದೇಶನದ ‘ಅವತಾರ್ ಪುರುಷ’ ಚಿತ್ರದಲ್ಲಿ ಶರಣ್ ಪುತ್ರಿ ಪುಣ್ಯ ನಟಿಸಿದ್ದಾಳೆ. ಚಿಕ್ಕದೊಂದು ಪಾತ್ರಕ್ಕೆ ಬಣ್ಣ ಹಚ್ಚಿ ಸಿನಿಮಾರಂಗ ಪ್ರವೇಶಿಸಿದ್ದಾಳೆ.

ಅಪ್ಪನ ಚಿತ್ರದಲ್ಲಿ ಮಗಳು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಸುದ್ದಿಯನ್ನು ಸ್ವತಃ ನಿರ್ದೇಶಕ ಸುನಿ ಹಾಗೂ ನಿರ್ಮಾಕರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ ಖಚಿತ ಪಡಿಸಿದ್ದಾರೆ. ನಿರ್ದೇಶಕ ಸುನಿ ತಮ್ಮ ಟ್ವೀಟರ್ ಪೇಜ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು ” ‘ಅವತಾರ ಪುರುಷ’ ಚಿತ್ರದಲ್ಲಿ ಪಾದಾರ್ಪಣೆ ಮಾಡಿದ @sharanhruday ಸುಪುತ್ರಿ “ಪುಣ್ಯ”ಳಿಗೆ ಹುಟ್ಟುಹಬ್ಬದ ಶುಭಾಶಯಗಳು .. ಬಾಳು ಸದಾ ಬೆಳದಿಂಗಳಾಗಿರಲಿ..”ಎಂದು ಪೋಸ್ಟ್ ಮಾಡಿದ್ದಾರೆ. ಅದೇ ರೀತಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜನಯ್ಯ ಕೂಡ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ ಮೂಲಕ ಬಹಿರಂಗಗೊಳಿಸಿದ್ದಾರೆ.

 

 

ಈಬಗ್ಗೆ ಸಂತಸ ವ್ಯಕ್ತಪಡಿಸಿರುವ ಶರಣ್ ‘ನನ್ನ ಮಗಳಿಗೆ ಇನ್ನು ಆರು ವರ್ಷ ವರ್ಷ, ತುಂಬ ಚೂಟಿ.. ಇಂಥದ್ದೊಂದು ಪಾತ್ರವಿದೆ, ಅದಕ್ಕೆ ಪುಣ್ಯ ಸರಿಹೊಂದುತ್ತಾಳೆ. ಅವಳೇ ಬೇಕು ಎಂದರು. ಈ ಸಿನಿಮಾ ಮೂಲಕ ಅವಳ ಇಂಟ್ರಡಕ್ಷನ್ ಆಗುತ್ತಿದೆ ಎನ್ನುವುದಕ್ಕಿಂತ ಒಂದು ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದಾಳಷ್ಟೇ’ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top