fbpx
ಸಮಾಚಾರ

ಮುದ್ದು ಮಗಳನ್ನು ಅಭಿಮಾನಿಗಳಿಗೆ ತೋರಿಸಲು ಸಜ್ಜಾದ ಯಶ್-ರಾಧಿಕಾ.

ಯಶ್–ರಾಧಿಕಾ ಅವರ ಮಗಳು ಹೇಗಿರಬಹುದೆಂದು ನೋಡಬೇಕೇ? ಹಾಗಾದರೆ ಮೇ 7 ರವರೆಗೆ ಅಭಿಮಾನಿಗಳು ಕಾಯಲೇಬೇಕು. ಹುಟ್ಟಿದಾಗಷ್ಟೇ ಮಗಳ ಮೊಗವನ್ನು ತೋರಿಸಿ ಅಭಿಮಾನಿಗಳಲ್ಲಿ ಕುತೂಹಲ ಉಳಿಸಿದ್ದ ತಾರಾ ದಂಪತಿ ಇದೀಗ ತಮ್ಮ ಮಗಳನ್ನು ಅಭಿಮಾನಿಗಳಿಗೆ ತೋರಿಸಲು ನಿರ್ಧರಿಸಿದ್ದಾರೆ. ಯಶ್​ ಮಗಳು ಹೇಗಿದ್ದಾಳೆ..? ಎಂಬ ಕುತೂಹಲಕ್ಕೆ ಮಾತ್ರ ಉತ್ತರ ಸಿಕ್ಕಿರಲಿಲ್ಲ. ನಾಳೆ ಮಗಳ ಫೋಟೊ ರಿವೀಲ್ ಮಾಡೋಕೆ ಯಶ್ ಮತ್ತು ರಾಧಿಕಾ ಮುಂದಾಗಿದ್ದಾರೆ.

ಮುದ್ದಿನ ಮಗಳ ಫೋಟೊನ ರಿವೀಲ್​ ಮಾಡುವ ಕುರಿತು ರಾಧಿಕಾ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘ಅಪ್ಪ-ಮಗಳ ಸಂಬಂಧಕ್ಕೆ ಬೆಲೆ ಕಟ್ಟಲಾಗದು. ನೀವೆಲ್ಲರೂ ನಮ್ಮ ಪುಟ್ಟ ದೇವತೆಯನ್ನು ನೋಡಲು ಅತ್ಯಂತ ಹುರುಪಿನಿಂದ ಕಾಯುತ್ತಿದ್ದೀರಿ ಎಂದು ನನಗೆ ಗೊತ್ತಿದೆ. ಹೀಗಾಗಿ ನಿಮ್ಮ ಆಸೆಯನ್ನು ನಿರಾಸೆ ಮಾಡುವುದಿಲ್ಲ. ಆದ್ದರಿಂದ ಮೇ 7ರ ಅಕ್ಷಯ ತೃತೀಯದಂದು ನಾವು ನಮ್ಮ ಮಗಳ ಫೋಟೋವನ್ನು ರಿವೀಲ್ ಮಾಡುತ್ತೇವೆ’ ಅಂತಾ ಬರೆದುಕೊಂಡಿದ್ದಾರೆ.

ಯಶ್ ತಮ್ಮ ಮಗಳನ್ನು ಹತ್ತಿರದಿಂದ ನೋಡುತ್ತಿರುವ ಫೋಟೋವೊಂದನ್ನು ಅಪ್‌ಲೋಡ್ ಮಾಡಿರುವ ರಾಧಿಕಾ, ಅಲ್ಲಿಯೂ ಕೂಡ ತಮ್ಮ ಗಳ ಮುಖವನ್ನು ರಿವೀಲ್ ಮಾಡಿಲ್ಲ. ಆದರೆ, ಫೋಟೋ ಕೆಳಗಡೆ ‘ತಂದೆ -ಮಗಳ ಸಂಬಂಧ ಬೆಲೆ ಕಟ್ಟಲಾಗದ್ದು. ನಮ್ಮ ಮುದ್ದು ಮಗಳನ್ನು ನೋಡುಲು ನೀವೆಲ್ಲಾ ಕಾತರರಾಗಿದ್ದೀರಿ’ ಎಂದು ರಾಧಿಕಾ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top