fbpx
ಸಮಾಚಾರ

‘ಫೊನಿ’ ಸಂತ್ರಸ್ತರಿಗಾಗಿ ಮಿಡಿದ ಅಕ್ಷಯ್ ಕುಮಾರ್- ಪರಿಹಾರ ನಿಧಿಗೆ ಒಂದು ಕೋಟಿ ದಾನ

ಥರ ಥರದ ಪಾತ್ರಗಳ ಮೂಲಕ, ಮನೋಜ್ಞ ಅಭಿನಯದ ಮೂಲಕ ಪ್ರಪಂಚದಾದ್ಯಂತ ಪ್ರೇಕ್ಷಕರ ಮನದಲ್ಲಿ ಅಚ್ಚರಿಯ ಮುದ್ರೆ ಒತ್ತಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇದೀಗ ಹೃದಯ ವೈಶಾಲ್ಯತೆ ತೋರುವ ಮೂಲಕ ಮನುಷ್ಯತ್ವ ಮೆರೆದಿದ್ದಾರೆ.

ಫೊನಿ ಚಂಡಮಾರುತದ ಕಾರಣ ತೀವ್ರ ಸಂಕಷ್ಟಕ್ಕೆ ತುತ್ತಾದ ಒಡಿಶಾಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರಿ ಪರಿಹಾರ ಧನ ನೀಡಿದ್ದಾರೆ. ಸುಮಾರು ಒಂದು ಕೋಟಿ ರೂಪಾಯಿಗಳನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪರಿಹಾರ ನಿಧಿಗೆ ಕಳುಹಿಸಿದ್ದಾರೆ. ಈ ಹಿಂದೆ ಕೇರಳ, ಚೆನ್ನೈ ಚಂಡಮಾರುತ ಹೊಡೆತಕ್ಕೆ ತುತ್ತಾದಗಲೂ ಅಕ್ಷಯ್ ಸಹಾಯ ಹಸ್ತ ಚಾಚಿದ್ದರು. ಅಷ್ಟೇ ಅಲ್ಲ ಭಾರತ್ ಕೇ ವೀರ್ ವೆಬ್ ಸೈಟ್ ಮೂಲಕ ಸೈನಿಕರ ಕುಟುಂಬಗಳಿಗೂ ಸಹಾಯ ಮಾಡುತ್ತಿದ್ದಾರೆ.

 

 

ಫಣಿ ಚಂಡಮಾರುತದ ಕಾರಣ ಒಡಿಶಾದಲ್ಲಿ ಸುಮಾರು 34 ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಆಸ್ತಿಪಾಸ್ತಿ ನಷ್ಟವಾಗಿದೆ. ಚಂಡಮಾರುತದ ಕಾರಣ ಅಪಾರ ಆಸ್ತಿ ನಷ್ಟವಾಗಿದ್ದು, ಎಲ್ಲೆಡೆಯಿಂದ ಪರಿಹಾರ ಹರಿದು ಬರುತ್ತಿದೆ. ಫೊನಿ ಚಂಡಮಾರುತ ಪೀಡಿತ ಒಡಿಶಾದ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವೈಮಾನಿಕ ಸಮೀಕ್ಷೆ ನಡೆಸಿದ್ದು, 1000 ಕೋಟಿ ರೂ.ಗಳ ಪರಿಹಾರ ಘೋಷಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top