fbpx
ದೇವರು

ಅಕ್ಷಯ ತದಿಗೆ ದಿನದಂದು ಕಬ್ಬಿನ ಹಾಲು ಏಕೆ ಕುಡಿಯಬೇಕು ಅಂತಾರೆ ಗೊತ್ತಾ ?

ತೀರ್ಥಂಕರ ವೃಷಭನಾಥ (ಆದಿನಾಥ) ರು ಸಂಸಾರದ ನಶ್ವರತೆಯನ್ನು ಅರಿತು ವೈರಾಗ್ಯವನ್ನು ಹೊಂದಿ ದೀಕ್ಷೆಯನ್ನು ಗ್ರಹಣೆ ಮಾಡಿ ತಪಸ್ಸಿಗೆ ಕಾಡಿಗೆ ತೆರಳುತ್ತಾರೆ.೬ ತಿಂಗಳು ಕಠಿಣ ತಪಸ್ಸನ್ನು ಮಾಡಿದ ಮೇಲೆ ಆಹಾರಕ್ಕೆಂದು ನಗರಕ್ಕೆ ವಿಧಿ ಪೂರ್ವಕ ಆಗಮಿಸುತ್ತಾರೆ.

ಆದರೆ ದಿಗಂಬರ ಮುನಿಗಳಿಗೆ ನವಧಾ ಭಕ್ತಿಯಿಂದ ಆಹಾರವನ್ನು ಕೊಡುವ ವಿಧಿಯನ್ನು ಶ್ರಾವಕ-ಶ್ರಾವಕಿಯರು ತಿಳಿದಿರುವುದಿಲ್ಲ.ಆ ಕಾರಣ ಜನರು ಮೊದಲೇ ಮಹಾರಾಜರಾಗಿದ್ದ ಅವರನ್ನು ಸತ್ಕರಿಸುವ ಭಾವನೆಯಿಂದ ವಿವಿಧ ಒಡವೆ,ವಸ್ತ್ರಗಳನ್ನು ಕೆಲವು ನೀಡಲು ಮುಂದಾಗುತ್ತಾರೆ,ಕೆಲವರು ತಮ್ಮ ಹೆಣ್ಣು ಮಕ್ಕಳನ್ನು ಮದುವೆಯಾಗುವಂತೆ ಕೇಳಿಕೊಳ್ಳುತ್ತಾರೆ.ಆದರೆ ಇದಾವುದನ್ನು ಬಯಸದ ಅವರು ಪುನಃ ಕಾಡಿಗೆ ತಪ್ಪಸ್ಸಿಗೆಂದು ಮರಳುತ್ತಾರೆ.

 

ಇದಾಗಿ ೭ ತಿಂಗಳು ೯ ದಿನಗಳ ಉಪವಾಸದ ನಂತರ ಮತ್ತೆ ಹಸ್ತಿನಾಪುರ ಎಂಬ ನಗರಕ್ಕೆ ಆಹಾರಕ್ಕೆಂದು ಆಗಮಿಸುತ್ತಾರೆ.ಆವಾಗಲು ಪುನಃ ಅದೇ ಘಟನೆಗಳು ಮರುಕಳಿಸುತ್ತವೆ.ಆದರೆ ಅದೇ ನಗರದ ರಾಜಾ ಶ್ರೇಯಾಂಸನು ಇವರ ದರ್ಶನಕ್ಕೆಂದು ಪರಿವಾರ ಸಹಿತ ಆಗಮಿಸುತ್ತಾನೆ.ಆಗ ಅವನಿಗೆ ಹಿಂದಿನ ಜನ್ಮದ ಜಾತಿ ಸ್ಮರಣೆ ಆಗುತ್ತದೆ.ಹಿಂದಿನ ಭವದಲ್ಲಿ ಭಕ್ತಿಯಿಂದ ಆಹಾರ ನೀಡಿದ ಸ್ಮರಣೆ ಆಗುತ್ತದೆ.

ತಕ್ಷಣವೇ ರಾಜಾ ಸೋಮನು ಮತ್ತು ಶ್ರೆಯಾಂಸನು ಸೆರೀ ನವಧಾ ಭಕ್ತಿಯಿಂದ ಮೊದಲಿಗೆ ಇಕ್ಷು(ಕಬ್ಬಿನ ಹಾಲು)ರಸವನ್ನು ನೀಡುತ್ತಾರೆ.ಅಹಾರವಾದಾಕ್ಷಣ ದೇವತೆಗಳು ಪಂಚಾಶ್ಚರ್ಯ ವೃಷ್ಟಿ ಮಾಡುತ್ತಾರೆ.ಜನರು ಜಯ ಜಯಕಾರಗಳನ್ನು ಹಾಕಿ ಸಂತೋಷ ಪಡುತ್ತಾರೆ.

 

ವೃಷಭನಾಥರಿಗೆ ಮೊದಲು ಆಹಾರ(ಪಾರಣಾ)ವಾದ ದಿವಸ ವೈಶಾಖ ಶುಕ್ಲ ತೃತೀಯ ತಿಥಿಯಿದ್ದ ಕಾರಣ ಆ ದಿನವನ್ನು “ಅಕ್ಷಯ ತೃತೀಯ“ವೆಂದು ಆಚರಿಸಲಾಗುತ್ತದೆ. ಮುನಿಗಳಿಗೆ ಆಹಾರ ದಾನ ಮಾಡುವುದೆಂದರೆ ಅತ್ಯಂತ ಅತಿಶಯ,ಅಕ್ಷಯ ಪುಣ್ಯಕ್ಕೆ ಕಾರಣ ಎಂದು ಹೇಳಲಾಗಿದೆ. ಈ ದಿನ ಬಸದಿಗಳಲ್ಲಿ ವಿಶೇಷವಾಗೀ ಅಭಿಷೇಕ ಪೂಜೆ,ಉತ್ಸವಗಳನ್ನು ಆಚರಿಸಲಾಗುತ್ತದೆ.

ಈ ದಿನ ,ವಿಶೇಷವಾಗಿ ಕಬ್ಬಿನ ಹಾಲನ್ನು ಕುಡಿದರೆ ,ದಾನ್ಯಗಳು,ಮನೆಯಲ್ಲಿ ಸುಖ,ನೆಮ್ಮದಿ ಅಕ್ಷಯವಾಗಿ ವೃದ್ಧಿಯಾಗುತ್ತವೆ ಎಂಬ ನಂಬಿಕೆಯಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top