fbpx
ಸಮಾಚಾರ

ಮದುವೆಗೆ ಸಜ್ಜಾದ ಕುಲವಧು ‘ಧನ್ಯಾ’ ಖ್ಯಾತಿಯ ದೀಪಿಕಾ- ಭಾವೀ ಪತಿಯೂ ಸೀರಿಯಲ್ ಆಕ್ಟರ್.

ಇತ್ತೀಚೆಗೆ ಕಿರುತೆರೆಯ ನಟಿಯರು ದಾಪಂತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ‘ಕುಲವಧು’ ಧಾರಾವಾಹಿಯ ಪಾತ್ರಧಾರಿ ವಚನ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಇದೇ ಸೀರಿಯಲ್‍ನ ಧನ್ಯಾ ಕೂಡ ಸಪ್ತಪದಿ ತುಳಿಯಲು ತಯಾರಾಗಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕುಲವಧು’ ಧಾರಾವಾಹಿಯಲ್ಲಿ ಧನ್ಯಾ ಪಾತ್ರಧಾರಿ ದೀಪಿಕಾ ಪ್ರೇಕ್ಷಕರ ಮನಗೆದ್ದಿದ್ದಾರೆ. ಇದೀಗ ತಾವೂ ಪ್ರೀತಿಸುತ್ತಿರುವ ಹುಡುಗ ಬಗ್ಗೆ ಇನ್ಸ್ ಸ್ಟಾಗ್ರಾಂನಲ್ಲಿ ಫೋಟೋ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ.

 

 

View this post on Instagram

 

The first pic to post with my man with whom I am going to take the seven steps for seven births….❤❤❤❤ @akkuakarsh

A post shared by Dhanya (deepika) (@dhanya_deepika_official) on


ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಚಾರವನ್ನು ಧನ್ಯಾ ಅಲಿಯಾಸ್​ ದೀಪಿಕಾ ಅವರು ಬಹಿರಂಗಪಡಿಸಿದ್ದಾರೆ. ಏಳೇಳು ಜನ್ಮದಲ್ಲೂ ನಾನು ಜತೆಯಾಗಿ ಏಳು ಹೆಜ್ಜೆಯನ್ನಿಡುವ ನನ್ನ ಭಾವಿ ಪತಿಯ ಮೊದಲ ಚಿತ್ರವನ್ನು ಪೋಸ್ಟ್​ ಮಾಡುತ್ತಿದ್ದೇನೆ ಎಂದು ಧನ್ಯಾ ಬರೆದುಕೊಂಡಿದ್ದಾರೆ. ಅಂದಹಾಗೆ ಧನ್ಯಾ ಆಕರ್ಶ್​ ಎಂಬುವರನ್ನು ವರಿಸಲಿದ್ದಾರೆ.

ಇಷ್ಟೇ ಅಲ್ಲದೆ ಮತ್ತೊಂದು ಚಿತ್ರದಲ್ಲಿ ತಮ್ಮ ಭಾವಿ ಪತಿಯನ್ನು ಗುಣಗಾನ ಮಾಡಿರುವ ಧನ್ಯಾ ನನ್ನ ದಿನದ ಸೂರ್ಯ ನೀನು. ನನ್ನ ಆಗಸದಲ್ಲಿನ ಗಾಳಿ ನೀನು. ನನ್ನ ಸಾಗರದಲ್ಲಿನ ಅಲೆಯು ನೀನು ಹಾಗೂ ನನ್ನ ಹೃದಯದ ಬಡಿತ ನೀನು ಎಂದು ಪ್ರೀತಿಯ ಮಾತುಗಳನ್ನು ಆಡಿದ್ದು, ಪ್ರತಿಯಾಗಿ ಸಾವಿರಾರು ಅಭಿಮಾನಿಗಳು ಧನ್ಯಾರಿಗೆ ಶುಭ ಹಾರೈಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top