fbpx
ಸಮಾಚಾರ

ಕನ್ನಡಿಗನನ್ನು ಹಾಡಿ ಹೊಗಳಿದ ಯೂನಿವರ್ಸಲ್ ಬಾಸ್.

ವಿಶ್ವ ಕ್ರಿಕೆಟ್ ನಲ್ಲಿ ದಾಖಲೆಗಳ ಶಿಖರವನ್ನೇ ನಿರ್ಮಿಸಿರುವ ‘ದಿ ಯೂನಿವರ್ಸ್‌ ಬಾಸ್‌’ ಎಂದೇ ಪ್ರಖ್ಯಾತಿಯಾಗಿರುವ ವೆಸ್ಟ್‌ ಇಂಡೀಸ್‌ನ ದೈತ್ಯ ಅಟಗಾರ ಕ್ರಿಸ್ಟೋಫರ್‌ ಹೆನ್ರಿ ಗೇಲ್‌ ಅವರು ನಮ್ಮ ಹೆಮ್ಮೆಯ ಕನ್ನಡಿಗ ಹಾಗೂ ಕಿಂಗ್ಸ್‌ ಇಲೆವೆನ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌ ರಾಹುಲ್‌ ಅವರನ್ನು ಹಾಡಿ ಹೊಗಳಿದ್ದಾರೆ.

ರಾಹುಲ್‌ಗೆ ಮೆಚ್ಚುಗೆಯ ಸುರಿಮಳೆಯನ್ನೇ ಹರಿಸಿರುವ 40 ವರ್ಷದ ಗೇಲ್‌, ತಮ್ಮ ವೃತ್ತಿ ಜೀವನದಲ್ಲಿ ತಾವು ಆಡಿದ ಎಲ್ಲಾ ಆರಂಭಿಕ ಬ್ಯಾಟ್ಸ್‌ಮನ್‌ಗಳ ಪೈಕಿ ಕೆ.ಎಲ್‌ ರಾಹುಲ್‌ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದು ಗುಣಗಾನ ಮಾಡಿದ್ದಾರೆ. ಭಾನುವಾರ ನಡೆದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಅಂತಿಮ ಲೀಗ್‌ ಪಂದ್ಯದಲ್ಲಿ ಮಿಂಚಿನ ಬ್ಯಾಟಿಂಗ್‌ ಪ್ರದರ್ಶಿಸಿದ ರಾಹುಲ್‌, 36 ಎಸೆತಗಳಲ್ಲಿ ಭರ್ಜರಿಯ 71 ರನ್‌ಗಳನ್ನು ಸಿಡಿಸಿದ್ದರು.

 

 

ಪಂದ್ಯದ ಬಳಿಕ ಮಾತನಾಡಿದ ಗೇಲ್‌, “ನೀನು ಇಂದಿನ ಪಂದ್ಯದ ಸಿಂಹ. ನನ್ನೊಂದಿಗೆ ಈವರೆಗೆ ಆಡಿದ ಶ್ರೇಷ್ಠ ಆರಂಭಿಕ ಜತೆಗಾರ ನೀನು. ವಿಕೆಟ್‌ ಮಧ್ಯದಲ್ಲಿ ನಮ್ಮಿಬ್ಬರ ನಡುವಣ ಹೊಂದಾಣಿಕೆ ಅದ್ಭುತವಾದದ್ದು,” ಎಂದು ರಾಹುಲ್‌ ಬಗ್ಗೆ ಹಾಡಿ ಹೊಗಳಿದರು.

ನಾವಿಬ್ಬರೂ ಕೆಲವು ಅದ್ಭುತ ಜತೆಯಾಟಗಳನ್ನು ಕಟ್ಟಿದ್ದೇವೆ. ನಾನು ಯಾವತ್ತೂ ನೀನು ಭಾರತದ ಮುಂದಿನ ಸೂಪರ್ ಸ್ಟಾರ್ ಎಂದು ಹೇಳುತ್ತಿರುತ್ತೇನೆ. ಆ ಹೇಳಿಕೆಯಿಂದ ಈಗಲೂ ಕದಲುವುದಿಲ್ಲ. ಕ್ರೀಸ್‌ನಲ್ಲಿ ನಮ್ಮಿಬ್ಬರ ಸಂವಹನ ಅದ್ಭುತವಾಗಿತ್ತು ಎಂದರು. ಬಳಿಕ ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಚೆನ್ನಾಗಿ ಆಡುವಂತೆ ಎಂದು ಹಾರೈಸಿದ ಗೇಲ್ ವೆಸ್ಟ್‌ಇಂಡೀಸ್ ಹೊರತುಪಡಿಸಿ ಇತರೆಲ್ಲ ತಂಡಗಳ ವಿರುದ್ಧ ಉತ್ತಮ ಬ್ಯಾಟಿಂಗ್ ಮಾಡುವಂತೆ ಹೇಳೇ ಹಾಸ್ಯ ಚಟಾಕಿ ಹಾರಿಸಿದರು.

ಇನ್ನು ಗೇಲ್ ಬಗ್ಗೆ ಕೂಡ ಮೆಚ್ಚುಗೆ ವ್ಯಕ್ತ್ಯಪಡಿಸಿದ ರಾಹುಲ್ “ನನ್ನ 21ನೇ ವಯಸ್ಸಿನಲ್ಲಿ ಆರ್‌ಸಿಬಿ ತಂಡದಲ್ಲಿ ಆಡುವಾಗ ಗೇಲ್‌ ಅವರ ಜೊತೆ ಆಡುತ್ತಾ ಬಂದಿದ್ದೇನೆ. ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಗೇಲ್‌ ಅವರಿಂದ ಸಾಕಷ್ಟು ಪಾಠ ಕಲಿತಿದ್ದೇನೆ. ಅವರ ಜೊತೆಗೆ ಆಡುವುದನ್ನು ಆನಂದಿಸಿದ್ದೇನೆ,” ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top