fbpx
ಸಮಾಚಾರ

ಸರ್ಕಾರದಿಂದ ‘ಸಾಲಮನ್ನಾ’ ಮಾಡಿರುವ ವಿವರ ಬಿಡುಗಡೆ- ನೀತಿ ಸಂಹಿತೆ ಮುಗಿದ ನಂತರ ₹900 ಕೋಟಿ ಬಿಡುಗಡೆಗೆ ಸಿದ್ಧತೆ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಬಿಡುಗಡೆ ಮಾಡಿರುವ ರೈತರ ಸಾಲಮನ್ನಾ ವಿವರವನ್ನು ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿದೆ. ಅಂಕಿ ಅಂಶಗಳ ಸಮೇತ ಮಾಹಿತಿ ನೀಡಿದ ಸಾಲಮನ್ನ ಯೋಜನೆಯ ಸಮನ್ವಯ ಅಧಿಕಾರಿ ಮನೀಷ್ ಮೌದ್ಗಿಲ್ ರವರು ಬಿಡುಗಡೆ ಮಾಡಿದ್ದಾರೆ.

ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಮುಕ್ತಾಯವಾದ ಬಳಿಕ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾದ ₹900 ಕೋಟಿ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕರ್ಮಷಿಯಲ್ ಬ್ಯಾಂಕ್​ನ ಕ್ರಾಪ್ ಲೋನ್ ಮೊತ್ತ 7.49ಲಕ್ಷ ರೂಪಾಯಿ ಹಾಗೂ ಫಲಾನುಭವಿ ರೈತರಿಗೆ ನೀಡಿದ ಒಟ್ಟು ಮೊತ್ತ 3,929 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. 1.5 ಲಕ್ಷ ರೈತರಿಗೆ 900 ಕೋಟಿ ಹಣ ಇದೇ ತಿಂಗಳ 23ರ ನಂತರ ಬಿಡುಗಡೆ ಆಗಲಿದೆ.

ಒಟ್ಟು ಮೊತ್ತ 8.1(810,000)ಲಕ್ಷ ಫಲಾನುಭವಿ ರೈತರಿಗೆ 3,488 ಕೋಟಿ ರೂಪಾಯಿಗಳು ಏಪ್ರಿಲ್ ತಿಂಗಳ ತನಕ ಬಿಡುಗಡೆ ಮಾಡಲಾಗಿದೆ. ಒಟ್ಟು ಕಮರ್ಷಿಯಲ್ ಮತ್ತು ಸೊಸೈಟಿಯ ಸಾಲಮನ್ನಕ್ಕಾಗಿ 15.5(1,550, 000)ಲಕ್ಷ ಫಲಾನುಭವಿ ರೈತರು 7,417 ಕೋಟಿ ರೂಪಾಯಿ ಬಿಡುಗಡೆ ಆಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top