fbpx
ಭವಿಷ್ಯ

ಮೇ 08- ನಾಳೆಯ ಪಂಚಾಂಗ ಮತ್ತು ದಿನಭವಿಷ್ಯ

ಸ್ಥಳ- ಬೆಂಗಳೂರು.
ಬುಧವಾರ, ಮೇ 08 2019
ಸೂರ್ಯೋದಯ : 5:56 am
ಸೂರ್ಯಾಸ್ತ: 6:35 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ವೈಶಾಖ
ಪಕ್ಷ : ಶುಕ್ಲಪಕ್ಷ
ತಿಥಿ :ಚತುರ್ಥೀ 24:59
ನಕ್ಷತ್ರ :ಮೃಗಶಿರ 16:00
ಯೋಗ :ಸುಕರ್ಮ 21:18
ಕರಣಂ: ವಾಣಿಜ 13:40 ವಿಷ್ಟಿ 24:59

ಅಭಿಜಿತ್ ಮುಹುರ್ತ:Nil
ಅಮೃತಕಾಲ :7:22 am – 8:56 am

ರಾಹು ಕಾಲ:12:16 pm – 1:50 pm
ಗುಳಿಕ ಕಾಲ: 10:42 am – 12:16 pm
ಯಮಗಂಡ:7:34 am – 9:08 am

 

 

ಮಾನಸಿಕ ಗೊಂದಲದಿಂದ ದೂರ ಇರುವುದು ಒಳ್ಳೆಯದು. ಕೆಲವೊಮ್ಮೆ ನಿಮ್ಮ ಉದಾಸೀನತೆಯಿಂದ ವ್ಯವಹಾರದಲ್ಲಿ ಸಮಸ್ಯೆಗಳು ತಲೆದೋರುವ ಸಾಧ್ಯತೆ ಇದ್ದು, ಸಂಯಮದಿಂದ ವರ್ತಿಸಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ ಕಂಡುಬರುವುದು.

 

ಮನುಷ್ಯನಿಗೆ ಆತ್ಮವಿಶ್ವಾಸ ಅತಿ ಮುಖ್ಯ. ಆದರೆ ಅತಿಯಾದ ಆತ್ಮವಿಶ್ವಾಸ ಕಾರ್ಯಹಾನಿಗೆ ಕಾರಣವಾದೀತು. ಹಾಗೆಂದ ಮಾತ್ರಕ್ಕೆ ಧೃತಿಗೆಡುವ ಅವಶ್ಯಕತೆ ಇಲ್ಲ,ವಿವಿಧ ಮೂಲಗಳಿಂದ ಹಣ ಹರಿದು ಬರುವುದು. ಹಣ ಉಳಿತಾಯದ ಕಡೆ ಗಮನ ಹರಿಸಿ.

 

ಹಲವು ವಿಷಯಗಳಲ್ಲಿ ನಿಮಗೆ ಗೊಂದಲ ಉಂಟಾಗುವುದು. ಹಾಗಾಗಿ ಯಾವುದೇ ವಿಷಯಗಳ ಬಗ್ಗೆ ಖಚಿತ ಹಾಗೂ ಸ್ಪಷ್ಟ ನಿಲುವು ತಾಳುವುದು ಒಳ್ಳೆಯದು. ಹಣದ ಹರಿವು ನೀವು ಬಯಸಿದಂತೆ ಇರುವುದರಿಂದ ತೊಂದರೆ ಇಲ್ಲ.

 

ಕುಟುಂಬದ ಸದಸ್ಯರೊಡನೆ ಸಾಮರಸ್ಯ ಕಾಪಾಡಿಕೊಳ್ಳುವುದರಿಂದ ಹೆಚ್ಚು ಪ್ರಯೋಜನವಾಗುವುದು. ಆಡುವ ಮಾತಿನಲ್ಲಿ ವ್ಯಂಗ್ಯ ಬೆರೆಸಿ ಮಾತನಾಡದಿರಿ. ಇದರಿಂದ ಉತ್ತಮ ಸಂಬಂಧಗಳು ಕೈ ತಪ್ಪಿ ಹೋಗುವವು.

 

 

ನೀವು ಹಮ್ಮಿಕೊಳ್ಳುವ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಮುಂದೆ ಸಾಗುವವು. ನಿಮ್ಮ ಶ್ರಮ ಹಾಗೂ ನಿಷ್ಠೆಯ ಫಲವಾಗಿ ಉತ್ತಮ ಆದಾಯ ಹೊಂದುವಿರಿ. ಆದರೆ ಖರ್ಚು, ವೆಚ್ಚಗಳ ಮೇಲೆ ನಿಗಾ ಇಡುವುದು ಒಳ್ಳೆಯದು.

 

 

ಮನೆಯಲ್ಲಿ ಅಶಾಂತತೆ ಮೂಡುವುದು. ಹಿರಿಯರ ಸಲಹೆ ಪಡೆಯಿರಿ. ಸಜ್ಜನರ ಭೇಟಿಯಾಗುವುದು ಅನವಶ್ಯಕವಾಗಿ ಉದ್ವೇಗಗೊಳ್ಳುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು.

 

 

ನಿಮ್ಮ ಆಲೋಚನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಸ್ನೇಹಿತರ ಸಹಕಾರದಿಂದ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ನಿಮ್ಮ ಉನ್ನತಿಗೆ ಎಲ್ಲರಿಂದಲೂ ಸಹಾಯ ದೊರೆಯಲಿದೆ. ಅನವಶ್ಯಕ ಖರ್ಚು ಹೆಚ್ಚಾಗುವ ಸಂಭವವಿದೆ.

 

 

ಬಹುದಿನಗಳ ಆಕಾಂಕ್ಷೆ ನೆರವೇರಲಿದೆ. ಕುಟುಂಬದೊಂದಿಗೆ ಉತ್ತಮ ಮಧುರ ಬಾಂಧವ್ಯ ಬೆಳೆಯಲಿದೆ. ಅತಿಯಾದ ಸಂಶಯದಿಂದ ಒಳ್ಳೆಯ ಸಮಯ ಕಳೆದುಕೊಳ್ಳುವಿರಿ.

ನಿಮ್ಮ ಆತ್ಮಬಲವನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡಿಕೊಳ್ಳದಿರಿ. ಇದರಿಂದ ಕೆಲಸಗಳಲ್ಲಿ ನಿರಾಸಕ್ತಿ ಮೂಡುವುದು. ಮಕ್ಕಳ ನಡಾವಳಿಕೆಗಳು ನಿಮಗೆ ಬೇಸರವನ್ನುಂಟು ಮಾಡುವವು.

 

 

ಮಾತೇ ಮುತ್ತು ಮಾತೇ ಶತ್ರು ಎಂದರು ಅನುಭಾವಿಗಳು. ನೀವು ತಮಾಷೆಗೆ ಆಡಿದ ಮಾತು ವಿಕೋಪಕ್ಕೆ ಹೋಗುವ ಸಂದರ್ಭ ಬರುವುದು. ಹಾಗಾಗಿ ಸಾಮಾಜಿಕವಾಗಿ ವ್ಯವಹರಿಸುವಾಗ ಎರಡು ಬಾರಿ ಯೋಚಿಸಿ ಮುಂದುವರೆಯಿರಿ.

 

ಹಮ್ಮಿಕೊಂಡ ಕೆಲಸ ಕಾರ್ಯಗಳು ದೈವಕೃಪೆಯಿಂದ ಪೂರ್ಣಗೊಳ್ಳುವವು. ಕಷ್ಟದಲ್ಲಿರುವ ನಿಮ್ಮ ಸ್ನೇಹಿತರಿಗೆ ನಿಮ್ಮ ಸಹಾಯ ಬೇಕಾಗುವುದು.  ಹಿರಿಯರಿಂದ ಬರುವ ಸಲಹೆಗಳನ್ನು ತಿರಸ್ಕರಿಸದಿರಿ

 

ನಿಮ್ಮ ಆರ್ಥಿಕ ಪರಿಸ್ಥಿತಿಯು ಹಳಿ ತಪ್ಪದಂತೆ ನೋಡಿಕೊಳ್ಳಿ. ಬಂಧುಗಳ ಅಪರೂಪದ ಭೇಟಿ ಸಂತಸ ತರಲಿದೆ.ಸಹೋದ್ಯೋಗಿಗಳ ವಿರೋಧದ ನಡುವೆ ಕೆಲಸ ಮಾಡಬೇಕಾದ ಪ್ರಸಂಗ ಬರಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top