fbpx
ಸಮಾಚಾರ

ತಪ್ಪು ಮಾಡಿದ್ದಲ್ಲದೇ RCB ಮೇಲಿನ ಸಿಟ್ಟಿಗೆ ಚಿನ್ನಸ್ವಾಮಿಯಲ್ಲಿ ಬಾಗಿಲು ಮುರಿದ ಅಂಪೈರ್‌- ಬಿತ್ತು ದಂಡ.

12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಹೆಚ್ಚು ಟೀಕೆ ಹಾಗೂ ವಿವಾದಕ್ಕೆ ಗುರಿಯಾಗಿದ್ದು ಅಂಪೈರ್. ಪ್ರತಿ ಪಂದ್ಯದಲ್ಲಿ ಒಂದಲ್ಲಾ ಒಂದು ಎಡವಟ್ಟು ಮಾಡಿಕೊಂಡಿರುವ ಅಂಪೈರ್ ವಿರುದ್ದ ಆಟಗಾರರು ಹಾಗೂ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ RCB ಮೇಲಿನ ಸಿಟ್ಟಿನಲ್ಲಿ ಅಂಪೈರ್ ಕೊಠಡಿಯ ಬಾಗಿಲಿಗೆ ಒದ್ದ ಘಟನೆ ನಡೆದಿದೆ.

ಕಳೆದ ಭಾನುವಾರ ಬೆಂಗಳೂರಿನ ಚೆನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಸನ್​​ರೈಸರ್ಸ್​ ಹೈದರಾಬಾದ್ ನಡುವಣ ಪಂದ್ಯದ ವೇಳೆ ಅಂಪೈರ್ ನಿಗೆಲ್ ಲಾಂಗ್ ಕಿರಿಕ್ ಮಾಡಿಕೊಂಡಿದ್ದಾರೆ. ಆರ್​ಸಿಬಿ ಬೌಲಿಂಗ್ ಮಾಡುವ ವೇಳೆ 20ನೇ ಓವರ್​ನ ಉಮೇಶ್ ಯಾದವ್​ರ 5ನೇ ಎಸೆತವನ್ನು ಅಂಪೈರ್ ನಿಗೆಲ್ ಅವರು ನೋ ಬಾಲ್ ಎಂದು ತೀರ್ಪು ನೀಡಿದರು.

ಆದರೆ, ಟಿವಿ ರಿಪ್ಲೇನಲ್ಲಿ ನೋಡಿದಾಗ ಉಮೇಶ್ ಸರಿಯಾಗಿಯೆ ಬಾಲ್ ಮಾಡಿದ್ದರು. ನೋ ಬಾಲ್ ಅಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿತ್ತು. ಉಮೇಶ್ ಯಾಧವ್ ಅಂಪೈರ್ ತೀರ್ಪಿನ ವಿರುದ್ದ ಅಸಮಾಧಾನ ಹೊರಹಾಕಿದ್ದರು. ತಕ್ಷಣ ನಾಯಕ ವಿರಾಟ್ ಕೊಹ್ಲಿ ಅಂಪೈರ್ ವಿರುದ್ಧ ವಾಗ್ವಾದಕ್ಕಿಳಿದಿದ್ದರು. ನೋ ಬಾಲ್ ಇಲ್ಲದಿದ್ದರೂ ನೋ ಬಾಲ್ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.

ಆ ಬಳಿಕ ಇನ್ನಿಂಗ್ಸ್ ಮುಗಿದ ಮೇಲೆ ಅಂಪೈರ್ ನಿಗೆಲ್ ಅವರು ಈ ವಿಚಾರದಿಂದ ಆಕ್ರೋಶಗೊಂಡು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿರುವ ಅಂಪೈರ್ ಕೊಠಡಿಗೆ ವಾಪಸಾಗಿ ಕೊಠಡಿಯ ಬಾಗಿಲಿಗೆ ಒದ್ದು, ಬಾಗಿಲು ಮುರಿದಿದ್ದಾರೆ. ಅಂಪೈರ್ ಅವರ ಈ ವರ್ತನೆ ಬಗ್ಗೆ ಕೆ.ಎಸ್.ಸಿ.ಎ., ಬಿಸಿಸಿಐಗೆ ಮಾಹಿತಿ ನೀಡಿದ್ದು ದಂಡ ವಿಧಿಸಬೇಕೆಂದು ಹೇಳಿದೆ. ಬಾಗಿಲು ಮುರಿದ ತಪ್ಪಿಗೆ ಅಂಪೈರ್ 5000 ರೂಪಾಯಿ ದಂಡ ಕಟ್ಟಬೇಕೆಂದು ಆಗ್ರಹಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top