fbpx
ಸಮಾಚಾರ

ಅಕ್ಷಯ ತದಿಗೆ ದಿನ ಚಿನ್ನ ಕೊಂಡುಕೊಳ್ಳೋ ಮುಂಚೆ ಈ ವಿಷಯಗಳು ತಲೆಲಿದ್ರೆ ಜೇಬಿಗೆ ಕತ್ತರಿ,ತಲೆಗೆ ಟೋಪಿ ಬೀಳೋದು ತಪ್ಪುತ್ತೆ

ಅಕ್ಷಯ ತದಿಗೆ ದಿನ ಚಿನ್ನ ಖರೀದಿ ಮಾಡುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯ ಈ ದಿನ ಚಿನ್ನ ಖರೀದಿ ಮಾಡುವಾಗ ಈ ವಿಷಯಗಳು ನಿಮ್ಮ ತಲೆಯಲ್ಲಿದ್ದರೆ ನಿಮ್ಮ ಜೇಬಿಗೆ ಬೀಳುವ ಕತ್ತರಿ ಹಾಗೂ ನಿಮ್ಮ ತಲೆ ಮೇಲೆ ಹಾಕುವ ಟೋಪಿ ಎರಡರಿಂದಲೂ ತಪ್ಪಿಸಿಕೊಳ್ಳಬಹುದು ಅದು ಹೇಗೆ ಅಂತಿರಾ ಮುಂದೆ ಓದಿ

 

 

14,24,22,18 ಶುದ್ಧತೆಯನ್ನು ಅಳೆಯುವ ಮಾಪನ ಕ್ಯಾರೆಟ್ ಈ ಮೊದಲೇ ತಿಳಿಸಿದ ಕ್ಯಾರೆಟ್ ಪ್ರಮಾಣದಲ್ಲಿ ಚಿನ್ನ ಇದ್ದರೆ ಅದನ್ನು ಖರೀದಿ ಮಾಡಬೇಡಿ ಏಕೆಂದರೆ ಅದು ಪರಿಶುದ್ಧಿ ಯಾಗಿರುವುದಿಲ್ಲ 24ಕ್ಯಾರೆಟ್ ಪರಿಮಾಣ ಇರುವ ಚಿನ್ನವನ್ನು ಮಾತ್ರ ಖರೀದಿ ಮಾಡಿ .

ಚಿನ್ನ ಖರೀದಿ ಮಾಡುವಾಗ ಬಿಎಸ್ ಹಾಲ್ ಮಾರ್ ಮುದ್ರೆ ಇದೆಯಾ ಎಂಬುದನ್ನು ನೋಡಿ ಮತ್ತೆ ಮತ್ತೆ ಖಚಿತ ಪಡಿಸಿಕೊಳ್ಳಿ .

 

 

ಬಗೆ ಬಗೆಯ ಆಫರ್ ಗಳನ್ನು ಕೊಟ್ಟು ಮೇಕಿಂಗ್ ಹಾಗೂ ವೇಸ್ಟೇಜ್ ಚಾರ್ಜ್ಗಳಲ್ಲಿ ಹೆಚ್ಚಳವನ್ನು ಮಾಡಿರುತ್ತಾರೆ ಈ ಬಗ್ಗೆ ಗಮನವಿರಲಿ .

ಆಭರಣವನ್ನು ತೂಕ ಮಾಡುವಾಗ ಆಭರಣದಲ್ಲಿ ಸ್ಟೋನ್ ಹಾಗೂ ವ್ಯಾಕ್ಸ್ ಇವುಗಳ ತೂಕವನ್ನು ಆಭರಣದ ಒಟ್ಟು ತೂಕದಿಂದ ಕಡಿಮೆ ಮಾಡಿರಬೇಕು ಒಟ್ಟು ಆಭರಣಕ್ಕೆ ಅವರು ನಿಮಗೆ ಚಾರ್ಜ್ ಮಾಡುವ ಬದಲು ಕೇವಲ ಚಿನ್ನಕ್ಕೆ ಮಾತ್ರ ಚಾರ್ಜ್ ಮಾಡಬೇಕಾಗುತ್ತದೆ ಇದರ ಬಗ್ಗೆ ಎಚ್ಚರಿಕೆಯಿಂದ ಇರಿ

ಒಂದು ವೇಳೆ ಆಭರಣವನ್ನು ಬದಲಾಯಿಸಬೇಕು ಎಂದುಕೊಂಡರೆ ಎಷ್ಟು ದಿನಗಳ ಒಳಗೆ ಬದಲಾಯಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ ಹಾಗೆಯೇ ಆಭರಣ ಖರೀದಿ ಮಾಡುವಾಗ ಕಲ್ಲಿನ ಹಾಗೂ ವ್ಯಾಕ್ಸ್ ತೂಕವನ್ನು ಕಡಿಮೆ ಮಾಡಿ ಮೇಕಿಂಗ್ ಚಾರ್ಜ್ ಹಣವನ್ನು ನೀಡಿರುತ್ತೇವೆ ಆದರೆ ಆಭರಣವನ್ನು ಹಿಂದಿರುಗಿಸುವಾಗ ಆಭರಣದ ಒಟ್ಟು ತೂಕವನ್ನಷ್ಟೇ ಗಣನೆಗೆ ತೆಗೆದುಕೊಳ್ಳುತ್ತಾರೆ .

 

 

ಆಭರಣವನ್ನು ಖರೀದಿ ಮಾಡುವ ಮುನ್ನ ಆ ದಿನ ಚಿನ್ನದ ಬೆಲೆ ಒಂದು ಗ್ರಾಂಗೆ ಎಷ್ಟಿವೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಮೊದಲೇ ತಿಳಿದುಕೊಳ್ಳಿ

ಯಾವ ರೀತಿಯ ಡಿಸೈನ್ ಆಭರಣಗಳು ನಿಮಗೆ ಬೇಕು ಎಂಬುದನ್ನು ಮೊದಲೇ ಇಂಟರ್ನೆಟ್ನಲ್ಲಿ ಅಥವಾ ಸ್ನೇಹಿತರಿಂದ ಮಾಹಿತಿ ಪಡೆದು ತಿಳಿದುಕೊಂಡಿರಿ

 

 

ಆಭರಣವನ್ನು ಖರೀದಿ ಮಾಡಿದ ನಂತರ ಬಿಲ್ಲನ್ನು ಕೇಳಿ ಪಡೆಯಿರಿ ಆಭರಣದಲ್ಲಿ ರಿಪೇರಿ ಅಂತಹ ಅಂಶಗಳು ಕಂಡುಬಂದರೆ ಆಭರಣವನ್ನು ಕೊಂಡು ರಿಪೇರಿ ಅಂತಹ ಅಂಶಗಳು ಕಂಡುಬಂದರೆ ಆಭರಣವನ್ನು ಕೊಂಡುಕೊಂಡ ಅಂಗಡಿಯಲ್ಲಿ ರಿಪೇರಿ ಮಾಡಿಸಿ .

ಆಭರಣ ಕೊಂಡುಕೊಂಡು ಬಂದ ನಂತರ ಪ್ಯಾಕಿಂಗ್ ಅನ್ನು ಮತ್ತೆ ಮತ್ತೆ ಪರೀಕ್ಷಿಸಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top