fbpx
ಸಮಾಚಾರ

RCB ಟೀಮ್ ಮೇಲೆ ಮಾಜಿ ಮಾಲೀಕ ವಿಜಯ್ ಮಲ್ಯ ಗರಂ.

ಐಪಿಎಲ್ ಆರಂಭವಾಗಿ 12 ವರ್ಷಗಳೇ ಸಂದರೂ ಆರ್‌ಸಿಬಿ ಇದುವರೆಗೆ ಟ್ರೋಫಿ ಗೆದ್ದಿಲ್ಲ. ಹಾಗಿದ್ದರೂ ಆರ್‌ಸಿಬಿ ಮೇಲಿನ ಅಭಿಮಾನಿಗಳ ಪ್ರೀತಿ ಮಾತ್ರ ಕಿಂಚಿತ್ತು ಕುಗ್ಗಿಲ್ಲ. ಸೋಲುಗಳ ಮೇಲೆ ಸೋಲುಗಳನ್ನು ಅವಮಾನಕ್ಕೆ ಒಳಗಾಗುತ್ತಿರುವಾಗಲೂ ಅಭಿಮಾನಿಗಳು ಮತ್ತಷ್ಟು ತೀವ್ರತೆಯಿಂದ ಸಾಗರದ ಅಲೆಯಂತೆ ಅಪ್ಪಳಿಸುತ್ತಿದ್ದರು.

ಈ ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದು ಟೂರ್ನಿಯಿಂದ ಹೊರ ಬಂದ ಆರ್‌ಸಿಬಿ ತಂಡಕ್ಕೆ ಮಾಜಿ ಚೇರ್ಮೆನ್ ಹಾಗೂ ಮಾಲೀಕ ವಿಜಯ್ ಮಲ್ಯ ಸೋಲಿಗೆ ಕಾರಣ ತಿಳಿಸಿದ್ದಾರೆ.

 

 

RCB ಟೂರ್ನಿಗೆ ವಿದಾಯ ಹೇಳುತ್ತಿದ್ದಂತೆ ನಾಯಕ ವಿರಾಟ್ ಕೊಹ್ಲಿ ಸೋಲು ಗೆಲುವಿನಲ್ಲಿ ತಂಡವನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಹಾಗೂ ಎಲ್ಲರಿಗೂ ಧನ್ಯವಾದ ಹೇಳಿದ್ದರು. ಇದರ ಜೊತೆಗೆ RCB ಅಭಿಮಾನಿಗಳ ಫೋಟೋವನ್ನು ಸಹ ಕೊಹ್ಲಿ ಹಂಚಿಕೊಂಡಿದ್ದರು., ಇದರ ಬೆನ್ನಲ್ಲೇ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ. ಪ್ರತಿ ಆವೃತ್ತಿಯಲ್ಲಿ RCB ಅತ್ಯುತ್ತಮ ತಂಡ. ಆದರೆ ಇದು ಪೇಪರ್‌ನಲ್ಲಿ ಮಾತ್ರ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿರುವುದು ತುಂಬಾ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಭಾರಿ 14 ಲೀಗ್ ಪಂದ್ಯದಲ್ಲಿ 5 ಗೆಲುವು ಹಾಗೂ8 ಸೋಲು ಕಂಡಿದೆ. ಈ ಮೂಲಕ 11 ಅಂಕ ಸಂಪಾದಿಸಿದೆ. ಇಷ್ಟೇ ಅಲ್ಲ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top