fbpx
ಸಮಾಚಾರ

ನಕಲಿ ಅಧಿಕಾರಿಗೆ ನಡು ರಸ್ತೆಯಲ್ಲೇ ಗೂಸಾ ಕೊಟ್ಟ ಮಹಿಳೆ- ವಿಡಿಯೋ ವೈರಲ್.

ಜಾರ್ಖಂಡದ ಜಮಷೆಡಪುರ ಮ್ಯಾಂಗೋ ಪ್ರದೇಶದಲ್ಲಿ ಭ್ರಷ್ಟಾಚಾರ ವಿರೋಧಿ ಅಧಿಕಾರಿ ಎಂದು ಪೋಸ್ ನೀಡಿ 50 ಸಾವಿರ ರೂಪಾಯಿ ಬೇಡಿಕೆ ಇಟ್ಟ ವ್ಯಕ್ತಿಗೆ ಮಹಿಳೆಯೊಬ್ಬಳು ಸಾರ್ವಜನಿಕವಾಗಿ ಚಪ್ಪಲಿಯಿಂದ ಥಳಿಸಿದ್ದಾಳೆ.ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

50 ಸಾವಿರ ರೂ. ನೀಡುವಂತೆ ಕೇಳಿದ್ದ ನಕಲಿ ಅಧಿಕಾರಿಗೆ ಹಣ ನೀಡುತ್ತೇನೆ ಇಂದು ಬಾ ಎಂದು ಹೇಳಿದ್ದಳು. ಇತ್ತ ಪೊಲೀಸರಿಗೂ ಮಹಿಳೆ ದೂರು ನೀಡಿದ್ದಳು. ನಕಲಿ ಅಧಿಕಾರಿ ಹಣ ಪಡೆಯಲು ಬಂದ ತಕ್ಷಣ ಆತನನ್ನು ವ್ಯಕ್ತಿಯೊಬ್ಬ ನಡು ರಸ್ತೆಯಲ್ಲಿಯೇ ಥಳಿಸಿದ್ದಾರೇ. ಬಳಿಕ ಮಹಿಳೆ, ನನ್ನ ಜೀವನ್ನೇ ಹಾಳು ಮಾಡಲು ಬಂದಿದ್ಯಾ ಎಂದು ಹೇಳುತ್ತ ಚಪ್ಪಲಿ ಹಿಡಿದು ಹೊಡೆದಿದ್ದಾಳೆ.

 

 

ಈ ಬೇಡಿಕೆಯಿಂದ ದಿಗ್ಭ್ರಮೆಗೊಂಡ ಮಹಿಳೆ ಎಸಿಬಿಗೆ ಕರೆ ಮಾಡಿದ್ದಾರೆ.ಆಗ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೆ ತಾವು ದಾಳಿ ಮಾಡುವುದಿಲ್ಲವೆಂದು ಹೇಳಿದ್ದಾರೆ. ನಂತರ ಪೊಲೀಸರಿಗೆ ಕರೆ ಮಾಡಿ ನನ್ನ ಸಂಬಂಧಿಕರು ಮತ್ತು ಸ್ನೇಹಿತರ ಸಹಾಯದಿಂದ ನಾವು ಆತನನ್ನು ಬಂಧಿಸಿದ್ದೇವೆ” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top