fbpx
ಸಮಾಚಾರ

ನಟಿ ರಮ್ಯಾ ವಿರುದ್ಧ ಅಶ್ಲೀಲ ಪೋಸ್ಟ್- ವಿಕೃತನ ವಿರುದ್ಧ ಎಫ್​ಐಆರ್ ದಾಖಲು.

ಫೇಸ್ ಬುಕ್ಕೆಂಬುದು ಈವತ್ತಿಗೆ ಪರಿಧಿ ಮೀರಿ ಬೆಳೆದುಕೊಂಡಿದೆ. ಅದರಿಂದ ಅದೇನೇನು ಒಳ್ಳೆಯದ್ದಾಗುತ್ತಿದೆಯೋ… ಆದರೆ ಕೆಟ್ಟದ್ದರ ಪ್ರಮಾಣವೇ ಹೆಚ್ಚು. ಅದರಲ್ಲಿಯೂ ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರೋ ಮಹಿಳಾ ರಾಜಕಾರಣಿಗಳು ಮತ್ತು ನಟಿಯರ ಪಾಡಂತೂ ಹೇಳತೀರದು. ಅವರನ್ನು ಕೀಳು ಮಟ್ಟದಲ್ಲಿ ನಿಂದಿಸಿ ವಿಕೃತಾನಂದ ಪಡಲೆಂದೇ ಆನ್‌ಲೈನ್ ಕಿಡಿಗೇಡಿಗಳ ಹಿಂಡೊಂದು ಸಕ್ರಿಯವಾಗಿದೆ.

ಮಾಜಿ ಸಂಸದೆಯೂ ಆಗಿರುವ ನಟಿ ರಮ್ಯಾ ಅವರ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅತ್ಯಂತ ಕೊಳಕಾಗಿ ಪೋಸ್ಟ್‌ ಮಾಡಿದ್ದ ಆರೋಪಿ ವಿರುದ್ಧ ಸೈಬರ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ರಮ್ಯಾ ಪರವಾಗಿ ವಕೀಲರಾದ ಎಚ್ ವಿ ಭವ್ಯಾ ಅವರು ಮಾಹಿತಿ ತಂತ್ರಜ್ಞಾನ ಕಾಯಿದೆ ಹಾಗೂ ಮಹಿಳೆಯ ಘನತೆಗೆ ಧಕ್ಕೆ ತಂದಿರುವ ಆರೋಪದಡಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದಡಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸೈಬರ್‌ ಕ್ರೈಂ ಪೊಲೀಸರು ಹೇಳಿದ್ದಾರೆ.

ನವೀನ್ ಸಾಗರ್ ಎಂಬುವವರು ತನ್ನ ಫೇಸ್‍ಬುಕ್ ಖಾತೆಯಲ್ಲಿ ನಟಿ, ಮಾಜಿ ಸಂಸದೆ ರಮ್ಯಾ ನಟಿಸಿರುವ ಚಲನಚಿತ್ರದ ಫೋಟೋ ಬಳಸಿ ವಿಕೃತವಾಗಿ ಬಿಂಬಿಸಿ ಅಶ್ಲೀಲ ಪಗಳಿಂದ ಮಹಿಳೆಯ ಚಾರಿತ್ರ್ಯ ಹರಣ ಮಾಡಿದ ಬರಹ ಪೋಸ್ಟ್ ಮಾಡಿದ್ದಾಗಿ ದೂರಿನಲ್ಲಿ ಭವ್ಯಾ ಅವರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top