fbpx
ಸಮಾಚಾರ

ನಟಿ ಜೊತೆಯೇ ಮತ್ತೊಬ್ಬ ನಟಿಯ ಮದುವೆ? ನಟಿ ಚಾರ್ಮಿಯೊಡನೆ ವಿವಾಹವಾಗಲು ಒಪ್ಪಿಕೊಂಡ ತ್ರಿಶಾ.

ಮೊದಲಿನಿಂದಲೂ ಪ್ರೀತಿಗೆ ವಯಸ್ಸು, ಜಾತಿ ಬೇಧವಿಲ್ಲ ಎನ್ನಲಾಗುತ್ತಿತ್ತು. ಇದೀಗ ಹೊಸದಾಗಿ ಲಿಂಗಬೇಧವೂ ಇಲ್ಲ ಎನ್ನುವ ಮಾತನ್ನು ಸೇರಿಸುವ ಕಾಲ ಬಂದಿದೆ ಎನ್ನಬಹುದೇನೋ! ಅದಿರಲಿ, ಮದುವೆಗೂ ಕೂಡ ಲಿಂಗ ಬೇಧವಿಲ್ಲ ಎನ್ನಬಹುದು.

ಇದೊಂದು ತಮಾಷೆಯ ಟ್ವೀಟರ್ ಸಂಭಾಷಣೆಯಾಗಿದ್ದು ತ್ರಿಷಾ ಕೃಷ್ಣನ್ ಮೇ 04 ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತ್ರಿಷಾ ತನ್ನನ್ನು ಚುಂಬಿಸುತ್ತಿರುವ ಫೋಟೋವನ್ನು ಹಾಕಿ, “ಬೇಬಿ ಐ ಲವ್ ಯೂ ಟುಡೇ, ಫರೆವರ್. ನನ್ನ ಮೊಣಕಾಲ ಮೇಲೆ ಕುಳಿತು ನಿನ್ನ ಸಮ್ಮತಿಯನ್ನು ನಿರೀಕ್ಷೆ ಮಾಡುತ್ತೇನೆ. ನಾವು ಮದುವೆಯಾಗೋಣವೇ? ಈಗ ಕಾನೂನಿನಲ್ಲಿ ಅವಕಾಶ ಇದೆ” ಎಂದು ಹ್ಯಾಪಿ ಬರ್ತ್‍ಡೇ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.

 

 

 

ಈ ಟ್ವೀಟ್ ಗೆ ತ್ರಿಷಾ ಉತ್ತರಿಸುತ್ತಾ, ಥ್ಯಾಂಕ್ಯೂ. ನಾನು ಈಗಾಗಲೇ ಮದುವೆಯಾಗಲು ಒಪ್ಪಿಕೊಂಡಿದ್ದೇನೆ” ಎಂದು ಉತ್ತರಿಸಿದ್ದಾರೆ.

ಚಾರ್ಮಿ ಕೌರ್ ಮತ್ತು ತ್ರಿಷಾ ಕೃಷ್ಣನ್ ಅವರಿಬ್ಬರೂ ಆತ್ಮೀಯ ಸ್ನೇಹಿತೆಯರು. ಅವರಿಬ್ಬರ ತಮಾಷೆಯ ಟ್ವೀಟ್ ನೋಡಿ ಸಾಕಷ್ಟು ಜನರು ಮನಸೋ ಇಚ್ಛೆ ನಕ್ಕು ಹಗುರಾಗಿದ್ದಾರೆ. ಖುಷಿಯ ಸಂಭ್ರಮದಲ್ಲಿ ನಟಿಯರಿಬ್ಬರು ಪರಸ್ಪರ ತಮಾಷೆಗೆ ಕಾಲೆಳೆದುಕೊಂಡಿದ್ದಾರೆ. ಬದಲಾಗಿ ಇಬ್ಬರು ಸಲಿಂಗ ವಿವಾಹಕ್ಕೆ ರೆಡಿಯಾಗಿದ್ದಾರೆಂಬ ಸುದ್ದಿಯನ್ನು ಅಲ್ಲೆಗೆಳೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top