fbpx
ಸಮಾಚಾರ

“ನಾನು ಕ್ರಿಕೆಟರ್ ಹೊರತು, ಮಹಿಳಾ ಕ್ರಿಕೆಟರ್ ಅಲ್ಲ” ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ

ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಣ್ಣ ತಾವು ಒಬ್ಬ ಕ್ರಿಕೆಟರ್ ಹೊರತು ಮಹಿಳಾ ಕ್ರಿಕೆಟರ್ ಅಲ್ಲ, ಅಲ್ಲದೆ ಅಂತಹ ಯಾವುದೇ ತರದ ಲೇಬಲ್ ಗಳ ಅಗತ್ಯವಿಲ್ಲವೆಂದು ಹೇಳಿದ್ದಾರೆ.

“ನಾನು ಎಂದಿಗೂ ಕೂಡ ಮಹಿಳಾ ಕ್ರಿಕೆಟ್ ಆಟಗಾರ್ತಿಯಾಗಿ ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ, ಬದಲಾಗಿ ಕ್ರಿಕೆಟರ್ ಆಗಿ ಗುರುತಿಸಿಕೊಳ್ಳಲು ಇಚ್ಛಿಸುವೆ. ಪುರುಷ ಕ್ರಿಕೆಟರ್ ಎಂದು ಯಾರನ್ನು ಕರೆಯುದಿಲ್ಲ ಆದರೆ ಮಹಿಳಾ ಕ್ರಿಕೆಟರ್ ಲೇಬಲ್ ಗಳು ಏಕೆ ಇವೆ ಎನ್ನುವುದೇ ತಿಳಿಯುತ್ತಿಲ್ಲ” ಎಂದು ಸ್ಮೃತಿ ಮಂಧಾನಾ ಅಭಿಪ್ರಾಯ ಪಟ್ಟಿದ್ದಾರೆ.

“ಪುರುಷ ಆಟಗಾರರ ವಿಷಯದಲ್ಲಿ ಅವರ ಪ್ರದರ್ಶನದ ಮೇಲೆ ಗುರಿತಿಸಲಾಗುತ್ತದೆ ಆದರೆ ಅದೇ ಮಹಿಳೆ ವಿಚಾರದಲ್ಲಿ ಆದ್ರೆ ಲಿಂಗದ ಆಧಾರದ ಮೇಲೆ ಅಳೆಯಲಾಗುತ್ತದೆ. ಯಾವುದೇ ಹೊಂದಾಣಿಕೆ ಇಲ್ಲದೆ ಲಿಂಗ ಆಧಾರಿತ ಸಾಮಾಜಿಕ ಸ್ಥಿತಿಗಳನ್ನು ಮೀರಿ ತಮ್ಮ ಸಾಧನೆ ಮಾಡುವುದೇ ನನ್ನ ಗುರಿ” ಎಂದು ಹೇಳಿದ್ದಾರೆ.

ಸ್ಮೃತಿ ಮಂಧಾನಾ ಆರಂಭಿಕ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯಾಗಿದ್ದು. 2018 ರಲ್ಲಿ 12 ಏಕದಿನ ಪಂದ್ಯದಲ್ಲಿ 669 ರನ್ ಗಳನ್ನು ಗಳಿಸಿದ್ದರು. ಈ ಪ್ರದರ್ಶನಕ್ಕಾಗಿ ಬಿಸಿಸಿಐ ಅತ್ಯುತ್ತಮ ಅಂತರಾಷ್ಟ್ರೀಯ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಪಡೆದಿದ್ದರು. ಅಂದಹಾಗೆ ಮಹಾರಾಷ್ಟ್ರ ಅಂಡರ್-15 ತಂಡಕ್ಕೆ ಆಕೆಯಾದಾಗ ಅವರಿಗೆ ಕೇವಲ 9 ವರ್ಷ ವಯಸ್ಸಾಗಿತ್ತು. ಹೀಗೆ ಅತಿ ಕಿರಿಯ ವಯಸ್ಸಿನಲ್ಲಿಯೇ ಅವರು ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಅವರು ಸದ್ಯ ಭಾರತೀಯ ಮಹಿಳಾ ಕ್ರಿಕೆಟ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top