fbpx
ಸಮಾಚಾರ

“ಎಂ.ಎಸ್​ ಧೋನಿ ಪುತ್ರಿ ಝಿವಾಳನ್ನು ಕಿಡ್ನ್ಯಾಪ್​ ಮಾಡುತ್ತೇನೆ” ಎಂದು ಪ್ರೀತಿ ಜಿಂಟಾ ಹೇಳಿದ್ದೇಕೆ?

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪುತ್ರಿ ಜೀವಾ ಚೂಟಿ ಮಗು ಎಂದು ಬಿಡಿಸಿಹೇಳುವ ಅಗತ್ಯವಿಲ್ಲ. ಜೀವಾ ಸೆಲೆಬ್ರೆಟಿ ಮಕ್ಕಳಲ್ಲಿ ಮಿಂಚೂಣಿಯಲ್ಲಿದ್ದಾಳೆ. ಇನ್ನೂ ಶಾಲೆ ಮೆಟ್ಟಿಲನ್ನೇ ಎರಡು ಪುಟಾಣಿಗೆ ಅದಾಗಲೇ ಸಾಕಷ್ಟು ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ.. ಆಕೆ ಎಲ್ಲೇ ಕಂಡರೂ ಅದನ್ನು ಫೋಟೋ, ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ..

ಈಗ ವಿಷ್ಯ ಏನಪ್ಪಾ ಅಂದ್ರೆ ಇದೀಗ ಆ ಓರ್ವ ವ್ಯಕ್ತಿ ತಾನು ಧೋನಿ ಮಗಳನ್ನು ಅಪಹರಿಸಲಿದ್ದೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಧೋನಿ ಅವರ ಮುದ್ದಿನ ಮಗಳು ಝಿವಾಳನ್ನು ಅಪಹರಿಸುತ್ತೇನೆ ಎಂದು ಬಾಲಿವುಡ್​ ನಟಿ ಮತ್ತು ಕಿಂಗ್ಸ್​ ಇಲೆವೆಲ್​ ಪಂಜಾಬ್​ ತಂಡದ ಮಾಲಕಿ ಪ್ರೀತಿ ಜಿಂಟಾ ತಿಳಿಸಿದ್ದಾರೆ. ಅಲ್ಲದೆ ಇಬ್ಬರ ನಡುವಿನ ತಮಾಷೆಯ ಮಾತುಕತೆಯನ್ನು ಟ್ವೀಟ್​ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ಭಾನುವಾರ ಮೊಹಾಲಿನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಕಿಂಗ್ಸ್​ ಇವೆಲೆನ್​ ಪಂಜಾಬ್​ ತಂಡದ ನಡುವೆ ಪಂದ್ಯ ನಡೆದಿತ್ತು. ಪಂದ್ಯದ ಬಳಿಕ ಧೋನಿ ಅವರನ್ನು ಭೇಟಿ ಮಾಡಿದ ಪ್ರೀತಿ ಜಿಂಟಾ ಕೆಲ ಕಾಲ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ತೆಗೆದ ಚಿತ್ರವನ್ನು ಪ್ರೀತಿ ಜಿಂಟಾ ಮಂಗಳವಾರ ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

 

 

“ಕ್ಯಾಪ್ಟನ್​ ಕೂಲ್ ಧೋನಿಗೆ ನಾನು ಸೇರಿದಂತೆ ಅಪಾರ ಅಭಿಮಾನಿಗಳ ಬಳಗವೇ ಇದೆ. ಆದರೆ ಈ ಬಾರಿ ನನ್ನ ಪ್ರೀತಿ ಅವರ ಪ್ರೀತಿಯ ಮಗಳ ಜೀವಾ ಮೇಲೆ ರವಾನೆಯಾಗಿದೆ. ಈ ಪೋಟೋವನ್ನು ತೆಗೆಯುವಾಗ ನಿಮ್ಮ ಮಗಳನ್ನು ಹುಷಾರಾಗಿ ನೋಡಿಕೊಳ್ಳಿ ಏಕೆಂದರೆ ನಾನು ಅವಳನ್ನು ಅಪಹರಿಸಲಿದ್ದೇನೆ ಎಂದು ಧೋನಿಗೆ ಎಚ್ಚರಿಕೆ ನೀಡಿದ್ದಾಗಿ ಟ್ವೀಟರ್​ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಈ ಪೋಟೋಗೆ ಒಂದು ಶೀರ್ಷಿಕೆ ನೀಡುವಂತೆಯೂ” ಅವರ ಅಭಿಮಾನಿಗಳಲ್ಲಿ ಕೋರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top