fbpx
ಸಮಾಚಾರ

ಮತ್ತೆ ಪುನೀತ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾದ ರಚಿತಾ ರಾಮ್- ಡಿಂಪಲ್ ಕ್ವೀನ್ ಮಾಡಿದ್ದೇನು?

ಡಿಂಪಲ್ ಕ್ವೀನ್ ಖ್ಯಾತಿಯ ನಟಿ ರಚಿತಾ ರಾಮ್ ಮತ್ತೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಇದಕ್ಕೂ ಮುಂಚೆ ಸಾಕಷ್ಟು ಬಾರಿ ನಟ ಪುನೀತ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ನಟಿ ರಚಿತಾರಾಮ್ ಮತ್ತೆ ಅದೇ ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದ್ದಾರೆ. ಇತ್ತೀಚೆಗೆ ಕಿರುತೆರೆಯ ನಿರೂಪಕಿ ಅನುಶ್ರೀ ನಟಿ ರಚಿತಾರಾಮ್ ಸಂದರ್ಶನ ಮಾಡಿದ್ರು. ಅಲ್ಲಿ ರಚಿತಾ ಕೊಟ್ಟ ಒಂದು ಉತ್ತರಕ್ಕೆ ಅಪ್ಪು ಅಭಿಮಾನಿಗಳು ಗರಂ ಆಗಿದ್ದಾರೆ. ವಿವಾದ ಆಗುವಂತಹದ್ದು ಏನಾಯ್ತು ಅಂತೀರಾ ಮುಂದೆ ಓದಿ.

ಅನುಶ್ರೀ ಮತ್ತು ರಚಿತಾ ರಾಮ್ ನಡುವಿನ ಸಂದರ್ಶನದಲ್ಲಿ ‘ಪವರ್ ಸ್ಟಾರ್ ಪುನೀತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಇಬ್ಬರಲ್ಲಿ ಉತ್ತಮ ಡಾನ್ಸರ್ ಯಾರು’ ಎಂದು ರಚಿತಾ ಅವರನ್ನು ಅನುಶ್ರೀ ಕೇಳಿದಾಗ “ಪುನೀತ್ ಜೊತೆ ಅಭಿನಯಿಸಿದ್ದೇನೆ, ರಾಕಿಂಗ್ ಸ್ಟಾರ್ ಉತ್ತಮ ಡ್ಯಾನ್ಸರ್ ಅಂತ ಹೇಳಿದ್ದಾರೆ” ರಚಿತಾ ರಾಮ್. ಈ ಹೇಳಿಕೆಯಿಂದ ಅಪ್ಪು ಅಭಿಮಾನಿಗಳು ರಚಿತಾ ರಾಮ್ ವಿರುದ್ಧ ಕೆಂಡ ಕಾರುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ರೊಚ್ಚಿಗೆದ್ದಿದ್ದಾರೆ.

 

 

ಇನ್ನು 2016ರಲ್ಲಿ ತೆರೆಕಂಡಿದ್ದ ‘ಚಕ್ರವ್ಯೂಹ’ ಸಿನಿಮಾ ಸೆಟ್ಟೇರುವ ವೇಳೆಯಲ್ಲೂ ರಚಿತಾ ನಟಿಸಬಾರದು ಅಂತ ಅಪ್ಪು ಅಭಿಮಾನಿಗಳು ಗರಂ ಆಗಿದ್ದರು. ನಂತರ ‘ನಟಸಾರ್ವಭೌಮ’ ಚಿತ್ರದಲ್ಲೂ ರಚಿತಾರಾಮ್ ಅಪ್ಪುಗೆ ನಾಯಕಿಯಾಗಬಾರದು ಅಂತ ಫ್ಯಾನ್ಸ್ ಸಿಟ್ಟಾಗಿದ್ರು.

ರಚಿತಾ ಕಂಡರೆ ಪುನೀತ್ ಅಭಿಮಾನಿಗಳಿಗೇಕೆ ಕೋಪ?
‘ರಣವಿಕ್ರಮ’ ಸಿನಿಮಾ ಎನ್ನಲಾಗುತ್ತಿದೆ. ‘ಈ ಸಿನಿಮಾಗೆ ಮೊದಲು ರಚಿತಾ ರಾಮ್ ನಾಯಕಿ ಅಂತ ಹೇಳಲಾಗಿತ್ತು. ಆದರೆ, ರಚಿತಾ ಅದೇ ಸಮಯದಲ್ಲಿ ದರ್ಶನ್ ಅಭಿನಯದ ‘ಅಂಬರೀಶ’ ಮತ್ತು ಕಿಚ್ಚ ಸುದೀಪ್ ನಟನೆಯ ‘ರನ್ನ’ ಸಿನಿಮಾದಲ್ಲಿ ಬ್ಯುಸಿ ಇದ್ದರು, ಈ ಕಾರಣದಿಂದ ರಚಿತಾ ‘ರಣವಿಕ್ರಮ’ ಸಿನಿಮಾ ಕೈಬಿಟ್ಟಿದ್ದರು ಎಂದು ಹೇಳಾಗುತ್ತಿದೆ. ಅಲ್ಲಿಂದ ರಚಿತಾ ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top