fbpx
ಸಮಾಚಾರ

ರಮ್ಯಾ ಮಾನಹಾನಿ ಪ್ರಕರಣ: 50 ಲಕ್ಷ ಪರಿಹಾರ ಕೊಡುವಂತೆ ಸುವರ್ಣ ನ್ಯೂಸ್‌ಗೆ ಕೋರ್ಟ್ ಆದೇಶ

ನಟಿ ಹಾಗೂ ಮಾಜಿ ಸಂಸದೆ ರಮ್ಯಾ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿ ಮಾನಹಾನಿ ಮಾಡಿದ ಪ್ರಕರಣದಲ್ಲಿ ಕನ್ನಡ ಸುದ್ದಿವಾಹಿನಿ ಸುವರ್ಣ ನ್ಯೂಸ್ ಗೆ ಬೆಂಗಳೂರು ಸಿವಿಲ್ ಕೋರ್ಟ್ ₹50 ಲಕ್ಷ ದಂಡ ವಿಧಿಸಿದೆ. 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ ಹಗರಣದಲ್ಲಿ ನಟಿ, ರಾಜಕಾರಣಿ ರಮ್ಯಾ ಭಾಗಿಯಾಗಿದ್ದಾರೆ ಎಂದು ಏಷ್ಯಾನೆಟ್ ಮತ್ತು ಸುವರ್ಣ ನ್ಯೂಸ್‌ ಸುಳ್ಳು ಸುದ್ದಿ ಬಿತ್ತರಿಸಿದ್ದರ ತಪ್ಪಿಗೆ ₹50 ಲಕ್ಷ ದಂಡವನ್ನು ಈಗ ಕಟ್ಟಬೇಕಿದೆ..

ಮ್ಯಾಚ್ ಫಿಕ್ಸಿಂಗ್/ ಸ್ಪಾಟ್ ಫಿಕ್ಸಿಂಗ್ ಪ್ರಕರಣಲ್ಲಿ ರಮ್ಯಾ ಭಾಗಿಯಾಗಿದ್ದಾರೆ ಎಂದು ಈ ಸುದ್ದಿ ವಾಹಿನಿ ವಿಶೇಷ ಕಾರ್ಯಕ್ರಮವೊಂದನ್ನೇ ಪ್ರಸಾರ ಮಾಡಿತ್ತು. ಇದನ್ನು ನೋಡಿ ಕೆರಳಿದ್ದ ರಮ್ಯಾ ಚಾನೆಲ್ ವಿರುದ್ಧ ಮಾನಹಾನಿ ಕೇಸ್ ಜಡಿದಿದ್ದರು. ಪ್ರಕರಣದ ಸಂಭಂದ ಕೂಲಂಕುಷವಾಗಿ ವಿಚಾರಣೆ ನಡೆಸಿದ ನ್ಯಾಯಾಲಯ ಸ್ಪಾಟ್ ಫಿಕ್ಸಿಂಗ್‌‌ನಲ್ಲಿ ರಮ್ಯಾ ಭಾಗಿಯಾಗಿದ್ದಾರೆ ಎಂದು ಬಿಂಬಿಸುವ ಯಾವುದೇ ಕಾರ್ಯಕ್ರಮವನ್ನು ಪ್ರಸಾರ ಮಾಡದಂತೆ ಸುದ್ದಿವಾಹಿನಿಗೆ ತಾಕೀತು ನೀಡಿದೆ. ಜೊತೆಗೆ ಮಾಡಿದ ತಪ್ಪಿಗೆ 50 ಲಕ್ಷ ದಂಡವನ್ನು ಕಟ್ಟಿ ಎಂದು ಆದೇಶಿಸಿದೆ.

ಸುವರ್ಣ ನ್ಯೂಸ್ 2013 ಮೇ ತಿಂಗಳಲ್ಲಿ ಕನ್ನಡದ ನಟಿಯೊಬ್ಬರು ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಿತ್ತು. ಆ ಕಾರ್ಯಕ್ರಮದಲ್ಲಿ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ರಾಯಭಾರಿಯಾಗಿದ್ದ ರಮ್ಯಾ ಅವರ ಫೋಟೊವನ್ನು ತೋರಿಸಲಾಗಿತ್ತು. “ತಾನು ಮ್ಯಾಚ್ ಫಿಕ್ಸಿನ್ಗ್ ನಲ್ಲಿ ಭಾಗಿಯಾಗಿದ್ದೇನೆ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಕ್ಕೆ” ರಮ್ಯಾ ಸುವರ್ಣವಾಹಿನಿ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top